ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಕಲ್ಪಿಸಿ; ಎಸ್‍ಡಿಪಿಐ ಆಗ್ರಹ
ಮೈಸೂರು

ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಕಲ್ಪಿಸಿ; ಎಸ್‍ಡಿಪಿಐ ಆಗ್ರಹ

January 23, 2022

ಮೈಸೂರು,ಜ.22(ಪಿಎಂ)- ಮೂಲಭೂತ ಸೌಕರ್ಯ, ಗುಣ ಮಟ್ಟದ ಶಿಕ್ಷಣವಿಲ್ಲದೆ, ರಾಜ್ಯದ ಸರ್ಕಾರಿ ಶಾಲೆಗಳು ದುಸ್ಥಿತಿ ಯಲ್ಲಿದ್ದು, ಇವುಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮುಂದಿನ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಕಲ್ಪಿಸಿ, ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಬೆಳೆಸಬೇಕು. ಅಗತ್ಯವಾದರೆ ದೆಹಲಿ ಸರ್ಕಾ ರದ ಮಾದರಿ ಅನುಸರಿಸಬೇಕು ಎಂದು ಸೋಷಿಯಲ್ ಡೆಮಾ ಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಆಗ್ರಹಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ರಫತ್‍ಖಾನ್, ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿರುವ ಕಾರಣ ಸಾಲ ಮಾಡಿ ಯಾದರೂ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಮುಂದಾಗುವ ಪರಿಸ್ಥಿತಿ ರಾಜ್ಯದಲ್ಲಿದೆ. ಇಂತಹ ಸ್ಥಿತಿ ನಿವಾರಿಸಿ, ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಸರ್ಕಾರಿ ಶಾಲೆಗಳಿಗೆ ಅತ್ಯಾಧುನಿಕ ಮೂಲಭೂತ ಸೌಲಭ್ಯ ಕಲ್ಪಿಸಿ, ಅಭಿವೃದ್ಧಿಗೊಳಿಸಬೇಕು. ಈ ನಿಟ್ಟಿನಲ್ಲಿ ಮುಂದಿನ ಬಜೆಟ್‍ನಲ್ಲಿ ಅಗತ್ಯ ಅನುದಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಮರ್ಪಕ ಆಟದ ಮೈದಾನ, ಪೀಠೋಪಕರಣಗಳು ಸರ್ಕಾರಿ ಶಾಲೆಗಳಿಗೆ ಮರೀಚಿಕೆಯಾಗಿದ್ದು, ಸ್ವಚ್ಛ ಮತ್ತು ಉತ್ತಮವಾಗಿ ನಿರ್ವಹಣೆಯಲ್ಲಿರುವ ಶೌಚಾಲಯಗಳೂ ಇಲ್ಲವಾಗಿವೆ. ಇಂತಹ ಪರಿಸ್ಥಿತಿ ಇದ್ದರೂ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈಗಲಾದರೂ ಸರ್ಕಾರ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗಮನ ನೀಡಬೇಕು. ಅಗತ್ಯವಾದರೆ ದೆಹಲಿ ಸರ್ಕಾರ ತನ್ನ ಶಾಲೆಗಳ ಅಭಿವೃದ್ಧಿಗೆ ಅನುಸರಿಸಿದ ಕ್ರಮಗಳನ್ನು ಇಲ್ಲಿಯೂ ಕೈಗೊಳ್ಳಬೇಕು ಎಂದು ಹೇಳಿದರು.
ಇಡೀ ದೇಶದಲ್ಲಿ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ದೊರೆ ಯುವಂತಾಗಬೇಕು. ಸರ್ಕಾರ ಖಾಸಗೀಕರಣಕ್ಕೆ ಮಣೆ ಹಾಕಿ, ಅದಾನಿ, ಅಂಬಾನಿಯಂತಹ ಉದ್ಯಮಿಗಳಿಗೆ ಸಾರ್ವಜನಿಕ ಉದ್ದಿಮೆಗಳನ್ನು ನೀಡುತ್ತಿದೆ. ಅಂತೆಯೇ ಈ ಉದ್ಯಮಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಲು ಸರ್ಕಾರ ಕ್ರಮ ವಹಿಸಬೇಕು. ದೇಶ ಮತ್ತು ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿಯೂ ಶೋಚನೀಯವಾಗಿದ್ದು, ಮೂಲಭೂತ ಸೌಲಭ್ಯಗಳು ಇಲ್ಲವಾಗಿದೆ. ಇದರಿಂದ ಬಡ ಕುಟುಂಬಗಳೂ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಪಡೆಯಲು ಪರದಾಡುವಂತಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸಫಿಉಲ್ಲಾ ಮಾತ ನಾಡಿ, ಮೈಸೂರಿನ ವೀರನಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ವೈದ್ಯರಿದ್ದು, ಸಾರ್ವಜನಿಕರಿಗೆ ಸಮರ್ಪಕ ಸೇವೆ ದೊರೆಯ ದಾಗಿದೆ. ಇಲ್ಲಿಗೆ ದಿನಕ್ಕೆ 200ರಿಂದ 300 ಮಂದಿ ರೋಗಿಗಳು ಭೇಟಿ ನೀಡುತ್ತಿದ್ದು, ಈ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರ ವಾಗಿ ಮೇಲ್ದರ್ಜೆಗೇರಿಸಿ, ಸೂಕ್ತ ಮೂಲಭೂತ ಸೌಲಭ್ಯ ಕಲ್ಪಿಸ ಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಉಪಾಧ್ಯಕ್ಷ ಎಸ್.ಸ್ವಾಮಿ, ಮುಖಂಡ ಉಮರ್ ಷರೀಫ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »