ಕೆಆರ್‍ಎಸ್ ನೆಪ; ಗಣಿ ಉದ್ಯಮ ತುಳಿಯಲು ಯತ್ನ
ಮಂಡ್ಯ

ಕೆಆರ್‍ಎಸ್ ನೆಪ; ಗಣಿ ಉದ್ಯಮ ತುಳಿಯಲು ಯತ್ನ

July 11, 2021

ಮಂಡ್ಯ, ಜು.10(ಮೋಹನ್‍ರಾಜ್)-ಕೆಆರ್‍ಎಸ್ ಡ್ಯಾಂಗೆ ಯಾವುದೇ ಅಪಾಯ ವಿಲ್ಲದಿದ್ದರೂ, ಅಪಾಯ ನೆಪವೊಡ್ಡಿ ಮಂಡ್ಯ ಜಿಲ್ಲೆಯಲ್ಲಿ ಗಣಿ ಉದ್ಯಮ ತುಳಿಯುವ ಯತ್ನ ನಡೆಸಲಾಗುತ್ತಿದೆ ಎಂದು ಗಣಿ ಉದ್ಯಮಿಗಳು, ಕ್ವಾರೆ ಮಾಲೀಕರು ಹಾಗೂ ಲಾರಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಕ್ವಾರೆ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್, ಗಣಿಗಾರಿಕೆ ಎಂಬುದು ಒಂದು ಉದ್ಯಮವಾಗಿದ್ದು, ನಾವು ಯಾರ ಪರವೂ ಇಲ್ಲ, ಯಾರ ವಿರೋ ಧವೂ ಇಲ್ಲ. 60-70 ವರ್ಷಗಳಿಂದ ಈ ವೃತ್ತಿ ನಡೆಸಿಕೊಂಡು ಬರುತ್ತಿದ್ದು, ಕೃಷ್ಣರಾಜ ಸಾಗರ ಅಣೆಕಟ್ಟೆ ಕಟ್ಟುವ ಮುನ್ನವೇ ಗಣಿಗಾರಿಕೆ ಆರಂಭವಾಗಿತ್ತು ಎಂದರು.

ಕೆಆರ್‍ಎಸ್ ಅಣೆಕಟ್ಟೆ ನಮ್ಮ ಜೀವನಾಡಿ, ನಾವು ಸಹ ಅಣೆಕಟ್ಟೆಯ ಫಲಾನುಭವಿ ಗಳು. ನಮ್ಮ ಉದ್ಯಮದಿಂದ ಅಣೆಕಟ್ಟೆಗೆ ಸಮಸ್ಯೆಯಾಗುತ್ತದೆ ಎಂದರೆ ನಾವು ಉದ್ಯಮ ಸ್ಥಗಿತಗೊಳಿಸಲು ಸಿದ್ಧ. ಅಣೆಕಟ್ಟೆ ಉಳಿಸಿ ಕೊಳ್ಳಲು ನಾವೂ ಬೆಂಬಲ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ನಮ್ಮದು ಗಣಿಗಾರಿಕೆ ಅಲ್ಲ, ಕ್ವಾರೆ ಉದ್ಯಮ. ಮೈನರ್ ಮೈನಿಂಗ್, ಮೇಜರ್ ಮೈನಿಂಗ್ ಅಲ್ಲ. ನಾವು ಬೇರೆ ಕಡೆಗೆ ಆಮದು ಮಾಡು ವುದಿಲ್ಲ. ಶ್ರೀರಂಗಪಟ್ಟಣದಲ್ಲಿ ಉತ್ಪಾದಿ ಸಿದ ಕಲ್ಲನ್ನು ಮಂಡ್ಯ ಅಥವಾ ಬೇರೆಡೆಗೆ ರಫ್ತು ಮಾಡುವುದಿಲ್ಲ. ಹಾಗೇ ಮಂಡ್ಯ ಆಥವಾ ಮಳವಳ್ಳಿಯಲ್ಲಿ ಉತ್ಪಾದಿಸುವ ಕಲ್ಲನ್ನು ಶ್ರೀರಂಗಪಟ್ಟಣಕ್ಕೆ ರಫ್ತು ಮಾಡುವು ದಿಲ್ಲ. ಹೀಗಿದ್ದ ಮೇಲೆ ನಮ್ಮ ತಾಲೂಕಿಗೆ ಅವಶ್ಯಕತೆ ಇರುವ ಕಲ್ಲು ಮತ್ತು ಇತರೆ ವಸ್ತು ಗಳನ್ನು ನಾವು ಕ್ವಾರೆ ಮೂಲಕ ಉತ್ಪಾದನೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಇನ್ನು ಕ್ವಾರೆ ಅಥವಾ ಗಣಿ ಎನ್ನುವುದು ಕೇವಲ ಹಣ ಮಾಡುವ ಕೆಲಸವಲ್ಲ. ಈ ಉದ್ಯಮವನ್ನು ನಂಬಿ ಲಕ್ಷಾಂತರ ಜನ ಜೀವನ ನಡೆಸುತ್ತಿದ್ದಾರೆ. ನಾವು ಸೂಕ್ತ ಅನುಮತಿ ಪಡೆದೇ ಉದ್ಯಮ ನಡೆಸು ತ್ತಿದ್ದು, ನದಿ, ಅಣೆಕಟ್ಟೆ, ಶಾಲೆ, ದೇವಾಲಯ ಗಳಿಂದ ಅಂತರ ಕಾಪಾಡಿಕೊಂಡಿದ್ದು, ನಮ್ಮದು ಅಕ್ರಮ ಎಂದು ಸಾಬೀತಾದರೆ ನಮ್ಮ ಉದ್ಯಮವನ್ನು ಸ್ಥಗಿತಗೊಳಿಸಲಿ ಎಂದು ಸಾವಲು ಹಾಕಿದರು.

ಮಂಡ್ಯ ಜಿಲ್ಲೆಯಲ್ಲಿ ಸರ್ಕಾರ ಎಲ್ಲಾ ರೀತಿಯ ಪರಿಶೀಲನೆ ನಡೆಸೇ ಗಣಿ ಉದ್ಯ ಮಕ್ಕೆ ಪರವಾನಗಿ ಕೊಡುತ್ತದೆ. ಅರಣ್ಯ, ಗಣಿ, ಕಂದಾಯ ಸೇರಿದಂತೆ ಸುಮಾರು 13 ಇಲಾಖೆಗಳು ಪರಿಶೀಲನೆ ನಡೆಸಿದ ಬಳಿಕವೇ ಗಣಿ ಉದ್ಯಮಕ್ಕೆ ಅವಕಾಶ ನೀಡಲಾಗುತ್ತದೆ. ಜೊತೆಗೆ ಗಣಿಗಾರಿಕೆಗೆ ನಡೆಸಲು ಬೇಕಾದ ರಾಜಧನವನ್ನೂ ಸಹ ಕಟ್ಟುತ್ತಿದ್ದೇವೆ ಎಂದು ತಿಳಿಸಿದರು.

ಅಣೆಕಟ್ಟೆ ವ್ಯಾಪ್ತಿಯ 2 ಕಿ.ಮೀ. ಜಾಗ ದಲ್ಲಿ ಗಣಿಗಾರಿಕೆ ಮಾಡದಂತೆ ನಿಯಮ ವಿದೆ. ಇದರ ಜೊತೆಗೆ ಮಂಡ್ಯ ಜಿಲ್ಲೆಯಲ್ಲಿ ಕ್ವಾರಿ ಗಣಿಗಾರಿಕೆ ನಡೆಸುತ್ತಿರುವ ನಾವು ಎಲ್ಲೂ ಸಹ ಬೋರ್ ಬ್ಲಾಸ್ಟ್ ಮಾಡು ತ್ತಿಲ್ಲ. ಮೆಗ್ಗರ್ ಬ್ಲಾಸ್ಟಿಂಗ್ ಅನ್ನು ಮಾತ್ರ ಮಾಡುತ್ತಿದ್ದೇವೆ. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಬೇರೆ ಜಿಲ್ಲೆಯ ಗಣಿ ಪ್ರದೇಶದಲ್ಲಿ ಬೋರ್ ಬ್ಲಾಸ್ಟಿಂಗ್ ಆಗುತ್ತಿರಬಹುದು ಅದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದರು.
ಗಣಿಗಾರಿಕೆ ವೃತ್ತಿ ಮಾಡುವವರನ್ನು ಕಳ್ಳರಂತೆ ನೋಡುತ್ತಾರೆ. ಇತ್ತೀಚೆಗೆ ಗಣಿಗಾ ರಿಕೆ ಪ್ರದೇಶಗಳಿಗೆ ಸಂಸದರು ಭೇಟಿ ನೀಡಿದ್ದು, ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ. ಈ ನಿಟ್ಟಿ ನಲ್ಲಿ ಇಂದು ಎಲ್ಲಾ ಗಣಿ ಮಾಲೀಕರು, ಉದ್ಯಮಿಗಳು, ಲಾರಿ ಮಾಲೀಕರು ಸಭೆ ಸೇರಿದ್ದು, ಚರ್ಚೆ ನಡೆಸಿದ್ದೇವೆ. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಿ. ಪರವಾನಗಿ ಪಡೆದಿರುವ ಗಣಿಗಾರಿಕೆಯನ್ನೂ ಅಕ್ರಮ ಎಂದರೆ ಹೇಗೆ? ಈ ಬಗ್ಗೆ ಸಂಬಂಧಿಸಿ ದವರಿಗೆ ಮನವಿ ಸಲ್ಲಿಸುತ್ತೇವೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸಲು 7 ದಿನಗಳ ಕಾಲ ಕಾಲಾವಕಾಶ ಕೇಳುತ್ತೇವೆ. ಒಂದು ವೇಳೆ ಸಮಸ್ಯೆ ಬಗೆಹರಿಸದಿದ್ದರೆ ಗಣಿಗಾ ರಿಕೆ ಬಂದ್ ಮಾಡಿ ಪ್ರತಿಭಟಿಸುತ್ತೇವೆ. ಹೊರಗಿನ ಜಿಲ್ಲೆಯಿಂದ ಬರುವ ಕಲ್ಲು ಲಾರಿ ಗಳನ್ನು ಸಹ ಜಿಲ್ಲೆಯೊಳಗೆ ಬಿಟ್ಟುಕೊಳ್ಳಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ 36 ಕ್ರಷರ್‍ಗಳಿದ್ದು, `ಸಿ’ ಫಾರಂ ಪಡೆದ 23 ಕ್ರಷರ್‍ಗಳಿವೆ. 13 `ಡಿ’ 1 ಕ್ರಷರ್‍ಗಳಾಗಿವೆ. ಇನ್ನುಳಿದ ಗಣಿ ಗಾರಿಕೆಯು ಅಕ್ರಮವಾಗಿ ನಡೆಯುತ್ತಿದ್ದು, ಕೇವಲ ಅರ್ಧ ಎಕರೆಗೆ ಅನುಮತಿ ಪಡೆದು 2 ರಿಂದ 3 ಎಕರೆ ವಿಸ್ತರಿಸಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗಣಿ ಉದ್ಯಮಿ ಗಳಾದ ರಾಮಕೃಷ್ಣ, ರವಿಬೋಜೇಗೌಡ, ಅಶ್ವಿನ್‍ಗೌಡ, ನೃಪತುಂಗ, ರವೀಂದ್ರ, ಸುನೀಲ್ ಕುಮಾರ್, ಅಶೋಕ್ ಮತ್ತಿತರರಿದ್ದರು.

Translate »