ಮಹಿಳೆಯರ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಮಹಿಳೆಯರ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

September 23, 2021

ಮೈಸೂರು, ಸೆ.22(ಆರ್‍ಕೆಬಿ)- ಶಾಲಾ -ಕಾಲೇಜುಗಳ ಬಳಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು. ಮೈಸೂರು ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಗುಂಪುಗೂಡುವುದನ್ನು ತಪ್ಪಿಸಬೇಕು. ವಿದ್ಯಾರ್ಥಿನಿಯರು, ಮಹಿಳೆಯರು ಮನೆಗೆ ಹೋಗುವ ಮಾರ್ಗದಲ್ಲಿ ಮೈದಾನ, ಉದ್ಯಾ ನವನಗಳ ಬಳಿ ಚುಡಾಯಿಸುವ ಯುವಕ ರಿಗೆ ಶಿಕ್ಷೆ ಆಗಬೇಕು. ಹೀಗೇ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಾತ್ಯ ತೀತ ಮಹಿಳಾ ರಕ್ಷಣಾ ವೇದಿಕೆ ಮತ್ತು ಕದಂಬ ಸೈನ್ಯ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಜಾತ್ಯತೀತ ಮಹಿಳಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷೆ ಕನ್ನಡ ರತ್ನ ಮಾತನಾಡಿ, ಇತ್ತೀಚೆಗೆ ಹೆಚ್ಚುತ್ತಿರುವ ರೇಪ್ ಪ್ರಕರಣಗಳನ್ನು ಸರ್ಕಾರ ಗಂಭೀರ ವಾಗಿ ಪರಿಗಣಿಸಬೇಕು. ಮಹಿಳೆಯರು, ಯುವತಿಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಮಾನಸ ಗಂಗೋತ್ರಿ ಕುವೆಂಪು ಪ್ರತಿಮೆ ಬಳಿ ವಿದ್ಯಾರ್ಥಿಗಳಿಗೆ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಿದರು. ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷೆ ಲಾವಣ್ಯ, ಪದಾಧಿಕಾರಿ ಗಳಾದ ಭಾಗ್ಯಲಕ್ಷ್ಮಿ, ಯುವ ಘಟಕದ ಆಶಾ, ಬೆಂಗಳೂರು ಸಂಚಾಲಕಿ ಗೀತಾ, ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಸಂಚಾ ಲಕ ವೆಂಕಟೇಶ್ ಇನ್ನಿತರರು ಭಾಗವಹಿಸಿದ್ದರು.

Translate »