ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ  ಸೂಕ್ತ ವೈದ್ಯಕೀಯ ಸೇವೆ ಲಭ್ಯವಿಲ್ಲ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಸೂಕ್ತ ವೈದ್ಯಕೀಯ ಸೇವೆ ಲಭ್ಯವಿಲ್ಲ

April 29, 2021
  • ಶಾಸಕ ಸಾ.ರಾ.ಮಹೇಶ್ ಆತಂಕ 
  • ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಿರುವುದೆಲ್ಲಾ
  • ಸುಳ್ಳು… ಸುಳ್ಳು… ಸುಳ್ಳು…; ವಾಗ್ದಾಳಿ 
  • ವೆಂಟಿಲೇಟರ್ ದೊರಕದೇ 36 ವರ್ಷದ ಮಹಿಳೆ ಸಾವು 
  • ಈ ಸಾವು ಒಂದು ಉದಾಹರಣೆ ಅಷ್ಟೇ 
  • ಒಬ್ಬರು ಸತ್ತ ಮೇಲೆ ಮತ್ತೊಬ್ಬರಿಗೆ ವೆಂಟಿಲೇಟರ್ ಹಾಕುವ ಪರಿಸ್ಥಿತಿ ಇದೆ

ಮೈಸೂರು,ಏ.28(ಪಿಎಂ)- ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆ ಸಂಬಂಧ ವೆಂಟಿಲೇಟರ್ ಸೇರಿದಂತೆ ಸೂಕ್ತ ವೈದ್ಯ ಕೀಯ ಸೌಲಭ್ಯ ಇಲ್ಲ. ನಿನ್ನೆ ರಾತ್ರಿ ಕೆಆರ್ ನಗರ ತಾಲೂಕಿನ 36 ವರ್ಷದ ಮಹಿಳೆ ವೆಂಟಿಲೇಟರ್ ಸೌಕರ್ಯ ಲಭ್ಯವಿಲ್ಲದೆ ಮೃತಪಟ್ಟಿದ್ದಾರೆ. ಇದು ಕೇವಲ ಒಂದು ಉದಾಹರಣೆ ಅಷ್ಟೇ. ಇಡೀ ಜಿಲ್ಲೆಯ ಪರಿಸ್ಥಿತಿಯೂ ಇದೇ ಆಗಿದೆ ಎಂದು ಆರೋ ಪಿಸಿದ ಮಾಜಿ ಸಚಿವರೂ ಆದ ಶಾಸಕ ಸಾ.ರಾ.ಮಹೇಶ್, ಜಿಲ್ಲಾಡಳಿತ ಸತ್ತು ಹೋಗಿದೆಯೇ? ಉಸ್ತುವಾರಿ ಸಚಿವರೇ ಬದುಕಿದ್ದೀರಾ? ಎಂದು ವಾಗ್ದಾಳಿ ನಡೆಸಿದರು.

ಮೈಸೂರಿನ ತಮ್ಮ ಕಚೇರಿ ಆವರಣ ದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗಿರುವ ಮಾಹಿತಿ ಪ್ರಕಾರ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳೂ ಒಳಗೊಂಡಂತೆ ಎಲ್ಲದರಿಂದ ಕೇವಲ 150 ವೆಂಟಿಲೇಟರ್‍ಗಳು ಲಭ್ಯವಿವೆ. ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ 30 ಇದ್ದರೆ, ಪ್ರತಿ ತಾಲೂಕಲ್ಲಿ 5ರಿಂದ 6 ಇವೆ. ಅವು ಗಳಲ್ಲಿ ಅನೇಕ ವೆಂಟಿಲೇಟರ್‍ಗಳು ಸಮರ್ಪಕ ವಾಗಿಲ್ಲ. ಇದಕ್ಕೆ ಕಾರಣ ಅವುಗಳ ನಿರ್ವ ಹಿಸುವ ತಜ್ಞರು ಹಾಗೂ ಸಿಬ್ಬಂದಿ ಇಲ್ಲ. ಹೀಗಾಗಿ ಇರುವ ವೆಂಟಿಲೇಟರ್‍ಗಳು ಕೂಡ ಉಪಯೋಗಕ್ಕೆ ಬರುತ್ತಿಲ್ಲ ಎಂದು ದೂರಿದರು.
ನಿನ್ನೆ ಕೆಆರ್ ನಗರ ತಾಲೂಕಿನ ದಾಕ್ಷಾ ಯಿಣಿ (36) ಎಂಬುವರನ್ನು ಕೆ ಆರ್ ಆಸ್ಪತ್ರೆ ಆವರಣದ ಕೋವಿಡ್ ವಿಭಾಗಕ್ಕೆ ದಾಖ ಲಿಸಿದೆವು. ಅಲ್ಲಿನ ವೈದ್ಯರು ಸ್ಯಾಚುರೇಷನ್ ಲೆವೆಲ್ ಅವರಿಗೆ 60 ಎಂಎಂ ಇದ್ದು, ವೆಂಟಿಲೇಟರ್ ಅಗತ್ಯವಿದೆ ಎಂದರು. ನಿನ್ನೆ ಯಿಂದ ಡಿಹೆಚ್‍ಓ ಅವರೊಂದಿಗೆ 5 ಬಾರಿ ಮಾತನಾಡಿದ್ದೇನೆ. ಆದರೆ ಅವರು ವೆಂಟಿ ಲೇಟರ್ ವ್ಯವಸ್ಥೆ ಮಾಡಲಿಲ್ಲ. ಕೆಆರ್ ನಗರ ದಲ್ಲಿ ಇದ್ದ ಎರಡು ವೆಂಟಿಲೇಟರ್ ತಂದು ಕೊಟ್ಟರೂ ಅದನ್ನು ಅಳವಡಿಸಲು ಮೆಕ್ಯಾ ನಿಕ್ ಇಲ್ಲ ಎಂದು ತಡ ಮಾಡಿದರು. ನಿನ್ನೆ ರಾತ್ರಿ 3 ಗಂಟೆಗೆ ಆಕೆ ಸಾವನ್ನಪ್ಪಿದ್ದಾರೆ. ಎಷ್ಟು ಜೀವಗಳ ಜೊತೆ ಹೀಗೆ ಚೆಲ್ಲಾಟ ಆಡುತ್ತೀರಿ? ಏಕೆ ಜನತೆಗೆ ಸುಳ್ಳು ಹೇಳುತ್ತೀರಿ? ಜನ ತೆಗೆ ಸತ್ಯ ಹೇಳಿ. ಜನರನ್ನು ಏನು ಮಾಡಲು ಹೊರಟಿದ್ದೀರಿ? ಎಂದು ಕಿಡಿಕಾರಿದರು.
ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡ ಳಿತ ನಮಗೆ ಹೇಳುವುದು ಬೇಡ. ಬದ ಲಿಗೆ ಜಿಲ್ಲೆಯ ಜನತೆಗೆ ಮಾಹಿತಿ ನೀಡಲಿ. ಕೋವಿಡ್ ಬಂದು 1 ವರ್ಷವಾಯಿತು. ಮೈಸೂರು ಜಿಲ್ಲೆಯಲ್ಲಿ ಎಷ್ಟು ವೈದ್ಯರನ್ನು ನೇಮಕ ಮಾಡಿದ್ದೀರಿ? ಎಷ್ಟು ನರ್ಸ್‍ಗಳನ್ನು ನೇಮಕ ಮಾಡಿದ್ದೀರಿ. ಎಷ್ಟು ವೆಂಟಿಲೇಟರ್ ವ್ಯವಸ್ಥೆ ಮಾಡಿದ್ದೀರಿ? ದಯಮಾಡಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಗೆ 5 ಸಾವಿರ ರೆಮ್ಡಿಸಿವಿರ್ ಲಸಿಕೆ ಬೇಕೆಂದು ಬೇಡಿಕೆ ಸಲ್ಲಿಸಿದ್ದರೆ ಕೇವಲ 97 ಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿದರೆ, ಆ ಲಸಿಕೆ ಎಲ್ಲರಿಗೂ ಅಗತ್ಯವಿಲ್ಲ ಎಂದು ಜಾರಿ ಕೊಳ್ಳುತ್ತಾರೆ. ಹಾಗಾದರೆ ಕೇವಲ 97 ರೆಮ್ಡಿಸಿವಿರ್ ಲಸಿಕೆ ಇಡೀ ಜಿಲ್ಲೆಗೆ ಸಾಕೇ? ಕೆಆರ್ ನಗರ ತಾಲೂಕಿಗೆ 215 ನರ್ಸ್‍ಗಳ ಅಗತ್ಯವಿದೆ. ಆದರೆ ಇರುವುದು ಕೇವಲ 87 ಮಾತ್ರ. ಜಿಪಂ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ರೆಮ್ಡಿಸಿವಿರ್ ಲಸಿಕೆ ಇಲ್ಲದೇ ಪರದಾಡಿದ್ದಾರೆ. ಅವರಿಗೆ ಕಾಡಿಬೇಡಿ ಲಸಿಕೆ ಕೊಡಿಸಿದ್ದೇವೆ. ಇಂತಹವರ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯ ಜನತೆ ಗತಿ ಏನು? ವಿಧಾನಸೌಧದಲ್ಲಿ ಧ್ವನಿ ಎತ್ತಲು ಹೋದರೆ ಅಲ್ಲಿ ಸಿಡಿ ಗಲಾಟೆ. ಹೀಗಾದರೆ ಎಲ್ಲಿ ಮಾತ ನಾಡುವುದು? ನನ್ನ ಆರೋಪ ಸುಳ್ಳು ಎಂದರೆ ಎಲ್ಲಾ ಕ್ರಮಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿ ದರು. ಬೆಂಗಳೂರಿನ ಸ್ಥಿತಿಯನ್ನು ಮೈಸೂ ರಿಗೂ ತರಬೇಡಿ. ಕಟ್ಟಡ ಖಾಲಿ ಇದೆ ಎಂದು ಕೇವಲ ಹಾಸಿಗೆ ಹಾಕಿದರೆ ಅದು ಆಸ್ಪತ್ರೆ ಆಗುವುದಿಲ್ಲ. ಒಬ್ಬರು ಸತ್ತ ಮೇಲೆ ಮತ್ತೊಬ್ಬ ರಿಗೆ ವೆಂಟಿಲೇಟರ್ ದೊರಕುವ ಸ್ಥಿತಿ ಜಿಲ್ಲೆ ಯಲ್ಲಿದೆ. ಎಲ್ಲಾ ಸರಿ ಇದೆ ಎಂದು ಸುಳ್ಳು ಹೇಳಬೇಡಿ ಎಂದು ಕಿಡಿಕಾರಿದರು. ಶಾಸಕ ಅಶ್ವಿನ್‍ಕುಮಾರ್, ಮೇಯರ್ ರುಕ್ಮೀಣಿ ಮಾದೇಗೌಡ, ಮಾಜಿ ಮೇಯರ್ ಲಿಂಗಪ್ಪ, ಮಾಜಿ ಉಪಮೇಯರ್ ಶೈಲೇಂದ್ರ ಮತ್ತಿ ತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »