ಮಾನವದಿನ ಬಳಕೆಯಲ್ಲಿ ಹುಣಸೂರು ಪ್ರಥಮ
ಮೈಸೂರು

ಮಾನವದಿನ ಬಳಕೆಯಲ್ಲಿ ಹುಣಸೂರು ಪ್ರಥಮ

June 1, 2020

ಮೈಸೂರು, ಮೇ 31(ಎಸ್‍ಪಿಎನ್)- ಲಾಕ್‍ಡೌನ್ ನಡುವೆಯೇ, ಏ.1ರಿಂದ ಮೇ 29ವರೆಗೆ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನರೇಗಾ ಯೋಜ ನೆಯ ವಿವಿಧ ಕಾಮಗಾರಿಗಳಲ್ಲಿ 4,56,063 ಮಾನವ ದಿನಗಳು (ಉದ್ಯೋಗ ಖಾತರಿಗೆ) ಬಳಕೆಯಾಗಿವೆ.

ಇದರಲ್ಲಿ 1,10,690 ಮಾನವದಿನಗಳನ್ನು ಬಳಸಿ ರುವ ಹುಣಸೂರು ತಾಲೂಕು ಆಡಳಿತ ಮೊದಲ ಸ್ಥಾನದಲ್ಲಿದ್ದರೆ, 21,513 ಮಾನವದಿನಗಳನ್ನು ಬಳಸಿದ ಸರಗೂರು ತಾಲೂಕು ಆಡಳಿತ ಕೊನೆ ಸ್ಥಾನ ಪಡೆದಿದೆ.

71,671 ಮಾನವದಿನ ಬಳಸಿದ ಪಿರಿಯಾಪಟ್ಟಣ 2ನೇ ಸ್ಥಾನ, 63,110 ಮಾನವದಿನ ಬಳಕೆ ಮಾಡಿ ರುವ ತಿ.ನರಸೀಪುರ 3ನೇ ಸ್ಥಾನ, 54,408 ಮಾನವ ದಿನಗಳನ್ನು ಬಳಸಿಕೊಂಡಿರುವ ಕೆ.ಆರ್.ನಗರ 4ನೇ ಸ್ಥಾನ, 50,753 ಮಾನವದಿನಗಳನ್ನು ಬಳಸಿಕೊಳ್ಳುವ ಮೂಲಕ ನಂಜನಗೂಡು 5ನೇ ಸ್ಥಾನ, 44,876 ಮಾನವ ದಿನಗಳನ್ನು ಬಳಸಿಕೊಳ್ಳುವ ಮೂಲಕ ಹೆಚ್.ಡಿ.ಕೋಟೆ 6ನೇ ಸ್ಥಾನ, 39,042 ಮಾನವ ದಿನಗಳನ್ನು ಬಳಸಿಕೊಳ್ಳುವ ಮೂಲಕ ಮೈಸೂರು ತಾಲೂಕು 7ನೇ ಸ್ಥಾನದಲ್ಲಿದೆ.

51,271 ಸದಸ್ಯರಿಗೆ ಪ್ರಯೋಜನ: ನರೇಗಾ ಯೋಜನೆ ಯಡಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಒಟ್ಟು 103 ಕೋಟಿ ರೂ. ಅನುದಾನ ಕೇಂದ್ರ ಸರ್ಕಾರದಿಂದ ಮೈಸೂರು ಜಿಲ್ಲೆಗೆ ಹಂಚಿಕೆಯಾಗಿದೆ. ಈ ಯೋಜನೆ ಯಡಿ 27,105 ಕುಟುಂಬಗಳಲ್ಲಿ ಒಟ್ಟು 51,271 ಸದಸ್ಯರು ಜಾಬ್ ಕಾರ್ಡ್ ಪಡೆದು, ಉದ್ಯೋಗದ ಪ್ರಯೋ ಜನ ಪಡೆದಿದ್ದಾರೆ. ಇದರಲ್ಲಿ 2 ಕುಟುಂಬಗಳು 100 ದಿನಗಳ ಉದ್ಯೋಗ ಅವಧಿ ಪೂರೈಸಿದ್ದು, ಈ ಕುಟುಂಬ ಗಳಿಗೆ ಇನ್ನೂ 50 ದಿನಗಳ ಉದ್ಯೋಗ ಹಂಚಿಕೆ ಮಾಡ ಲಾಗಿದೆ. ಅಲ್ಲದೆ, ಈ ಬಾರಿ ಹೊಸದಾಗಿ 17 ಸಾವಿರಕ್ಕೂ ಹೆಚ್ಚು ಜಾಬ್‍ಕಾರ್ಡ್‍ಗಳನ್ನು ಮೈಸೂರು ಜಿಲ್ಲೆಯಲ್ಲಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಮೈಸೂರು ನಗರದಂಚಿನ ಶ್ರೀರಾಂಪುರ, ಹಿನಕಲ್, ಬೋಗಾದಿ ಮತ್ತಿತರ ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಯಾರೂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿಲ್ಲ. ಹಾಗಾಗಿ ಮೈಸೂರು ತಾಲೂಕು ನರೇಗಾ ಅನುದಾನ ಬಳಕೆಯಲ್ಲಿ ಕೊನೆ ಸ್ಥಾನದಲ್ಲಿದೆ ಎಂದರು.

44 ಲಕ್ಷ ರೂ. ಕ್ರಿಯಾಯೋಜನೆ: ದೇವಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು 44 ಲಕ್ಷ ರೂ. (10,051 ಮಾನವದಿನ) ಕ್ರಿಯಾ ಯೋಜನೆ ರೂಪಿಸ ಲಾಗಿದೆ. ನರೇಗಾದಲ್ಲಿ ಜಲಾಮೃತ ಯೋಜನೆಗೆ 6.24 ಲಕ್ಷ ರೂ., ರೈತ ಜಮೀನು ಅಭಿವೃದ್ಧಿ ಕೆಲಸಗಳಿಗೆ 13.64 ಲಕ್ಷ ರೂ., ಗ್ರಾಮೀಣಾಭಿವೃದ್ಧಿ ಹಾಗೂ ನೈರ್ಮಲ್ಯ ವ್ಯವಸ್ಥೆಗೆ 11.54 ಲಕ್ಷ ಹಾಗೂ ಇತರೆ ಯೋಜನೆಗಳಿಗೆ 5.4 ಲಕ್ಷ ರೂ.ಗಳ ಕ್ರಿಯಾ ಯೋಜನೆ ರೂಪಿಸಿ, ನರೇಗಾ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರಿಗೆ ಕೆಲಸ ವಿಂಗಡಿಸಲಾಗಿದೆ. ಕಾಮಗಾರಿ ಮುಗಿದ ತಕ್ಷಣ ಹಣ ಕಾರ್ಮಿಕರ ಖಾತೆಗೆ ಜಮೆಯಾಗುತ್ತದೆ ಎಂದು ಪಿಡಿಒ ಪುಷ್ಪಾಬಾಯಿ ಮಾಹಿತಿ ನೀಡಿದರು.

ಆಯರಹಳ್ಳಿ ರೈತ ಬುತ್ತಿ ಮಹದೇವಸ್ವಾಮಿ ಎಂಬ ವರ ಹೊಲದಲ್ಲಿ ಈ ಸಾಲಿನ ಕೃಷಿ ಹೊಂಡ ಕಾಮಗಾರಿ ಆರಂಭವಾಗಿದೆ. ನಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇನ್ನೂ 4 ಕೃಷಿ ಹೊಂಡಗಳ ಕಾಮಗಾರಿ ಆರಂಭವಾಗ ಬೇಕಿದೆ. ರೈತರ ಜಮೀನಿನಲ್ಲಿ `ಬದು ನಿರ್ಮಾಣ’, `ನಮ್ಮ ಹೊಲ, ನಮ್ಮ ದಾರಿ’, ಜಾಬ್ ಕಾರ್ಡ್ ಹೊಂದಿರುವ ರೈತರ ಜಮೀನಿನಲ್ಲಿ ತೆಂಗಿನ ಸಸಿ, ಬಾಳೆಗಿಡ ನೆಡುವ ಕೆಲಸಗಳು ಆರಂಭವಾಗಬೇಕಿದೆ ಎಂದು ಮಾಹಿತಿ ನೀಡಿದರು.

Translate »