ಮೈಸೂರಿನ ವಾಣಿಜ್ಯ ತೆರಿಗೆ    ಕಚೇರಿಗೆ `ಬಾಂಬ್’ ಬೆದರಿಕೆ
ಮೈಸೂರು

ಮೈಸೂರಿನ ವಾಣಿಜ್ಯ ತೆರಿಗೆ ಕಚೇರಿಗೆ `ಬಾಂಬ್’ ಬೆದರಿಕೆ

September 23, 2021

ಮೈಸೂರು,ಸೆ.22(ಆರ್‍ಕೆ)- ಮೈಸೂ ರಿನ ದೇವರಾಜ ಮೊಹಲ್ಲಾದಲ್ಲಿರುವ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಯಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಪತ್ರದಿಂದ ಎರಡು ಗಂಟೆ ಕಾಲ ಆತಂಕ ಸೃಷ್ಟಿಯಾಗಿತ್ತು.

ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸ್, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ, ಬೆರಳಚ್ಚು ಮುದ್ರೆ ಘಟಕ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಕಚೇ ರಿಗೆ ತೆರಳಿ ಅಧಿಕಾರಿ, ಸಿಬ್ಬಂದಿಗಳನ್ನು ಹೊರಕ್ಕೆ ಕಳುಹಿಸಿ ಕಚೇರಿ ಒಳಗೆ ಹಾಗೂ ಆವರಣದಲ್ಲಿ ಎರಡು ಗಂಟೆ ಶೋಧ ನಡೆಸಿ ದರು. ಈ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗದ ಕಾರಣ ಇದೊಂದು ಹುಸಿ ಬಾಂಬ್ ಬೆದರಿಕೆ ಪತ್ರ ಎಂಬುದು ದೃಢ ವಾದ ನಂತರ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಘಟನೆಯ ವಿವರ: ಮೈಸೂರಿನ ಲಕ್ಷ್ಮೀ ಪುರಂನ ದಿವಾನ್ಸ್ ರಸ್ತೆಯಲ್ಲಿರುವ ಲೆಕ್ಕ ಪರಿಶೋಧಕ(ಆಡಿಟರ್)ರೊಬ್ಬರ ಕಚೇರಿ ಮುಂಭಾಗದಲ್ಲಿ ನಾಲ್ಕು ಬಾರಿ ಮಡಿಸಿದ್ದ ಪತ್ರವೊಂದು ಸಾರ್ವಜನಿಕರೊಬ್ಬರಿಗೆ ದೊರೆತಿದೆ. ಅದನ್ನು ಬಿಡಿಸಿ ನೋಡಿದಾಗ ‘ವಾಣಿಜ್ಯ ತೆರಿಗೆ ಕಚೇರಿಗೆ ಬಾಂಬ್ ಇರಿಸ ಲಾಗಿದ್ದು, ಮಧ್ಯಾಹ್ನ 12ರಿಂದ 1 ಗಂಟೆ ಯೊಳಗೆ ಸ್ಫೋಟಗೊಳ್ಳಲಿದೆ’ ಎಂದು ಇಂಗ್ಲಿಷ್‍ನಲ್ಲಿ ಅದರಲ್ಲಿ ಬರೆಯಲಾಗಿತ್ತು.

ತಕ್ಷಣ ಪತ್ರ ದೊರೆತ ಸಾರ್ವಜನಿಕರು, ಬೆಳಗ್ಗೆ 11.15 ಗಂಟೆ ವೇಳೆಗೆ ದೇವರಾಜ ಠಾಣೆ ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಇನ್‍ಸ್ಪೆಕ್ಟರ್ ದಿವಾಕರ್, ಸಬ್ ಇನ್‍ಸ್ಪೆಕ್ಟರ್ ರಾಜು ಹಾಗೂ ಸಿಬ್ಬಂದಿ, ಸಂದೇಶವಿದ್ದ ಂ4 ಅಳತೆಯ ಪತ್ರ ಪಡೆದು, ಅಗ್ನಿಶಾಮಕದಳ, ಬಾಂಬ್ ಸ್ಕ್ವಾಡ್, ಶ್ವಾನ ದಳ, ಬೆರಳಚ್ಚು ಮುದ್ರೆ ಘಟಕದ ಅಧಿಕಾರಿಗಳು, ಸಿಬ್ಬಂದಿಯನ್ನು ಕರೆಸಿಕೊಂಡರು.

ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳನ್ನು ಹೊರಕ್ಕೆ ಕಳುಹಿಸಿ ಕಚೇರಿಯ ಒಳಗಡೆ, ಆವರಣ ಶೋಧ ನಡೆಸಿದರು. ಜಂಟಿ ಆಯು ಕ್ತರ ಛೇಂಬರ್, ಅಧೀನಾಧಿಕಾರಿಗಳ ಕಚೇರಿ, ಶೌಚಾಲಯ, ವಾಹನ ನಿಲುಗಡೆ ಸ್ಥಳ, ಕಟ್ಟಡದ ರೂಫ್‍ಟಾಪ್, ವರಾಂಡ, ಸುತ್ತಲಿನ ಪ್ರದೇಶದಲ್ಲಿ ಸುಮಾರು 2 ಗಂಟೆ ಪರಿ ಶೀಲನೆ ನಡೆಸಿದರಾದರೂ ಎಲ್ಲಿಯೂ ಬಾಂಬ್ ಆಗಲಿ ಇನ್ನಿತರೆ ಸ್ಫೋಟಕ ಪದಾರ್ಥಗಳ ಸುಳಿವು ಸಿಗಲಿಲ್ಲ. ಇದು ದುಷ್ಕರ್ಮಿಗಳ ಕುಚೇಷ್ಟೆಯಷ್ಟೇ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಕಚೇರಿ ಸಿಬ್ಬಂದಿ ಮಧ್ಯಾಹ್ನದ ನಂತರ ಎಂದಿನಂತೆ ನಿರಾ ತಂಕವಾಗಿ ಕರ್ತವ್ಯ ನಿರ್ವಹಿಸಿದರು.
ಡಿಸಿಪಿ ಪ್ರದೀಪ್ ಗುಂಟಿ, ಎಸಿಪಿ ಶಶಿ ಧರ ಸೇರಿದಂತೆ ಹಲವು ಪೊಲೀಸ್ ಅಧಿ ಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಪತ್ರದಲ್ಲಿ ಬಾಂಬ್ ಬೆದರಿಕೆ ಸಂದೇಶ ನೀಡಿರುವ ಕಿಡಿ ಗೇಡಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ದಿವಾನ್ಸ್ ರಸ್ತೆ, ಸೀತಾ ವಿಲಾಸ ರಸ್ತೆ, ಲಕ್ಷ್ಮೀ ವಿಲಾಸ ರಸ್ತೆ ಸೇರಿದಂತೆ ಸುತ್ತಲಿನ ಪ್ರದೇ ಶದ ಅಂಗಡಿಗಳ ಮುಂದೆ ಅಳವಡಿಸಿ ರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸು ತ್ತಿರುವ ಪೊಲೀಸರು, ಫುಟೇಜಸ್ ಪಡೆದು, ಹೀಗೆ ಚೀಟಿ ಬರೆದು ಬಿಸಾಡಿದವರ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ. ಪ್ರಯೋಗಾಲಯಕ್ಕೂ ಕಳುಹಿಸಲು ಪ್ರಕ್ರಿಯೆ ನಡೆಸುತ್ತಿದ್ದಾರೆ.

Translate »