ಡಿಸಿ, ಎಡಿಸಿ ಸೇರಿ ಕಚೇರಿಯ ಶೇ.80ರಷ್ಟು ಸಿಬ್ಬಂದಿಗೆ ಕೊರೊನಾ
ಮೈಸೂರು

ಡಿಸಿ, ಎಡಿಸಿ ಸೇರಿ ಕಚೇರಿಯ ಶೇ.80ರಷ್ಟು ಸಿಬ್ಬಂದಿಗೆ ಕೊರೊನಾ

January 23, 2022

ಮೈಸೂರು, ಜ.229ಆರ್‍ಕೆ)-ಮೈಸೂರಿನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಎಡಿಸಿ ಮಂಜುನಾಥಸ್ವಾಮಿ, ಇತರ ಅಧೀನಾಧಿಕಾರಿ ಗಳು ಸೇರಿದಂತೆ ಕಚೇರಿಯ ಶೇ.80ರಷ್ಟು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕಳೆದ ನಾಲ್ಕು ದಿನಗಳಿಂದ ಕಚೇರಿ ಸಿಬ್ಬಂ ದಿಗೆ ಸೋಂಕು ತಗುಲಿದ್ದರಿಂದ ಡಿಸಿ, ಎಡಿಸಿ ಸೇರಿದಂತೆ ಸೋಂಕಿತರೆಲ್ಲಾ ಮನೆಗಳಲ್ಲಿ ಪ್ರತ್ಯೇಕ ವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರಿಗೆ ಶೀತ, ನೆಗಡಿ, ಕೆಮ್ಮು, ಜ್ವರದಂತಹ ರೋಗ ಲಕ್ಷಣಗಳೂ ಇರುವುದರಿಂದ ಶುಕ್ರವಾರ (ಜ.21) ಡಿಸಿ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ಡಾ. ಬಗಾದಿ ಗೌತಮ್ ತಿಳಿಸಿದರು.

ಶನಿವಾರ ಮತ್ತು ಭಾನುವಾರ ರಜಾ ದಿನವಾಗಿ ರುವುದರಿಂದ ಸೋಮವಾರ (ಜ.24) ಕಚೇರಿ ಪುನಾರಂಭಿಸುತ್ತೇವೆ. ಅದಕ್ಕಾಗಿ ಇಡೀ ಕಚೇರಿ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗಿದೆ. ಅಧಿಕಾರಿ ಗಳು, ಸಿಬ್ಬಂದಿ ಸಹ ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದರು. ಕಚೇರಿಯಲ್ಲಿ 37 ಮಂದಿ ಖಾಯಂ ಸಿಬ್ಬಂದಿಗಳಿದ್ದು, 30ಕ್ಕೂ ಹೆಚ್ಚು ಗುತ್ತಿಗೆ ನೌಕರರಿದ್ದಾರೆ. ಆ ಪೈಕಿ ಶೇ.80ರಷ್ಟು ಮಂದಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಮುಂಜಾಗ್ರತೆ ಗಾಗಿ ಕಚೇರಿಯನ್ನು ಸೀಲ್‍ಡೌನ್ ಮಾಡಿ ಅಗತ್ಯ ಸುರಕ್ಷತಾ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

Translate »