ಅಂತೂ ಬೋನಿಗೆ ಬಿದ್ದ ಚಿರತೆ
ಮೈಸೂರು ಗ್ರಾಮಾಂತರ

ಅಂತೂ ಬೋನಿಗೆ ಬಿದ್ದ ಚಿರತೆ

April 13, 2020

ಹಂಪಾಪುರ, ಏ. 12(ರಾಜೇಶ್)- ಹೆಚ್.ಡಿ.ಕೋಟೆ ತಾಲೂಕು, ಕೇತಳ್ಳಿ ಗ್ರಾಮದಲ್ಲಿ ಐದು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಮೀನಾಕ್ಷಿ ಎಂಬವರ ತೋಟದಲ್ಲಿ ಚಿರತೆ ಸೆರೆಗೆ ಐದು ದಿನಗಳ ಹಿಂದೆ ಬೋನಿಡಲಾಗಿತ್ತು. ಭಾನುವಾರ ಬೆಳಗಿನ ಜಾವದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ವಿಷಯ ತಿಳಿದ ಕೂಡಲೇ ಅರಣ್ಯಾಧಿ ಕಾರಿಗಳಾದ ಮಧು, ಡಿಆರ್‍ಎಫ್ ಸುನೀತಾ ಲಾಲಪ್ಪ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಚಿರತೆಯನ್ನು ರಕ್ಷಿಸಿ ನಾಗರಹೊಳೆ ಅರಣ್ಯಕ್ಕೆ ಬಿಡಲಾಯಿತು.

Translate »