ನಾಮದ ಬಲ ಮತ್ತು ಪಾದಪೂಜೆಯ ಮಹತ್ವ
ಮೈಸೂರು

ನಾಮದ ಬಲ ಮತ್ತು ಪಾದಪೂಜೆಯ ಮಹತ್ವ

April 29, 2021

`ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ’ ಎನ್ನುವ ಪುರಂದರ ದಾಸರ ಹಾಡನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಇದು `ನಾಮದ ಮಹತ್ವವನ್ನು’ ತಿಳಿಸುವ ಸಲುವಾಗಿ ಬರೆದ ಹಾಡು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಮತ್ತು ಇದು ಸರಳವಾಗಿಯೂ ಇದೆ. ಅಂದರೆ ದೊಡ್ಡ ಮನುಷ್ಯರಿಗಿಂತ, ಅವರ ಹೆಸರನ್ನು ಹೇಳಿದರೇ ನಮ್ಮ ಕೆಲಸ ಬೇಗನೇ ಆಗಿ ಬಿಡುತ್ತದೆ. ಹೀಗಾಗಿ ನಮ್ಮ ಕೆಲಸಗಳನ್ನು ಅಧಿಕಾರಿಗಳಿಂದ ಬೇಗನೇ ಮಾಡಿಸಿಕೊಂಡು ಇಂದಿಗೂ ನಾವು ಬೀಗುತ್ತೇವೆ.

ನಾಮವು ಶ್ರೀ ವೈಷ್ಣವರ ಸಂಕೇತ. ಇದು ಪವಿತ್ರವಾದುದರಿಂದ ಇದನ್ನು `ತಿರುನಾಮ’ವೆಂದು ಕರೆಯುವ ಪದ್ಧತಿಯೂ ಪ್ರಾರಂಭವಾಯಿತು. ತಮಿಳುನಾಡಿನ ಆಳ್ವಾರುಗಳು ಈ ಪವಿತ್ರ ನಾಮ ಗಳನ್ನು ಆರಂಭಿಸಿದವರೆಂದೂ ಭಾವಿಸಲಾಗಿದೆ. ಆದರೆ ಈ ಶ್ರೇಷ್ಠ ಭಕ್ತಿ ಮಾರ್ಗದ ಪ್ರವರ್ತಕರಾದ ಶ್ರೀರಾಮಾನುಜಾಚಾರ್ಯರ ಕಾಲದಿಂದ ನಾಮವು ಜನಪ್ರಿಯವಾಯಿತೆಂದು ಹೇಳಲಾಗುತ್ತದೆ. ಅನೇಕ ಶ್ರೀ ವೈಷ್ಣವರ ಪ್ರಕಾರ ಈ ನಾಮಗಳನ್ನು `ಊಧ್ರ್ವ ಪುಂಡ್ರ’ ಎಂದೂ ಕರೆಯಲಾಗುತ್ತದೆ ಮತ್ತು ಶ್ರೀ ಮಹಾವಿಷ್ಣುವಿನ ಎರಡು ಪವಿತ್ರ ಪಾದಗಳೂ ಎಂದು ಭಾವಿಸಲಾಗುತ್ತದೆ.
ಶ್ರೀರಾಮಾನುಜಾಚಾರ್ಯರು ಈ ಪವಿತ್ರ ಬಿಳಿಯ ಮಣ್ಣಿಗಾಗಿ (ತಿರುಮಣ್) ಶೋಧನೆ ನಡೆಸುತ್ತಿದ್ದಾಗ, ಇದು ಮೇಲುಕೋಟೆಯಲ್ಲಿ ದೊರೆಯುತ್ತದೆ ಎಂದು ತಿಳಿದು ಬಂದಿತು. ಹೀಗಾಗಿ ಶ್ರೀರಾಮಾನುಜಾ ಚಾರ್ಯರು ಮೇಲುಕೋಟೆಯಲ್ಲೇ ನೆಲೆಸಿದ್ದು, ನಂತರ ಶ್ರೀರಂಗಂಗೆ ಹೋದರೆಂದೂ ಭಾವಿಸಲಾಗಿದೆ. ಶ್ರೀರಂಗಪಟ್ಟಣವು, ಮೈಸೂರಿಗೆ ಸಮೀಪದಲ್ಲಿರುವ ಶ್ರೀ ವೈಷ್ಣವ ಕ್ಷೇತ್ರ. ಇಲ್ಲಿನ ಶ್ರೀ ವೈಷ್ಣವರು ಪವಿತ್ರವಾದ ನಾಮವನ್ನು ಹಣೆಗೆ ಹಚ್ಚಿಕೊಂಡು, ರಂಗನಾಥ ಸ್ವಾಮಿಯನ್ನು ಪೂಜಿಸುತ್ತಿದ್ದರು. ಕೆಲವು ಕಿಡಿಗೇಡಿ ಗಳು, ಈ ನಾಮವನ್ನು ನೆಕ್ಕಿ, ಅವರನ್ನು ಅಪವಿತ್ರ ಗೊಳಿಸುತ್ತಿದ್ದರು. ಅವರು ಅಲ್ಲಿನ ದೊರೆಗೆ ದೂರು ನೀಡಿದರೂ, ಏನೂ ಉಪಯೋಗವಾಗಲಿಲ್ಲ. ಆಗ ಅವರು ಶ್ರೀರಂಗಪಟ್ಟಣದ ಮುಖ್ಯ ಗೌಡನಿಗೆ ದೂರು ನೀಡಿದರು. ನಾವು ಭಗವಂತನಾದ ನರಸಿಂಹ ಸ್ವಾಮಿಯ ಭಕ್ತರು; ಆದುದರಿಂದ ನಮ್ಮ ನಾಮಗಳನ್ನು ನೆಕ್ಕಿದರೆ ಅವರು ಸಾಯುತ್ತಾರೆ ಎಂದು ಗೌಡನು ತಿಳಿಸಿದನು.

ದೊರೆಯು ಯಾವ ವಿಷಯವನ್ನೂ ಪರಿಶೀಲಿ ಸದೆ, ನಾಮದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮೈಲುತುತ್ತ (ಕಾಪರ್ ಸಲ್ಫೇಟ್) ತೆಗೆದುಕೊಂಡರೆ, ಅವರು ಸಾಯುವುದಿಲ್ಲ. ಕೇವಲ ವಾಂತಿ ಮಾಡಿಕೊಳ್ಳು ತ್ತಾರೆ. ಇದೇ ಸರಿಯಾದ ಮಾರ್ಗವೆಂದು ತೀರ್ಮಾನ ಮಾಡಲಾಯಿತು. ಇದಕ್ಕೆ ಒಂದು ಹಿನ್ನೆಲೆಯೂ ಇದೆ. ಹೈದರಾಬಾದ್ ನಿeóÁಮನು ಪಾಕಿಸ್ತಾನಕ್ಕೆ ಸೇರಲು ಹವಣಿಸುತ್ತಿದ್ದನು. ಇವನಿಗೆ ಸಹಾಯಕರಾಗಿ ಕಾಜಿûಂ ರಜಿû್ವ ನೇತೃತ್ವದಲ್ಲಿ, ರeóÁಕರ್ ಎಂಬ ಗುಂಪು ಸಿದ್ಧವಾಯಿತು.

ಸರ್ದಾರ್ ಪಟೇಲರು, ಕೆ.ಎಂ.ಮುನ್ಷಿಯವರನ್ನು ಹೈದರಾಬಾದಿನ `ಏಜೆಂಟ್ ಜನರಲ್’ ಆಗಿ ನೇಮಿಸಿ ದರು. ಮುನ್ಷಿಯವರಿಗೆ ರeóÁಕರ್ ಅವರನ್ನು ಶಿಕ್ಷಿಸಲು ಸ್ವಾತಂತ್ರ್ಯ ನೀಡಲಾಯಿತು. ರeóÁಕರ್ ಜೊತೆಗೆ `ಇತ್ತೆ ಹಾದ್’ ಗುಂಪಿನವರೂ ಸೇರಿ ಕೊಂಡರು. ಕೊನೆಗೆ ರeóÁಕರ್ ಗುಂಪಿನವರನ್ನು ನಾಶ ಮಾಡಲಾಯಿತು.

ಇವರು ಹೈದರಾಬಾದಿನಲ್ಲಿ ವಾಸವಾಗಿದ್ದ ಶ್ರೀ ವೈಷ್ಣವರನ್ನು ತೊಂದರೆಗೆ ಈಡು ಮಾಡುತ್ತಿದ್ದರು. ಈ ರeóÁಕರ್ ಜನಗಳು ಶ್ರೀ ವೈಷ್ಣವರ ನಾಮವನ್ನು ನೆಕ್ಕುತ್ತಿದ್ದರು. ಅವರೆಲ್ಲರೂ, ಅಹೋಬಲ ಮಠದ ಸ್ವಾಮಿಗಳಿಗೆ ದೂರು ನೀಡಿದರು. ಹಿಂದೆ ಹೇಳಿದಂತೆ ಅವರೆಲ್ಲರೂ, ನಮ್ಮ ನಾಮವನ್ನು ನೆಕ್ಕಿ ವಾಂತಿ ಮಾಡಿಕೊಂಡರು. ಆದರೆ ಸಾಯಲಿಲ್ಲ. ಯಾರನ್ನೂ ಸಾಯಿಸುವ ಹಕ್ಕು ಮಾನವರಿಗೆ ಇಲ್ಲವೇ ಇಲ್ಲ ಎಂದು ಭಾವಿಸಿದ್ದರು.
ಮಾರನೆಯ ಬೆಳಿಗ್ಗೆ, ಶ್ರೀ ವೈಷ್ಣವರು ನಾಮವನ್ನು ಹಾಕಿಕೊಂಡು ದೇವಾಲಯಗಳಿಗೆ ತೆರಳಿದರು. ನಾಮವನ್ನು ನೆಕ್ಕಿದ ರeóÁಕರ್ ಗುಂಪಿನವರಿಗೆ ಗಾಬರಿಯಾಯಿತು. ನಾಮದಲ್ಲಿ ಏನೋ ಶಕ್ತಿಯಿದೆ; ಆದುದರಿಂದ ರeóÁಕರರು ನಾಮವನ್ನು ನೆಕ್ಕ ಬಾರದು ಎಂದು ತೀರ್ಮಾನಿಸಿದರು. ಇದೇ ರೀತಿಯ ಘಟನೆಯೊಂದು ವಾರಾಣಸಿಯಲ್ಲೂ (ಕಾಶಿ) ಒಂದು ಶತಮಾನದ ಹಿಂದೆ ನಡೆಯಿ ತೆಂದು ಹೇಳಲಾಗುತ್ತದೆ. ಅಲ್ಲಿರುವ ಪವಿತ್ರ `ಸಂಕಟ ಮೋಚನ ಹನುಮಾನ್’ ದೇಗುಲವಿದೆ. ಆ ದೇವಾಲಯದ `ಮಹಾಂತನು (ಪುರೋಹಿತ) ಭಕ್ತರ ಹಣೆಗೆ `ಸಿಂಧೂರ’ ವನ್ನು ಹಚ್ಚುತ್ತಿದ್ದನು. ಇದು ಬಹಳ ಜನಪ್ರಿಯವಾಗಿ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯದಲ್ಲಿ ಸೇರುತ್ತಿದ್ದರು. ಇದನ್ನು ವಿರೋಧಿ ಸುವ ಗುಂಪಿನವರಿಗೆ ಸಿಂಧೂರವನ್ನು ಹಚ್ಚುವುದು ಅವರ ಗಮನಕ್ಕೆ ಬಂದಿತು. ಕೂಡಲೇ ಭಕ್ತರ ಗುಂಪಿನ ಮುಖಂಡನು ಸಿಂಧೂರಕ್ಕೆ ಸಣ್ಣ ಪ್ರಮಾಣದಲ್ಲಿ ವಿಷವನ್ನು ಬೆರಸಿದರೆ, ಅಂತಹವರು ಅಸ್ವಸ್ಥರಾಗು ತ್ತಾರೆ, ಆದರೆ ಮರಣ ಹೊಂದುವುದಿಲ್ಲ ಎಂದು ತೀರ್ಮಾನಿಸಲಾಯಿತು. ಅದನ್ನು ನೆಕ್ಕಿದ ರeóÁಕರ್ ಗುಂಪಿನವರು ಅಸ್ವಸ್ಥರಾದರು; ಆದರೆ ಸಾಯಲಿಲ್ಲ. ಹೀಗಾಗಿ, ಈ ಪದ್ಧತಿಯು ಜನಪ್ರಿಯವಾಯಿತು. ಮತ್ತು ಜನಗಳು ಗುಂಪು-ಗುಂಪಾಗಿ ಈ ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡಿ ಪುನೀತರಾದೆ ವೆಂಬ ಭಾವನೆಯಿಂದ ಧನ್ಯರಾಗುತ್ತಿದ್ದರು.

ದುರದೃಷ್ಟವಶಾತ್, ಸಾಮಾಜಿಕ ವಿರೋಧಿಗಳಿಗೆ ಇದೊಂದು ಅಸ್ತ್ರವಾಯಿತು. ಅವರು ಮತ್ತೆ ಸಿಂಧೂರ ವನ್ನು ನೆಕ್ಕಲು ಪ್ರಾರಂಭಿಸಿದರು. ಭಕ್ತರು ಆತಂಕಕ್ಕೊಳ ಗಾದರು. ಆ ಊರಿನ ಹಿರಿಯರು ಸಿಂಧೂರಕ್ಕೆ ಸ್ವಲ್ಪ ವಿಷವನ್ನು ಬೆರೆಸಲು ಆರಂಭಿಸಿದರು. ಮತ್ತೆ ಅದನ್ನು ನೆಕ್ಕಿದವರು ಮೂರ್ಛೆ ಹೋದರು. ಮತ್ತೆ ಸ್ವಲ್ಪ ಸಮಯದ ನಂತರ ಎಚ್ಚರಗೊಂಡರು. ತಕ್ಷಣವೇ ವಿರೋಧಿಗಳು, ಮತ್ತೆ ಇಂತಹ ಕೆಲಸವನ್ನು ಮಾಡಲಿಲ್ಲ. ಈ ರೀತಿ ಭಕ್ತರು ದೇಶಾದ್ಯಂತ ಚಾಕಚಕ್ಯತೆ ಯಿಂದ ವಿರೋಧಿಗಳ ಕಾಟದಿಂದ ತಪ್ಪಿಸಿಕೊಂಡರು. ಈ ಮೇಲಿನ ಸಂಗತಿ ಗಳೆಲ್ಲವೂ ಜಾನಪದದ ಹಾಡುಗಳಾಗಿ ಇಂದಿಗೂ ಆ ಗ್ರಾಮಗಳ ಜನರು ಹಾಡುತ್ತಿರುತ್ತಾರೆ.

ಇನ್ನು ಪಾದಪೂಜೆಯ ಮಹತ್ವವನ್ನು ಗಮನಿಸ ಬಹುದು. ಸಾಧು-ಸಂತರ ಪಾದಗಳನ್ನು ನೀರಿ ನಿಂದ ತೊಳೆಯುವ ಪದ್ಧತಿ ಪ್ರಾಚೀನ ಕಾಲ ದಿಂದಲೂ ಚಾಲ್ತಿಯಲ್ಲಿದೆ. ಇದನ್ನು ವಿಶೇಷವಾಗಿ ನಾವು ಪುರಾಣ ಹಾಗೂ ಮಹಾಕಾವ್ಯಗಳಲ್ಲಿ ಕಾಣುತ್ತೇವೆ. ಈ ಪದ್ಧತಿಯು ಬೇರೆ ದೇಶದ ಸಂಸ್ಕøತಿ ಯಲ್ಲಿ ಕಾಣಬರುವುದಿಲ್ಲ. ಪಾದಪೂಜೆಯು ಯಾವ ಕಾಲದಲ್ಲಿ ಪ್ರಚಲಿತವಾಗಿದ್ದಿತು ಎಂದು ಹೇಳುವುದು ಕಷ್ಟ. ಒಂದು ಊಹೆಯ ಪ್ರಕಾರ ಇದು ವೈದಿಕ ಕಾಲದಲ್ಲಿತ್ತು ಮತ್ತು ಸುಮಾರು ಇದರ ಪ್ರಾಚೀನತೆ ಇಂದಿಗೆ ನಾಲ್ಕು ಸಾವಿರ ವರ್ಷಗಳು ಎಂದು ಅಂದಾಜು ಮಾಡಲಾಗಿದೆ.
ಪ್ರಾಚೀನ ಋಷಿಗಳ ಆಶ್ರಮಕ್ಕೆ ಬಂದಾಗ, ಅವರಿಗೆ ಸ್ವಾಗತವನ್ನು ಕೋರುವ ಸಲುವಾಗಿ, ಆಶ್ರಮದ ಪ್ರವೇಶ ದ್ವಾರದಲ್ಲಿ ಋಷಿಗಳ ಪಾದಗಳನ್ನು ತೊಳೆ ಯುತ್ತಿದ್ದರು. ರಾಜತ್ವವು ಅಭಿವೃದ್ಧಿ ಹೊಂದಿದ ಮೇಲೆ, ವೈಭವದ ರೀತಿಯಲ್ಲಿ ಮಹರ್ಷಿಗಳಾದ ವಸಿಷ್ಠ, ವಿಶ್ವಾಮಿತ್ರ, ಭಾರದ್ವಾಜ, ಕೌಶಿಕ ಮುಂತಾ ದವರ ಪಾದಗಳನ್ನು ನೀರಿನಿಂದ ತೊಳೆಯುವ ಕಾರ್ಯ ಆರಂಭವಾಯಿತು. ಮಹಾಕಾವ್ಯಗಳು ಈ ವಿಷಯವನ್ನು ವಿವರವಾಗಿ ವರ್ಣಿಸುತ್ತವೆ. ರಾಜನ ಪರಿಚಾರಿಕೆಯರು ಚಿನ್ನದ ಕೊಡಗಳಲ್ಲಿ ಶುದ್ಧವಾದ ನೀರನ್ನು ತುಂಬಿಕೊಂಡು, ಮಹರ್ಷಿ ಗಳ ಪಾದಗಳನ್ನು ತೊಳೆಯುತ್ತಿದ್ದರು. ಆನಂತರ ಮಹರ್ಷಿಗಳ ಪಾದಗಳನ್ನು ಚಿನ್ನದ ತಟ್ಟೆಯಲ್ಲಿಟ್ಟು, ಪಾದಗಳನ್ನು ತೊಳೆದ ತೀರ್ಥದಿಂದ, ಅಲ್ಲಿದ್ದ ಎಲ್ಲ ಋಷಿ-ಮುನಿಗಳು ತಲೆಗೆ ಪ್ರೋಕ್ಷಿಸುತ್ತಿದ್ದರು.

ರಾಜಸೂಯ, ಅಶ್ವಮೇಧ ಹಾಗೂ ವಾಜಪೇಯ ಯಜ್ಞಗಳಲ್ಲಿ ಅಭಿಷೇಕವನ್ನು ಮಾಡುತ್ತಿದ್ದುದನ್ನು ಪುರಾಣಗಳು ಹಾಗೂ ಮಹಾಕಾವ್ಯಗಳು ವರ್ಣಿಸಿವೆ. ಉದಾಹರಣೆಗೆ ಶ್ರೀಕೃಷ್ಣನನ್ನು ಅಗ್ರಪೂಜೆಗೆ ಅನರ್ಹ ನೆಂದು ಕೌರವರು ಹೇಳಿದ್ದು ಮಹಾಭಾರತದಲ್ಲಿ ವಿವರವಾಗಿ ವರ್ಣಿತವಾಗಿದೆ.
ರಾಜತ್ವವು ಅಭಿವೃದ್ಧಿಯಾದ ಕೂಡಲೇ, `ರಾಜನೇ ದೇವರು’ ಎಂಬ (`ರಾಜಾ ಪ್ರತ್ಯಕ್ಷ ದೇವತಾ’) ಎನ್ನುವ ಭಾವನೆ ಬೇರೂರಿತು. ಹೀಗಾಗಿ ರಾಜನಿಗೆ ಪಾದಗಳನ್ನು ತೊಳೆಯುವುದರ ಮಹತ್ವ ಹೆಚ್ಚಿತು. ಭಕ್ತರಿಗೆ ತಾವು `ದೇವರ ಪಾದಗಳನ್ನೇ’ ತೊಳೆ ಯುತ್ತಿದ್ದೇವೆ ಎನ್ನುವ ಭಾವನೆ ಹೆಚ್ಚಾಯಿತು. ಮಹಾರಾಜರಿಗೆ ಸಾಮಂತರು ಬಹಳ ಭಕ್ತಿಯಿಂದ ಪಾದಪೂಜೆಯನ್ನು ಮಾಡುತ್ತಿದ್ದರು. ಇದನ್ನು ಸ್ಮøತಿ ಎಂಬ ಗ್ರಂಥಗಳು ಕಡ್ಡಾಯವನ್ನಾಗಿ ಮಾಡಿವೆ.

ಸೋತು ಹೋದ ಸಾಮಂತನು, ಮಹಾರಾಜನಿಗೆ ಗೆದ್ದ ಮಹಾರಾಜನ ಹೆಸರಿನಲ್ಲಿ ಹೋಮಗಳನ್ನು ಮಾಡಿಸಬೇಕಾಗಿದ್ದಿತು. ಇದರಲ್ಲಿ ಮುಖ್ಯವಾದುದು ಪಾದ ಪೂಜೆಯೇ ಆಗಿದ್ದಿತು. ಇಲ್ಲಿನ ಪೂಜೆಯು ವಿಶಿಷ್ಟವಾಗಿದ್ದಿತು. ಪಾದವನ್ನು ನೀರಿನಿಂದ ತೊಳೆದ ನಂತರ, ಹಾಲು, ಮೊಸರು, ಜೇನು ತುಪ್ಪ, ಬೆಲ್ಲದ ಚೂರುಗಳು, ಕೊಬ್ಬರಿ ತುರಿ, ಗೇರು ಬೀಜ, ಬಾದಾಮಿ, ದ್ರಾಕ್ಷಿ ಮುಂತಾದವುಗಳನ್ನು ಗೆದ್ದ ರಾಜನ ಪಾದದ ಮೇಲೆ ಇಟ್ಟು, `ಇನ್ನು ಮುಂದೆ ನಿಮ್ಮ ವಿರುದ್ಧ ಯುದ್ಧ ಮಾಡುವುದಿಲ್ಲ’ ಎಂದು ಹೇಳಿ ಈಗಾದ ತಪ್ಪಿಗಾಗಿ ಕ್ಷಮೆಯನ್ನು, ಗೆದ್ದ ರಾಜನಲ್ಲಿ ಕೋರಬೇಕಾಗಿದ್ದಿತು.

ಈ ರೀತಿಯ ಉದಾಹರಣೆಗಳು ನಮ್ಮ ಇತಿಹಾಸದ ಪುಟಗಳಲ್ಲಿ ಕಾಣಸಿಗುತ್ತವೆ. ಕುಲಪತಿ ಮುನ್ಷಿಯವರು `ಪೃಥ್ವೀವಲ್ಲಭ’ ಎನ್ನುವ ಗ್ರಂಥದಲ್ಲಿ ಇದರ ವಿವರಗಳನ್ನು ಒದಗಿಸಿದ್ದಾರೆ. ಚಾಲುಕ್ಯ ತೈಲ (973-997) ಮತ್ತು ಪಾರಮಾರ ಮುಂಜ (974- 995) ಇವರಿಬ್ಬರಿಗೂ ಹಳೆಯ ವೈರತ್ವವಿದ್ದಿತು. ಮುಂಜನು ಚಾಲುಕ್ಯ ರಾಜ್ಯದ ವಿರುದ್ಧ ಅನೇಕ ದಂಡಯಾತ್ರೆಗಳನ್ನು ಮಾಡಿ, ನಾಲ್ಕಾರು ಬಾರಿ ತೈಲನು ಮುಂಜನ ಪಾದಪೂಜೆಯನ್ನು ಸಾವಿರಾರು ಪ್ರಜೆಗಳ ಸಮ್ಮುಖದಲ್ಲಿ ಮಾಡಿದನು. ತೈಲನಿಗೆ ಇದು ಹೀನಾಯವಾದ ಅವಮಾನವಾಗಿದ್ದಿತು.
ಆದರೆ, ಸೇವುಣ ವಂಶದ ದೊರೆ ಭಿಲ್ಲಮನ ಸಹಾಯದಿಂದ ಮುಂಜನನ್ನು ಸೋಲಿಸಿದನು. ಮುಂಜನನ್ನು ಬಂಧಿಯನ್ನಾಗಿ ಮಾಡಿ, ಅವನು ಹಾಕಿಕೊಂಡಿದ್ದ ಚಿನ್ನದ ಎಲ್ಲ ಆಭರಣಗಳನ್ನೂ ತೆಗೆಯಲಾಯಿತು.

ಮುಂಜನು ಉಜ್ಜಯಿನಿಯ ಮಹಾಕಾಳೇಶ್ವರನನ್ನು ಬಿಟ್ಟು ಯಾರಿಗೂ ಪಾದ ಪೂಜೆಯನ್ನು ಮಾಡು ವುದೇ ಇಲ್ಲ ಎಂದನು. ಇದರಿಂದ ಕೋಪಗೊಂಡ ತೈಲನು ಮುಂಜನನ್ನು ಆನೆಯ ಪಾದಗಳಿಂದ ತುಳಿಸಿ ದನು ಮತ್ತು ಮುಂಜನು ಮರಣ ಹೊಂದಿದನು ಮುಂಜನು ಪಾದಪೂಜೆ ಮಾಡುವುದಕ್ಕಿಂತ ಮರಣವೇ ಲೇಸೆಂದು ಭಾವಿಸಿದನು.

ಧಾರ್ಮಿಕ ಜೀವನದಲ್ಲಿ ಪಾದಗಳನ್ನು ತೊಳೆಯುವುದು ಬಹಳ ಸಾಮಾನ್ಯವಾದ ಸಂಗತಿ. ನೂರಾರು ಶಾಸನಗಳು ಪಾದಪೂಜೆಯ ವಿವರಗಳನ್ನು ಒದಗಿಸುತ್ತವೆ. ದೊರೆ ಸಿಂಘಣನು ರುದ್ರ ಶಕ್ತಿ ಎಂಬ ಸಂತನ ಪಾದಗಳನ್ನು ತೊಳೆದ ನಂತರ, ರುದ್ರ ಶಕ್ತಿಗೆ ಭೂ ದಾನವನ್ನು ಮಾಡಿದನೆಂದು 1208ರ ಶಾಸನವು ತಿಳಿಸುತ್ತದೆ. ಪ್ರಾಚೀನ ಕಾಲದಲ್ಲಿ, ಮಠದ ಗುರುಗಳನ್ನು ದೇವರೆಂದೇ ಭಾವಿಸ ಲಾಗಿತ್ತು. ಆದುದರಿಂದ, ಗುರುಗಳನ್ನು ನಡೆದಾಡುವ ಮತ್ತು ಮಾತನಾಡುವ ದೇವರು ಎಂದೇ ಭಾವಿಸಲಾಗಿತ್ತು. ಇಂದಿಗೂ, ಪಾದ ಪೂಜೆಯು ಆಸ್ತಿಕರ ಮನೆಯಲ್ಲಿ ಚಾಲ್ತಿಯಲ್ಲಿದೆ. ಕೆಲವು ಮಠ ದಲ್ಲಿ ಗುರುಗಳ ಕಾಲು ತೊಳೆದು, ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸುವ ಪದ್ಧತಿ ಇಂದಿಗೂ ನಡೆಯುತ್ತಿದೆ. ಮತ್ತೆ ಕೆಲವು ಮಠಗಳಲ್ಲಿ, ಗುರುಗಳ ಪಾದುಕೆಗಳಿಗೆ ಪಾದ ಪೂಜೆಯನ್ನು ಮಾಡುವು ದನ್ನು ಇಂದಿಗೂ ಕಾಣುತ್ತೇವೆ. ಇನ್ನೂ ಕೆಲವು ಮಠಗಳಲ್ಲಿ ಮರದ ಪಾದುಕೆಗಳಿಗೆ ಚಿನ್ನದ ತಗಡು ಗಳನ್ನು ಹಾಕಿರುವುದೂ ಉಂಟು. ಆ ಪಾದುಕೆ ಗಳನ್ನು ಶಿವ ಅಥವಾ ವಿಷ್ಣುವಿನ ಸಂಕೇತವೆಂದೇ ಭಾವಿಸಲಾಗುತ್ತದೆ.

ಈಗ ಬೌದ್ಧರ ಆಚರಣೆಯನ್ನು ಗಮನಿಸಬಹುದು. ಎರಡು ಸಾವಿರ ವರ್ಷಗಳ ಹಿಂದಿನ ಕಾಲದಲ್ಲಿ, ಬುದ್ಧನನ್ನು ಅವನ ಪವಿತ್ರ ಪಾದಗಳಿಂದ ಪೂಜಿಸುವ ಪದ್ಧತಿ ಇದ್ದಿತು. ಹೀನಯಾನ ಧರ್ಮದವರು ಬುದ್ಧನನ್ನು ಪೂಜಿಸುವುದನ್ನು ನಿಷೇಧಿಸಲಾಗಿತ್ತು. ಆದುದರಿಂದ ಬುದ್ಧನ ಸಂಕೇತಗಳಾದ ಪಾದ, ಬೋಧೀವೃಕ್ಷ ಹಾಗೂ ಭಿಕ್ಷಾ ಪಾತ್ರೆಗಳನ್ನು ಪೂಜಿಸ ಲಾಗುತ್ತಿದ್ದಿತು. ಇಂದಿಗೂ ಅನೇಕ ಸಂಗ್ರಹಾಲಯ ಗಳಲ್ಲಿ, ಇವುಗಳ ಪ್ರತಿಕೃತಿಗಳನ್ನು (ಡೂಪ್ಲಿಕೇಟ್) ಸುರಕ್ಷತೆಯ ದೃಷ್ಟಿಯಿಂದ ರಕ್ಷಿಸಿ ಇಡಲಾಗಿದೆ.

ಆದರೆ `ಮಹಾಯಾನ’ ಬೌದ್ಧ ಧರ್ಮದಲ್ಲಿ, ಬುದ್ಧನನ್ನು, ಮನುಷ್ಯ ರೂಪದಲ್ಲಿ ವಿವಿಧ ರೀತಿಯ ಕಲ್ಲುಗಳಲ್ಲಿ ತೋರಿಸಲು ಆರಂಭಿಸಿದರು. ಇಂತಹ ಕಲ್ಲಿನ ವಿಗ್ರಹಗಳನ್ನು ಕಾಂಬೋಡಿಯ ರಾಜ್ಯದ ಪ್ಲನಾನ್ ಎಂಬ ನಗರದಲ್ಲಿ ಕಾಣಬಹುದು. ಕ್ರಿಸ್ತಶಕ ಎರಡನೆಯ ಶತಮಾನದಲ್ಲಿ ದೊರೆಯಾಗಿದ್ದ ಪೂರ್ಣವರ್ಮನ ಕಲ್ಲಿನ ವಿಗ್ರಹವನ್ನು ಪವಿತ್ರವಾದ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು.

ಸಾವಿರದ ಎಂಟು ನೂರು ವರ್ಷಗಳ ಹಿಂದೆ, ಭಾರತದ ಎಲ್ಲೆಯನ್ನು ದಾಟಿ ಈ ಅಭಿಪ್ರಾಯ ನಮ್ಮ ದೇಶಕ್ಕೆ ಬಂದಿತು. ಶೈವ, ವೈಷ್ಣವ, ಬೌದ್ಧ ಮತ್ತು ಜೈನರ ಪೂಜ್ಯ ಪಾದಗಳು, ನಮ್ಮ ದೇಶದಲ್ಲಿ ನೂರಾರು ಸ್ಥಳಗಳಲ್ಲಿ ಕಂಡು ಬಂದಿವೆ.

ಈ ಎಲ್ಲ ಪಾದಗಳಿಗಿಂತಲೂ ಭಿನ್ನವಾದ ಹಗೂ ಪವಿತ್ರವಾದ ಪಾದವು ಗಯೆಯಲ್ಲಿರುವ `ವಿಷ್ಣು ಪಾದವೇ’ ಆಗಿದೆ. ಈ ದೇವಾಲಯವು ಬಹಳ ಪ್ರಾಚೀನವಾದರೂ, ಈಗಿರುವ ದೇಗುಲವನ್ನು ಕ್ರಿಸ್ತಶಕ ಹದಿಮೂರನೆಯ ಶತಮಾನದಲ್ಲಿ ನಿರ್ಮಿಸ ಲಾಯಿತು ಎಂದು ಭಾವಿಸಲಾಗಿದೆ. ಅಕ್ಷರಶಃ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಬಂದು, ತಮ್ಮ ಮುತ್ತಜ್ಜ, ಅಜ್ಜ, ತಂದೆ ಹಾಗೂ ಮುತ್ತಜ್ಜಿ, ಅಜ್ಜಿ ಮತ್ತು ತಾಯಿಗೆ ಪಿಂಡ ಪ್ರದಾನ (ಅನ್ನಕ್ಕೆ ಎಳ್ಳಿನ ಕಾಳುಗಳನ್ನು ಹಾಕಿರುವ ಅನ್ನದ ಉಂಡೆ ಯಿಂದ) ಮಾಡಿದ್ದಾರೆ. ಮತ್ತು ಮುಂದೆಯೂ ಮಾಡುತ್ತಾರೆ. ಗಯಾದಲ್ಲಿರುವ ಗದಾಧರ ವಿಷ್ಣುವಿನ ಪಾದಗಳಿಗೆ ಪಿಂಡ ಪ್ರದಾನ ಮಾಡಿದ್ದಾರೆ. ಇದು ಮುಂದುವರೆಯುತ್ತದೆ ಎನ್ನು ನಂಬಿಕೆ ಆಸ್ತಿಕರದ್ದು. ಇಂದಿಗೂ ಶ್ರಾದ್ಧವನ್ನು ನಮ್ಮ ಮನೆಯಲ್ಲಿ (ಯಾವ ಊರಾದರೂ ಪರವಾಗಿಲ್ಲ) ಮಾಡಿದರೂ, ಈ ಪಿಂಡ ಪ್ರದಾನವನ್ನು ಗಯೆಯಲ್ಲಿ ಮಾಡಿದಂತೆ ಎಂದು ಭಾವಿಸಿ ಆಸ್ತಿಕರು ಧನ್ಯತೆಯ ಭಾವನೆಯನ್ನು ತಾಳುತ್ತಾರೆ. ಇದೇ ಗಯಾ ಮತ್ತು ವಿಷ್ಣುಪಾದದ ಮಹತ್ವ! ಇಂದಿಗೂ ಹಿರಿಯರ ಪಾದಗಳನ್ನು ಗೌರವದಿಂದ ಮುಟ್ಟುತ್ತಾರೆ ಮತ್ತು ಧನ್ಯರಾಗುತ್ತಾರೆ. ಕೊಡವರು ಈ ವಿಷಯದಲ್ಲಿ ಮುಂದಾಗಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ. ರಸ್ತೆಯಲ್ಲಿ ಹೋಗು ವಾಗಲೂ ಹಿರಿಯ ಕೊಡವರನ್ನು ನೋಡಿದಾಗ, ಕಿರಿಯರು ಅವರ ಪಾದಗಳನ್ನು ಮುಟ್ಟಿ ಗೌರವಿಸು ತ್ತಾರೆ. ಒಟ್ಟಿನಲ್ಲಿ ಕೊಡವರು ಹಿರಿಯರಿಗೆ ಗೌರವ ವನ್ನು ತೋರಿಸುವ ರೀತಿ, ಎಲ್ಲ ಕೋಮಿನವರಿ ಗಿಂತ ಭಿನ್ನವಾಗಿದೆ. ಇದೇ ಕೊಡವರ ವೈಶಿಷ್ಟ್ಯ!

ಪಾದಗಳನ್ನು ನೀರಿನಿಂದ ತೊಳೆಯುವುದು, ಪಾದ ಗಳನ್ನು ವಿವಿಧ ಹೂವುಗಳಿಂದ ಅಲಂಕರಿಸು ವುದನ್ನು ನೋಡಿ ವಿದೇಶೀಯರಿಗೆ ಆಶ್ಚರ್ಯವಾಗ ಬಹುದು. ಆದರೆ, ಇದು ನಮ್ಮ ಪರಂಪರೆ ಮತ್ತು ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಆಸ್ತಿಕರ ಮೇಲಿದೆ ಎಂಬುದನ್ನು ಮರೆಯುವಂತಿಲ್ಲ.

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೂರು ಋಣಗಳಿವೆ. ಅವು ಯಾವುವೆಂದರೆ ತಾಯಿಯ ಋಣ, ತಂದೆಯ ಋಣ ಮತ್ತು ಗುರುಗಳ ಋಣ. ತಾಯಿ, ತಂದೆ ಮತ್ತು ಗುರುಗಳು ಬದುಕಿರುವಾಗ, ಇವರನ್ನು ಚೆನ್ನಾಗಿ ನೋಡಿಕೊಂಡು ತೊಂದರೆ ಕೊಡದೆ ಮತ್ತು ಮರಣಾನಂತರ ಇವರನ್ನು ನೆನಪಿಸಿ ಕೊಳ್ಳುವುದು ಎಲ್ಲರೂ ತಪ್ಪದೇ ಮಾಡಬೇಕಾದ ಕರ್ತವ್ಯ.

ಆದುದರಿಂದಲೇ ಉಪನಿಷತ್ತು ಹೇಳಿರುವಂತೆ, ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎನ್ನುವುದೇ ನಿಜವಾದ ಉಪದೇಶ. ಇದನ್ನು ನಾವೆಲ್ಲರೂ ಪರಿಪಾಲಿಸಿ ತಂದೆ, ತಾಯಿ ಮತ್ತು ಗುರುಗಳಿಗೆ ಗೌರವವನ್ನು ತೋರಿಸಬೇಕಾ ದುದು ನಮ್ಮೆಲ್ಲರ ಕರ್ತವ್ಯವೂ ಹೌದು!

Translate »