ರಸ್ತೆ ತಡೆದು ಪ್ರತಿಭಟಿಸಿದ ರೈತ ಸಂಘ
ಮಂಡ್ಯ

ರಸ್ತೆ ತಡೆದು ಪ್ರತಿಭಟಿಸಿದ ರೈತ ಸಂಘ

July 11, 2021

ಪಾಂಡವಪುರ, ಜು.10-ರೈತರ ಜೀವ ನಾಡಿ ಕೆಆರ್‍ಎಸ್ ಜಲಾಶಯ ರಕ್ಷಿಸಲು ಸುತ್ತಮುತ್ತಲ ಪ್ರದೇಶದಲ್ಲಿ ಗಣಿಗಾರಿಕೆ ಯನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು.
ಪಟ್ಟಣದ ಐದು ದೀಪ ವೃತ್ತದ ಆವರಣದಲ್ಲಿ ಜಮಾಯಿಸಿದ ಸಂಘದ ಕಾರ್ಯಕರ್ತರು, ಕೆಲಕಾಲ ಮಾನವ ಸರಪಳಿ ರಚಿಸಿ, ನಂತರ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಅಧ್ಯಕ್ಷ ಚಿಕ್ಕಾಡೆ ಹರೀಶ್ ಮಾತನಾಡಿ, ಕೆಆರ್‍ಎಸ್ ಜಲಾಶಯ ದಿಂದ ಮಂಡ್ಯ ಭಾಗದ ರೈತರು ವ್ಯವಸಾಯ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ಜತೆಗೆ ಅನೇಕ ಜಿಲ್ಲೆಗಳಿಗೆ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ. ಮೈಸೂರು ಮಹಾರಾಜರು ರೈತರಿಗಾಗಿ ಕನ್ನಂಬಾಡಿ ಅಣೆಕಟ್ಟು ನಿರ್ಮಿಸಿದ್ದಾರೆ. ಇದರ ರಕ್ಷಣೆಗೆ ರೈತರು ದಿಟ್ಟ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಆರ್‍ಎಸ್ ಜಲಾಶಯ ಉಳಿವಿಗೆ ರೈತ ಸಂಘದ ನಿರಂತರವಾಗಿ ಬೀದಿಗಿಳಿದು ಹೋರಾಡ ಲಿದೆ ಎಂದರು. ರಾಜ್ಯ ಸರ್ಕಾರ ತಕ್ಷಣ ಕನ್ನಂಬಾಡಿಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯು ತ್ತಿರುವ ಅಕ್ರಮಗಣಿಗಾರಿಕೆ ಸ್ಥಗಿತಗೊಳಿಸದಿದ್ದರೆ ರೈತ ಸಂಘದಿಂದ ಬೀದಿಗಿಳಿದು ಉಗ್ರ ಹೋರಾಟ ನಡೆಸ ಲಾಗುವುದು ಎಂದು ಎಚ್ಚರಿಸಿದರು.

ರಸ್ತೆತಡೆದ ಪರಿಣಾಮ ಮೈಸೂರು, ನಾಗಮಂ ಗಲ, ಕೆ.ಆರ್.ಪೇಟೆ ಮಾರ್ಗದ ಸಂಚಾರ ಕೆಲ ಕಾಲ ಅಸ್ತವ್ಯಸ್ತವಾಯಿತು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ವಿಜಯ್ ಕುಮಾರ್, ರಾಘು, ಮಂಜು, ಕೆ.ಟಿ. ಗೋವಿಂದೇಗೌಡ ಅನೇಕರು ಇದ್ದರು.

Translate »