ರೈಲ್ವೆ ಇಲಾಖೆ ಸ್ಟೇಷನ್ ಮಾಸ್ಟರ್‍ಗಳ ಪ್ರತಿಭಟನೆ
ಮೈಸೂರು

ರೈಲ್ವೆ ಇಲಾಖೆ ಸ್ಟೇಷನ್ ಮಾಸ್ಟರ್‍ಗಳ ಪ್ರತಿಭಟನೆ

September 23, 2021

ಮೈಸೂರು,ಸೆ.22(ಪಿಎಂ)-ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಆಲ್ ಇಂಡಿಯಾ ಸ್ಟೇಷನ್ ಮಾಸ್ಟರ್ಸ್ ಅಸೋಷಿಯೇಷನ್ ಮೈಸೂರು ವಿಭಾಗದ ನೇತೃತ್ವದಲ್ಲಿ ರೈಲ್ವೆ ಇಲಾಖೆಯ ಸ್ಟೇಷನ್ ಮಾಸ್ಟರ್‍ಗಳು ಬುಧವಾರ ಪ್ರತಿಭಟನೆ ನಡೆಸಿದರು.

ಮೈಸೂರಿನ ನೈರುತ್ಯ ರೈಲ್ವೆಯ ಡಿಆರ್‍ಎಂ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸ್ಥಗಿತಗೊಳಿಸಿರುವ ರಾತ್ರಿ ಪಾಳಿ ಭತ್ಯೆಯನ್ನು ಮತ್ತೆ ಜಾರಿಗೊಳಿಸಬೇಕು. ಸುರಕ್ಷತೆಯ ದೃಷ್ಟಿಯಿಂದ ಖಾಲಿ ಇರುವ ಸ್ಟೇಷನ್ ಮಾಸ್ಟರ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಕೆಲವೆಡೆ ಹೆಚ್ಚುವರಿಯಾಗಿ 12 ಗಂಟೆಗಳ ಕಾಲ ಸ್ಟೇಷನ್ ಮಾಸ್ಟರ್‍ಗಳನ್ನು ದುಡಿಸು ತ್ತಿದ್ದು, 8 ಗಂಟೆ ಮೀರಿ ಹೆಚ್ಚುವರಿ ಅವಧಿ ಕೆಲಸ ತೆಗೆದುಕೊಳ್ಳುವುದನ್ನು ಕೂಡಲೇ ನಿಲ್ಲಿಸ ಬೇಕು. ಹೆಚ್ಚು ಒತ್ತಡವಿರುವ ಸ್ಟೇಷನ್‍ಗಳಲ್ಲಿ ಪ್ರತಿ ಪಾಳಿಗೆ ಇಬ್ಬರು ಸ್ಟೇಷನ್ ಮಾಸ್ಟರ್ ಗಳನ್ನು ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಆಗ್ರಹಿಸಿದರು. ಅಸೋಷಿಯೇಷನ್‍ನ ಮೈಸೂರು ವಿಭಾಗದ ಅಧ್ಯಕ್ಷ ಬಿ.ಮಂಜುನಾಥ್, ಕಾರ್ಯದರ್ಶಿ ಮನೋಜ್ ಯಾದವ್, ಖಜಾಂಚಿ ರಾಜೇಶ್‍ಕುಮಾರ್, ಸದಸ್ಯ ಗಿರೀಶ್, ನೈರುತ್ಯ ರೈಲ್ವೆ ಮಜ್ದೂರ್ ಸಂಘದ ಕಾರ್ಯದರ್ಶಿ ಜೆ.ಆರ್.ರಾಕೇಶ್ ಮತ್ತು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »