ಮೈಸೂರು ಜಿಲ್ಲಾಡಳಿತದ ಲೆಕ್ಕ ಪಕ್ಕಾ ಇಲ್ಲ
ಮೈಸೂರು

ಮೈಸೂರು ಜಿಲ್ಲಾಡಳಿತದ ಲೆಕ್ಕ ಪಕ್ಕಾ ಇಲ್ಲ

May 31, 2021

ಮೈಸೂರು,ಮೇ 30(ಪಿಎಂ)- ಕೋವಿಡ್ ಸಾವಿನ ಸಂಖ್ಯೆ ಮರೆಮಾಚಿರುವುದೇ ಪ್ರಧಾನಿ ನರೇಂದ್ರ ಮೋದಿಯವರ 7 ವರ್ಷಗಳ ಆಡಳಿತದ ಸಾಧನೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರ ಗಳು ಕೋವಿಡ್ ಸಾವಿನ ಸಂಖ್ಯೆ ಕಡಿಮೆ ತೋರಿಸುತ್ತಿವೆ. ಮೈಸೂರು ಜಿಲ್ಲಾಡಳಿತವೂ ಇದಕ್ಕೆ ಹೊರತಾಗಿಲ್ಲ. ಇದರ ಲೆಕ್ಕವೂ ಪಕ್ಕಾ ಇಲ್ಲ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಆರೋಪಿಸಿದರು.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಭಾನು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾದಿ ಯಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆ ಕಡಿಮೆ ತೋರಿಸಿ, ಜನತೆಯ ದಿಕ್ಕು ತಪ್ಪಿಸ ಲಾಗುತ್ತಿದೆ. ಉದಾಹರಣೆಗೆ ಮೈಸೂರು ಜಿಲ್ಲೆ ಸಂಬಂಧ ಕೇವಲ 2 ದಿನಗಳ ಅಂಕಿ-ಅಂಶ ಅವಲೋಕಿಸಿದರೆ, ಸಾವುಗಳ ಸಂಖ್ಯೆ ಮರೆಮಾಚುತ್ತಿರುವುದು ಖಚಿತ ವಾಗುತ್ತದೆ ಎಂದು ಹೇಳಿದರು.

ಮೈಸೂರಿನಲ್ಲಿ ಮೇ 27ರಂದು 34 ಮಂದಿ ಮೃತಪಟ್ಟಿದ್ದರೆ, ಜಿಲ್ಲಾಡಳಿತ ಕೇವಲ 18 ಮಂದಿ ಎಂದು ಲೆಕ್ಕ ತೋರಿಸಿದೆ. ಅಂತೆಯೇ ಮೇ 28ರಂದು 33 ಮಂದಿ ಸಾವನ್ನ ಪ್ಪಿದ್ದಾರೆ. ಆದರೆ ಜಿಲ್ಲಾಡಳಿತ ಕೇವಲ 20 ಮಂದಿ ಎಂದು ಅಂಕಿ-ಅಂಶ ನೀಡಿದೆ. ಮೈಸೂರಿನಲ್ಲೇ ಹೀಗಾದರೆ, ಬೆಂಗಳೂ ರಿನ ಸಾವಿನ ಸಂಖ್ಯೆಯಲ್ಲಿ ಇನ್ನೆಷ್ಟು ಸುಳ್ಳು ತೋರಿಸುತ್ತಿರಬಹುದು? ಎಂದು ಅನು ಮಾನ ವ್ಯಕ್ತಪಡಿಸಿದರು.

ಗುಜರಾತ್‍ನಲ್ಲಿ 61 ಸಾವಿರ ಸಾವಿನ ಸಂಖ್ಯೆ ವ್ಯತ್ಯಾಸ ಬಂದಿದೆ. ಇದು ಮಾಧ್ಯಮ ಗಳಲ್ಲಿ ಚರ್ಚೆಯಾಗುತ್ತಿದೆ. ಇವರು ಇಡೀ ದೇಶದಲ್ಲಿ ಈ ರೀತಿ ಮಾಡುತ್ತಿದ್ದಾರೆ. ಹೀಗೆ ಮುಚ್ಚಿಡುತ್ತಿರುವುದಾದರೂ ಏಕೆ? ಇವರು ಹೀಗೆ ಮಾಡುತ್ತಿರುವುದರಿಂದಲೇ ಜನ ಜಾಗೃತರಾಗುತ್ತಿಲ್ಲ. ಬಿಜೆಪಿ ಎಂದರೆ ಅದೊಂದು ಸುಳ್ಳಿನ ಕಾರ್ಖಾನೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಇಳಿಕೆಯಾಗುತ್ತಿದೆ ಎಂದು ಹೇಳಿಕೊಳ್ಳು ತ್ತಿದ್ದಾರೆ. ಆದರೆ ಪರೀಕ್ಷೆ ಮಾಡುವುದನ್ನೇ ಕಡಿಮೆ ಮಾಡಿ, ಸೋಂಕು ಕಡಿಮೆಯಾಗಿದೆ ಎನ್ನುವುದು ಎಷ್ಟು ಸರಿ? ಪಾಸಿಟಿವಿಟಿ ದರ ರಾಜ್ಯದಲ್ಲಿ ಶೇ.42ರಷ್ಟು ಇದೆ ಎಂದು ಹೇಳಿ ದ್ದಾರೆ. ಪರೀಕ್ಷೆ ಹೆಚ್ಚುಗೊಳಿಸಿದರೆ, ಇದು ಇನ್ನೂ ಹೆಚ್ಚಾಗಲಿದೆ ಎಂದು ತಿಳಿಸಿದರು.

ಕಳೆದ ಬಾರಿ ಸೋಂಕಿತರನ್ನು ಐಸೋ ಲೇಷನ್‍ನಲ್ಲಿ ಇರಿಸಿ ಕಟ್ಟುನಿಟ್ಟಿನ ಕ್ರಮ ವಹಿಸ ಲಾಗಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಕ್ರಮ ಜರುಗಿಸಿಲ್ಲ. ಇವರ ನಿರ್ಲಕ್ಷ್ಯ ಮತ್ತು ದುರಾಡಳಿತದಿಂದ ಸೋಂಕು ವ್ಯಾಪಕ ವಾಗುತ್ತಿದ್ದು, ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಿಸಿದ್ದಾರೆ. ಕಾಂಗ್ರೆಸ್ ಕೇವಲ ಟೀಕೆಗೆ ಸೀಮಿತವಾಗಿಲ್ಲ. ಟೀಕೆ ಮೂಲಕ ಸರ್ಕಾರದ ತಪ್ಪುಗಳನ್ನು ತಿದ್ದುವ ಜೊತೆಗೆ ಅಪಾರ ಸೇವಾ ಕಾರ್ಯದಲ್ಲಿ ತೊಡಗಿದೆ. ವೈಜ್ಞಾನಿಕ ಕ್ರಮಗಳ ಮೂಲಕ ಸೋಂಕು ಇಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಕೋವಿಡ್ ಲಸಿಕಾ ಅಭಿಯಾನ ವಿಚಾರ ದಲ್ಲಿ ಕೇವಲ ಪ್ರಚಾರ ಪಡೆದಿದ್ದು ಬಿಟ್ಟರೆ ನಾಗರಿಕರಿಗೆ ಅಭಿಯಾನದ ಪ್ರಯೋಜನ ಸಂಪೂರ್ಣ ದೊರೆಯುವಂತ ಪರಿಸ್ಥಿತಿ ಸದ್ಯಕ್ಕೆ ಕಾಣುತ್ತಿಲ್ಲ. ಇಡೀ ದೇಶದೆಲ್ಲೆಡೆ ಲಸಿಕಾ ಉತ್ಸವ ಆಚರಣೆ ಎಂದು ಪ್ರಚಾರ ಗಿಟ್ಟಿಸಿ ದರು. ಮುಖ್ಯಮಂತ್ರಿಗಳೂ ಬೆಂಗಳೂರಲ್ಲಿ 18ರಿಂದ 44 ವರ್ಷ ವಯೋಮಾನದವರಿಗೆ ಲಸಿಕೆ ನೀಡುವುದಕ್ಕೆ ಚಾಲನೆ ನೀಡಿದರು. ನಂತರದ ದಿನದಲ್ಲೇ ಈ ವಯೋಮಾನದ ವರಿಗೆ ಲಸಿಕೆ ಇಲ್ಲ ಎಂದು ಕೈ ಚೆಲ್ಲಿದರು ಎಂದು ಟೀಕಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಎಲ್ಲಾ ವಯೋಮಾನದವರಿಗೆ ದೊರೆಯು ವಂತೆ ವ್ಯವಸ್ಥೆ ಮಾಡಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿದರೂ ಸಾಲಿನಲ್ಲಿ ನಿಂತು ಲಸಿಕೆ ಪಡೆಯುವಂತ ಪರಿಸ್ಥಿತಿ ನಾಗರಿಕರಿಗೆ ಎದುರಾಗಿದೆ. ಇದೇನಾ ಇವರ ಸಾಧನೆ? ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ನಗರ ಉಪಾಧ್ಯಕ್ಷ ರಾಜಾರಾಂ, ಪಾಲಿಕೆ ಸದಸ್ಯ ಜೆ.ಗೋಪಿ, ಮಾಜಿ ಸದಸ್ಯ ಎಂ.ಸುನೀಲ್, ಎಂಎಸ್‍ಐಎಲ್ ಮಾಜಿ ನಿರ್ದೇಶಕ ಗುಣಶೇಖರ್ ಮತ್ತಿ ತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »