ಮಹಾವೀರರ ಸಂದೇಶ ಮಾನವ ಕಲ್ಯಾಣಕ್ಕೆ ಪೂರಕ
ಮೈಸೂರು

ಮಹಾವೀರರ ಸಂದೇಶ ಮಾನವ ಕಲ್ಯಾಣಕ್ಕೆ ಪೂರಕ

April 27, 2021

ಮೈಸೂರು,ಏ.26-ಮೈಸೂರು ಜೈನ್ ಸಂಘಟನೆ ವತಿಯಿಂದ ದೇವರಾಜ ಮೊಹಲ್ಲಾದ ಡಿ. ಸುಬ್ಬಯ್ಯ ರಸ್ತೆಯಲ್ಲಿ ರುವ ಜೈನ್ ಅಪಾರ್ಟ್‍ಮೆಂಟ್ ಮುಂಭಾಗ ಮಹಾವೀರ 1422ನೇ ಜಯಂತಿಯನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಮತ್ತು ಅರ್ಥಗರ್ಭಿತವಾಗಿ ಅಸಹಾಯ ಕರಿಗೆ ದಿನನಿತ್ಯ ಬಳಸುವ ಆಹಾರ ಪದಾರ್ಥಗಳನ್ನು ವಿತರಿಸಿ ಮಹಾವೀರ್ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಮೈಸೂರು ಜೈನ್ ಸಂಘಟನೆ ಮುಖಂಡ ರಾದ ಕಾಂತಿಲಾಲ್ ಜೈನ್ ಮಾತನಾಡಿ, ಭಗವಾನ್ ಮಹಾವೀರರು ಅಹಿಂಸಾ ಮಾರ್ಗದ ಪ್ರತಿಪಾದಕರು, ರಾಜ ಮನೆತ ದಲ್ಲಿ ಜನಿಸಿದ ಅವರು ಸಕಲ ಭೋಗ ಭಾಗ್ಯಗಳನ್ನು ತೊರೆದು, ಸುದೀರ್ಘ ತಪಸ್ಸಿನ ಮೂಲಕ ಜ್ಞಾನದ ಬೆಳಕು ಕಂಡು ಕೊಂಡವರು. ಸಮಾಜದಲ್ಲಿನ ಮೂಢ ನಂಬಿಕೆ, ಪ್ರಾಣಿಬಲಿಯಂತಹ ಕೆಟ್ಟ ಆಚ ರಣೆಗಳನ್ನು ತೊಡೆದುಹಾಕಿ, ಅಹಿಂಸೆ ಮತ್ತು ಸಮಾನತೆಗಾಗಿ ನಿರಂತರ ಶ್ರಮಿ ಸಿದರು. ಜೈನಧರ್ಮದಲ್ಲಿ ಮಹಾವೀರ ಅವರನ್ನು 24ನೇ ತೀರ್ಥಂಕರರೆಂದು ಪರಿಗಣಿಸಲಾಗಿದೆ. ಮಹಾವೀರರು ಜಗದ ಉದ್ಧಾರಕ್ಕಾಗಿ ರಾಜಭೋಗ ತೊರೆದು ಕಠಿಣ ತಪಸ್ಸು ಮಾಡಿ, ಕೇವಲ ಜ್ಞಾನ ಸಂಪಾದಿಸಿ ಜಗತ್ತಿಗೆ ಶಾಂತಿಯ ಸಂದೇಶ ಸಾರಿದರು. ಜೈನರು ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.  ಧರ್ಮ, ಜಾತಿ ಭೇದಭಾವವಿಲ್ಲದೆ ಎಲ್ಲರೂ ಒಂದಾಗಿ ಭಗವಾನ್ ಮಹಾವೀರರ ಜಯಂತಿ ಆಚರಿಸೋಣ ಎಂದರು.
ನಂತರ ಮಾತನಾಡಿದ ಮುಡಾ ಸದಸ್ಯ ನವೀನ್‍ಕುಮಾರ್, ಮಹಾವೀರ ಜಯಂತಿ ಯನ್ನು ಆರ್ಥಿಕವಾಗಿ ಹಿಂದುಳಿದ ವರ್ಗ ದವರಿಗೆ ಸಹಾಯ ಮಾಡುತ್ತಿರುವುದು ತ್ಯಾಗ ಬಲಿದಾನದ ಸಂಕೇತವಾಗಿರುವ ಮಹಾವೀರರ ಜಯಂತಿಗೆ ಅರ್ಥ ತಂದು ಕೊಟ್ಟಿದೆ. ಇದೇ ರೀತಿ ಉಳ್ಳವರು, ಸಿರಿ ವಂತರು ಬಡವರ ಬಗ್ಗೆ ಕಾಳಜಿ ವಹಿಸಿ ಸಹಾಯ ಮಾಡಬೇಕು. ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ. ಜೈನ್ ಸಂಘಟನೆ ಯಾವತ್ತೂ ಈ ಬಡವರಿಗೆ ಸಹಾಯ ಹಸ್ತ ಚಾಚುವ ಕೆಲಸವನ್ನು ಮಾಡುತ್ತಿದೆ ಎಂದು ಪ್ರಶಂಸಿಸಿದರು. ಪ್ರಶಾಂತ್, ಜೈನ್ ಸಂಘಟನೆಯ ಸದಸ್ಯರಾದ ಹನ್ಸ್‍ರಾಜ್, ಶಾಂತಿಲಾಲ್, ಕಾಂತಿಲಾಲ್, ಹೀರಾಚಂದ್ ಕಮಲೇಶ್, ರಮೇಶ್, ಚಂದ್ರಾಬಾಯಿ, ರೇಖಾಬಾಯಿ ಮೂರ್ತಿದೇವಿ, ಪರಮೇಶ್ ಗೌಡ, ರಾಮಕೃಷ್ಣ ನಾಗರಾಜ್, ಮಹ ದೇವ್ ಪ್ರಸಾದ್, ನವೀನ್ ಹಾಗೂ ಪ್ರೀಮಿಯಂ ರೆಸಿಡೆನ್ಸಿ ನಿವಾಸಿಗಳು ಇದ್ದರು.

Translate »