ಜನಸಂದಣಿ ನಿಯಂತ್ರಣಕ್ಕೆ ಹೊಸ ನಿರ್ಬಂಧದನ್ವಯ  ಮಾರುಕಟ್ಟೆಗಳು ಸಂಪೂರ್ಣ ಬಂದ್; ವ್ಯಾಪಾರಸ್ಥರು ಕಂಗಾಲು
ಮೈಸೂರು

ಜನಸಂದಣಿ ನಿಯಂತ್ರಣಕ್ಕೆ ಹೊಸ ನಿರ್ಬಂಧದನ್ವಯ ಮಾರುಕಟ್ಟೆಗಳು ಸಂಪೂರ್ಣ ಬಂದ್; ವ್ಯಾಪಾರಸ್ಥರು ಕಂಗಾಲು

May 5, 2021

ಮೈಸೂರು,ಮೇ 4(ಪಿಎಂ)- ಕೋವಿಡ್ ಕಫ್ರ್ಯೂನ ಮುಂದುವರೆದ ಪರಿಷ್ಕøತ ಮಾರ್ಗಸೂಚಿಯ ಆದೇಶದಂತೆ ಮೈಸೂರು ನಗರದ ದೇವರಾಜ, ಮಂಡಿ ಮತ್ತು ವಾಣಿವಿಲಾಸ ಹಾಗೂ ಎಂಜಿ ರಸ್ತೆಯ ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸಲು ಸಂಪೂರ್ಣ ನಿರ್ಬಂಧ ವಿಧಿಸಿರುವ ಹಿನ್ನೆಲೆ ಯಲ್ಲಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ಕೆಲವರು ತಮ್ಮ ಮಾರುಕಟ್ಟೆಗಳ ಸುತ್ತ ಮುತ್ತ ತಳ್ಳುವಗಾಡಿಗಳ ಮೂಲಕ ವಹಿ ವಾಟು ನಡೆಸಲು ಮುಂದಾಗಿದ್ದರೆ, ಹಲವು ವ್ಯಾಪಾರಿಗಳು ದಾರಿ ಕಾಣದಂತಾಗಿದ್ದಾರೆ. ಬಹುತೇಕ ವ್ಯಾಪಾರಸ್ಥರು ಈ ಹಿಂದಿ ನಂತೆ ಬೆಸ ಮತ್ತು ಸಮ ಸಂಖ್ಯೆ ಆಧಾರ ದಲ್ಲಿ ಮಳಿಗೆ ತೆರೆಯುವ ವ್ಯವಸ್ಥೆಗಾದರೂ ಅನುಮತಿ ನೀಡಬೇಕೆಂದು ಆಗ್ರಹಿಸಿದ್ದಾರೆ.

ಮೈಸೂರಿನ ದೇವರಾಜ, ವಾಣಿ ವಿಲಾಸ ಹಾಗೂ ಮಂಡಿ ಮಾರುಕಟ್ಟೆ ಗಳಲ್ಲಿ ಅಗತ್ಯ ವಸ್ತು ಮಳಿಗೆಗಳು ಬೆಸ ಮತ್ತು ಸಮ ಸಂಖ್ಯೆ ಆಧಾರದಲ್ಲಿ ಪ್ರತಿದಿನ ಬೆಳಗ್ಗೆ 6ರಿಂದ ಬೆಳಗ್ಗೆ 10ರವರೆಗೆ ವಹಿ ವಾಟು ನಡೆಸುತ್ತಿದ್ದವು. ಈ ನಡುವೆ ಮಾರು ಕಟ್ಟೆಗಳಲ್ಲಿ ಜನಸಂದಣಿ ತಪ್ಪಿಸಬೇಕೆಂಬ ಕಾರಣಕ್ಕೆ ಸರ್ಕಾರ ಹೊರಡಿಸಿದ ಪರಿಷ್ಕøತ ಆದೇಶದ ಅನ್ವಯ ಮೇ 2ರಿಂದ ಮೈಸೂರಿನ ಈ ಮೂರು ಮಾರು ಕಟ್ಟೆಗಳೂ ಸೇರಿದಂತೆ ಎಂಜಿ ರಸ್ತೆಯ ಬಯಲು ಮಾರುಕಟ್ಟೆಯನ್ನೂ ಸಂಪೂರ್ಣ ಮುಚ್ಚಿಸಲಾಯಿತು.

ಇದರಿಂದ ದಿನದ 4 ಗಂಟೆ ಅವಧಿ ವಹಿವಾಟು ನಡೆಸಲು ಇದ್ದ ಅವಕಾಶವೂ ಕೈತಪ್ಪಿ ವ್ಯಾಪಾರಸ್ಥರು ಪರಿತಪಿಸುವಂತಾ ಗಿದೆ. ಈ ಮಧ್ಯೆ ಕೆಲವರು ತಮ್ಮ ಮಾರುಕಟ್ಟೆ ಆಸುಪಾಸಿನ ರಸ್ತೆ ಬದಿಗಳಲ್ಲಿ ವ್ಯಾಪಾರ ಮುಂದುವರೆಸಿದ್ದರೆ, ಬಹುತೇಕ ಮಂದಿ ಅದನ್ನೂ ಮಾಡಲಾಗದೇ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
`ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ದೇವರಾಜ ಮಾರುಕಟ್ಟೆ ಬಾಡಿಗೆ ದಾರರ ಸಂಘದ ಅಧ್ಯಕ್ಷ ಎಸ್.ಮಹ ದೇವ್, ಮಾರುಕಟ್ಟೆ ಸಂಪೂರ್ಣವಾಗಿ ಮುಚ್ಚಿಸಿರುವ ಹಿನ್ನೆಲೆಯಲ್ಲಿ ಹೂ ವ್ಯಾಪಾರಿ ಗಳು ಜೆಕೆ ಮೈದಾನದ ಸುತ್ತಮುತ್ತ ವ್ಯಾಪಾರ ನಡೆಸುತ್ತಿದ್ದರೆ, ಕೆಲ ತರಕಾರಿ ವ್ಯಾಪಾರಸ್ಥರು ಕೈಗಾಡಿ ಮೂಲಕ ಮಾರು ಕಟ್ಟೆ ಸುತ್ತಮುತ್ತ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ದಿನಸಿ ಮತ್ತು ಪೂಜಾ ಸಾಮಗ್ರಿ ಮಳಿಗೆಯವರು ಸೇರಿದಂತೆ ಇನ್ನಿತರ ಮಳಿಗೆಯವರು ಏನೂ ಮಾಡ ಲಾಗದೇ ಅತಂತ್ರವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಆಕ್ಸಿಜನ್ ಇಲ್ಲದೇ ಸಾಯೋರ ನಡುವೆ ಅನ್ನವಿಲ್ಲದೇ ಸಾಯುತ್ತೇವೆ: ದೇವರಾಜ ಮಾರುಕಟ್ಟೆ ತರಕಾರಿ ವ್ಯಾಪಾರಿ ನವೀನ್ ಕುಮಾರ್ ಮಾತನಾಡಿ, ಏಕಾಏಕಿ ಮಾರು ಕಟ್ಟೆ ಮುಚ್ಚಿಸಿರುವುದು ವ್ಯಾಪಾರಿಗಳಿಗೆ ಮಾತ್ರವಲ್ಲದೆ, ತರಕಾರಿ ಪೂರೈಸುವ ರೈತರಿಗೂ ತೊಂದರೆ ಆಗಿದೆ. ಈ ಹಿಂದಿ ನಂತೆ ಬೆಸ ಮತ್ತು ಸಮ ಸಂಖ್ಯೆಯಡಿ ಮಳಿಗೆ ತೆರೆದು ವಹಿವಾಟು ನಡೆಸಲು ಅನುವು ಮಾಡಿದರೂ ಸಾಕು. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ವ್ಯಾಪಾರ ಮಾಡುತ್ತೇವೆ. ಇಲ್ಲವಾದರೆ ಕೋವಿಡ್ ರೋಗಿಗಳು ಆಕ್ಸಿಜನ್ ಇಲ್ಲದೇ ಸತ್ತರೆ, ನಾವು ಅನ್ನವಿಲ್ಲದೇ ಸಾಯಬೇಕಾಗುತ್ತದೆ. ಸರ್ಕಾರ ಮತ್ತು ಪಾಲಿಕೆ ಅಧಿಕಾರಿಗಳು ಕಣ್ತೆರೆದು ನೋಡಬೇಕು ಎಂದು ಮನವಿ ಮಾಡಿದರು. ಅನೇಕ ತರಕಾರಿ ವ್ಯಾಪಾ ರಸ್ಥರು ಇದೀಗ ಮಾರುಕಟ್ಟೆ ಆಸುಪಾಸಿ ನಲ್ಲಿ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಲು ಮುಂದಾಗಿದ್ದಾರೆ. ನಾನೂ ನಾಳೆಯಿಂದ ಅದನ್ನೇ ಮಾಡಲು ಚಿಂತಿಸುತ್ತಿದ್ದೇನೆ. ಆದರೆ ಮಾರುಕಟ್ಟೆಗಿಂತ ರಸ್ತೆ ಬದಿಯಲ್ಲಿ ವಹಿ ವಾಟು ನಡೆಸಿದರೆ ಜನದಟ್ಟಣೆ ಆಗಲಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರ ಕಾಯ್ದು ಕೊಳ್ಳುವುದು ಸೇರಿದಂತೆ ಎಲ್ಲಾ ಕೋವಿಡ್ ನಿಯಮ ಪಾಲಿಸುತ್ತಿದ್ದೇವೆ. ಮುಂದೆಯೂ ಇನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಿದ್ಧವಿದ್ದು, ಮಾರುಕಟ್ಟೆಯಲ್ಲೇ ವ್ಯಾಪಾರ ನಡೆಸಲು ಅವಕಾಶ ನೀಡಬೇಕು ಎಂದು ಕೋರಿದರು.

Translate »