ಮೈಸೂರು ನಗರ ಬಿಜೆಪಿ ಓಬಿಸಿ ಮೋರ್ಚಾದಿಂದ  ಮಳಿಗೆ ಎದುರು ಚೌಕಾಕಾರ ರಚನೆ
ಮೈಸೂರು

ಮೈಸೂರು ನಗರ ಬಿಜೆಪಿ ಓಬಿಸಿ ಮೋರ್ಚಾದಿಂದ ಮಳಿಗೆ ಎದುರು ಚೌಕಾಕಾರ ರಚನೆ

May 31, 2021

ಮೈಸೂರು, ಮೇ 30(ಪಿಎಂ)- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ 7 ವರ್ಷ ಪೂರ್ಣಗೊಳಿಸಿದ (1ನೇ ಮತ್ತು 2ನೇ ಅವಧಿ ಸೇರಿ) ಪ್ರಯುಕ್ತ ಬಿಜೆಪಿ ಹಿಂದು ಳಿದ ವರ್ಗಗಳ (ಓಬಿಸಿ) ಮೋರ್ಚಾ ಮೈಸೂರು ನಗರ ಘಟಕದ ವತಿಯಿಂದ ನಗರದ ಮಳಿಗೆಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗಲು ಚೌಕಾಕಾರದ ಚಿತ್ರ ಬಿಡಿ ಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಔಷಧ ಮಳಿಗೆ ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆಗಳ ಎದುರು ಚೌಕಾಕಾರ ಚಿತ್ರ ರಚಿಸುವ ಕಾರ್ಯಕ್ಕೆ ರಾಮಸ್ವಾಮಿ ವೃತ್ತದ ಬಳಿ ಚಾಮರಾಜ ಜೋಡಿ ರಸ್ತೆಯ ಔಷಧ ಮಳಿಗೆಯೊಂದರ ಬಳಿ ಹಿಂದುಳಿದ ವರ್ಗಗಳ ಮೋರ್ಚಾ ಮೈಸೂರು ನಗರಾಧ್ಯಕ್ಷ ಜೋಗಿ ಮಂಜು ಚಾಲನೆ ನೀಡಿದರು. ಬಳಿಕ ಮಾತನಾಡಿ, ನರೇಂದ್ರ ಮೋದಿಯವರ ಆಡಳಿತ ಯಶಸ್ವಿ 7 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಅನೇಕ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಮೋರ್ಚಾದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಮೈಸೂರು ನಗರದಲ್ಲಿ ಸಾರ್ವಜನಿಕರು ಭೇಟಿ ನೀಡುವ ಮೆಡಿಕಲ್ಸ್ ಸ್ಟೋರ್‍ಗಳು, ಹಾಪ್‍ಕಾಮ್ಸ್ ಮಳಿಗೆ, ನ್ಯಾಯಬೆಲೆ ಅಂಗಡಿ, ನಂದಿನಿ ಹಾಲಿನ ಬೂತ್ ಹಾಗೂ ಇಂದಿರಾ ಕ್ಯಾಂಟೀನ್‍ಗಳ ಎದುರು ಚೌಕಾಕಾರ ಚಿತ್ರ ರಚಿಸಲಾಗುತ್ತಿದೆ. ನಗರದ ಆಯಾಯ ವಿಧಾನಸಭಾ ಕ್ಷೇತ್ರಗಳಲ್ಲೂ ಮೋರ್ಚಾದ ಕ್ಷೇತ್ರ ಘಟಕಗಳ ವತಿಯಿಂದ ಈ ಕಾರ್ಯಕ್ರಮ ಆರಂಭಿಸಲಾಗಿದೆ. ಈ ಕಾರ್ಯ ಇಂದಿಗೆ ಮಾತ್ರ ಸೀಮಿತವಲ್ಲ. ಅಗತ್ಯಕ್ಕೆ ಅನುಸಾರ ಮುಂದುವರೆಸಲಿದ್ದೇವೆ ಎಂದರು. ಹಿಂದುಳಿದ ವರ್ಗಗಳ ಮೋರ್ಚಾದ ನಗರ ಪ್ರಧಾನ ಕಾರ್ಯದರ್ಶಿ ಗೋಪಾಲ್, ಕಾರ್ಯದರ್ಶಿ ಹರೀಶ್ ಅಂಕಿತ್, ಸಾಮಾಜಿಕ ಜಾಲತಾಣ ಸಂಚಾಲಕ ಅಭೀಲಾಷ್ ಕೋಟ್ಯನ್ ಹಾಜರಿದ್ದರು.

 

Translate »