ಅರಮನೆಯಲ್ಲಿ ಬಣ್ಣ ಬಳಿಯುವಾಗ ಬಿದ್ದು ಕಾರ್ಮಿಕನಿಗೆ ಗಾಯ
ಮೈಸೂರು

ಅರಮನೆಯಲ್ಲಿ ಬಣ್ಣ ಬಳಿಯುವಾಗ ಬಿದ್ದು ಕಾರ್ಮಿಕನಿಗೆ ಗಾಯ

September 23, 2021

ಮೈಸೂರು,ಸೆ.22(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಗೆ ಬಣ್ಣ ಬಳಿಯುವ ವೇಳೆ ಕಾರ್ಮಿಕನೊಬ್ಬ ಬಿದ್ದು ಗಾಯಗೊಂಡಿದ್ದಾನೆ.

ಬುಧವಾರ ಬೆಳಗ್ಗೆ ಅರಮನೆಯ ಜಯ ಮಾರ್ತಾಂಡ ದ್ವಾರದ ಗೋಡೆ ಗಳಿಗೆ ಬಣ್ಣ ಬಳಿಯುತ್ತಿದ್ದ ಗೌಸಿಯಾ ನಗರದ ನಿವಾಸಿ ಅಫ್ತಾಬ್(32), ಕಾಲು ಜಾರಿ ಕೆಳಕ್ಕೆ ಬಿದ್ದಿದ್ದಾರೆ.

ಸುಮಾರು 15ರಿಂದ 18 ಅಡಿ ಎತ್ತರ ದಿಂದ ಕೆಳಕ್ಕೆ ಬಿದ್ದ ಇವರನ್ನು ಜೊತೆ ಕೆಲಸಗಾರರು ಕೂಡಲೇ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಿಸಿದರು. ದಸರಾ ಸಮೀಪಿ ಸುತ್ತಿರುವ ಹಿನ್ನೆಲೆಯಲ್ಲಿ ಅರಮನೆಗೆ ಬಣ್ಣ ಬಳಿಯುವ ಕಾರ್ಯ ಭರದಿಂದ ಸಾಗಿದೆ. 8 ತಂಡದಲ್ಲಿ 25ಕ್ಕೂ ಹೆಚ್ಚು ಮಂದಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ಇಂದು ಬೆಳಿಗ್ಗೆ ಅರಮನೆಯ ಜಯಮಾರ್ತಾಂಡ ದ್ವಾರದ ಗೋಡೆಯಲ್ಲಿ ನಿರ್ಮಿಸಿರುವ ಆನೆ ಶಿರಕ್ಕೆ ಆಗಿದ್ದ ಹಾನಿಯನ್ನು ಸರಿ ಪಡಿಸಲಾಗುತ್ತಿತ್ತು. ಪಕ್ಕದಲ್ಲಿಯೇ ಗೋಪುರ ಮತ್ತು ಗೋಡೆಗೆ ಬಣ್ಣ ಬಳಿಯುವ ಕಾರ್ಯದಲ್ಲಿ 6 ಮಂದಿ ನಿರತರಾಗಿ ದ್ದರು. ಅದರಲ್ಲಿ ಅಫ್ತಾಬ್ ಜಾರಿ ಕೆಳಗೆ ಬಿದ್ದರು. ಮೇಲಿಂದ ಬೀಳುವಾಗ ಅಫ್ತಾಬ್ ತಮ್ಮ ಎರಡು ಕಾಲನ್ನು ಸೈಕಲ್ ಪೆಡಲ್ ಮಾಡುವ ರೀತಿ ನೆಲಕ್ಕೆ ಬಿದ್ದಾಗ ತಲೆಗೆ ಹೆಚ್ಚು ಪೆಟ್ಟಾಗಲಿಲ್ಲ. ಕಾಲೂ ರಿದ ರಭಸಕ್ಕೆ ಬಲ ಗಾಲಿನ ಮೂಳೆಗೆ ಹಾನಿ ಯಾಗಿದೆ. ಕೂಡಲೇ ಗಾಯಾಳು ಕಾರ್ಮಿಕ ನನ್ನು ಅರಮನೆಯಲ್ಲಿ ಪ್ರವಾಸಿಗರಿಗೆ ಮೀಸಲಿ ರುವ ಬ್ಯಾಟರಿ ಚಾಲಿತ ವಾಹನದಲ್ಲಿ ಅರಮನೆ ಗೇಟ್‍ವರೆಗೂ ಕರೆದೊಯ್ದು ಆ ನಂತರ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ಸ್ಕ್ಯಾನಿಂಗ್‍ನಲ್ಲಿ ತಲೆಗೆ ಗಂಭೀರ ಪೆಟ್ಟು ಬೀಳದಿರುವುದು ದೃಢಪಟ್ಟಿದೆ. ಆದರೆ ಬಲಗಾಲಿನ ಮೂಳೆ ಮುರಿದಿದೆ.

Translate »