ಮೈಸೂರು ಸದರನ್ ಸ್ಟಾರ್ ಹೋಟೆಲ್ ಪುನಾರಂಭ 16 ತಿಂಗಳ ನಂತರ ಹೋಟೆಲ್ ಪ್ರಾರಂಭಕ್ಕೆ ಸಿದ್ಧತೆ
ಮೈಸೂರು

ಮೈಸೂರು ಸದರನ್ ಸ್ಟಾರ್ ಹೋಟೆಲ್ ಪುನಾರಂಭ 16 ತಿಂಗಳ ನಂತರ ಹೋಟೆಲ್ ಪ್ರಾರಂಭಕ್ಕೆ ಸಿದ್ಧತೆ

September 23, 2021

ಮೈಸೂರು, ಸೆ. 22(ಆರ್‍ಕೆ)- ಮೈಸೂರಿನ ವಿನೋಬಾ ರಸ್ತೆ ಯಲ್ಲಿರುವ ಪ್ರತಿಷ್ಠಿತ ಸದರನ್ ಸ್ಟಾರ್ ಹೋಟೆಲ್ ಅಕ್ಟೋಬರ್ ಮೊದಲ ವಾರ ಪುನಾರಂಭಗೊಳ್ಳಲಿದೆ.

ಕೋವಿಡ್-19ರಿಂದಾಗಿ 2020ರ ಮೇ 19ರಂದು ಈ ಹೋಟೆಲ್ ಬಂದ್ ಆಗಿತ್ತು. ಇದೀಗ ಕೊರೊನಾ ಸೋಂಕಿನ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದು, ಎಲ್ಲಾ ಚಟುವಟಿಕೆ, ವಹಿವಾಟು ಚುರುಕುಗೊಂಡಿರುವುದರಿಂದ ಅಕ್ಟೋಬರ್ ಮೊದಲ ವಾರ ಹೋಟೆಲ್ ಸೇವೆಯನ್ನು ಪುನಾ ರಂಭಿಸಲು ಆಡಳಿತ ಮಂಡಳಿ ಮುಂದಾಗಿದೆ.

ಈ ಬಗ್ಗೆ ಹೋಟೆಲ್‍ನ ಎಲ್ಲಾ ನೌಕರರಿಗೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸಂದೇಶ ನೀಡಲಾಗಿದೆ ಎಂದು ಸದರನ್ ಸ್ಟಾರ್ ಹೋಟೆಲ್ ನಿರ್ದೇಶಕ ಬಲರಾಂ ಜೈರಾಜ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಕೋವಿಡ್ ಪರಿಸ್ಥಿತಿ ತಿಳಿಯಾಗುತ್ತಿದ್ದು, ಮೈಸೂರಿನಲ್ಲಿ ಆತಿಥ್ಯ ಕ್ಷೇತ್ರ (ಊosಠಿiಣಚಿಟiಣಥಿ Seಛಿಣoಡಿ) ಚೇತರಿಸಿಕೊಳ್ಳುತ್ತಿರುವುದರಿಂದ ಆಡಳಿತ ಮಂಡಳಿಯು ಅಕ್ಟೋಬರ್ ಮೊದಲ ವಾರ ಹೋಟೆಲ್ ಪುನಾರಂಭಿಸಲು ನಿರ್ಧರಿಸಿದೆ. ಆರಂಭಿಕವಾಗಿ ಕೆಲ ಸೇವೆ ಆರಂಭಿಸುತ್ತೇವೆ. ಉತ್ತಮ ಪ್ರತಿಕ್ರಿಯೆ ಬಂದಲ್ಲಿ ಇನ್ನಿತರೆ ಸೇವೆಯನ್ನು ಪ್ರಾರಂಭಿಸುತ್ತೇವೆ ಎಂದರು.

ಈಗಾಗಲೇ ನಮ್ಮ ನೌಕರರೊಂದಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಹೇಗೆ ಕಾರ್ಯೋನ್ಮುಖರಾಗಬೇಕೆಂಬುದರ ಬಗ್ಗೆ ಚರ್ಚಿಸಿ ದ್ದೇವೆ. ಹೋಟೆಲ್‍ನ ಅಭಿವೃದ್ಧಿ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ಕಲ್ಪಿಸಲು ನೌಕರರು ಮೊದಲೆಲ್ಲ ಸ್ಪಂದಿಸಿರುವುದರಿಂದ ಭವಿಷ್ಯದಲ್ಲಿ ಒಳಿತಾಗಲಿದೆ ಎಂಬ ಆಶಾಭಾವನೆಯಿಂದ ಮುಂದು ವರೆಯಲು ನಿರ್ಧರಿಸಲಾಗಿದೆ ಎಂದು ಬಲರಾಂ ನುಡಿದರು.

ಈಗ ಸ್ವಚ್ಛತಾ ಕಾರ್ಯ ಆರಂಭಿಸಿದ್ದೇವೆ. ಇನ್ನಿತರೆ ತಯಾರಿ ಸಹ ಭರದಿಂದ ಸಾಗಿದ್ದು, ಗ್ರಾಹಕರ ಅಭಿಲಾಷೆಗನುಗುಣವಾಗಿ ಆತಿಥ್ಯ ನೀಡಲು ಸಕಲ ವ್ಯವಸ್ಥೆ ಮಾಡಲಾಗುವುದು ಎಂದು ಸದರನ್ ಸ್ಟಾರ್ ಹೋಟೆಲ್‍ನ ಬ್ಯುಸಿನೆಸ್ ಫೈನಾನ್ಸ್ ಮ್ಯಾನೇಜರ್ ಅಭಿಜಿತ್ ನಾಯಕ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »