ಕೋವಿಡ್ 2ನೇ ಅಲೆ ವಿರುದ್ಧ ದೇಶ  ತನ್ನೆಲ್ಲಾ ಶಕ್ತಿ ಒಗ್ಗೂಡಿಸಿ ಹೋರಾಡುತ್ತಿದೆ
News

ಕೋವಿಡ್ 2ನೇ ಅಲೆ ವಿರುದ್ಧ ದೇಶ ತನ್ನೆಲ್ಲಾ ಶಕ್ತಿ ಒಗ್ಗೂಡಿಸಿ ಹೋರಾಡುತ್ತಿದೆ

May 31, 2021

ನವದೆಹಲಿ, ಮೇ 30-ಕೋವಿಡ್-19 ಎರಡನೇ ಅಲೆ ವಿರುದ್ಧ ದೇಶ ತನ್ನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಹೋರಾಡು ತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಆಕಾಶವಾಣಿಯ ಜನಪ್ರಿಯ ತಮ್ಮ ತಿಂಗಳ ಕೊನೆಯ ಭಾನುವಾರದ `ಮನ್ ಕೀ ಬಾತ್’ನಲ್ಲಿ ಅವರು ಮುಖ್ಯ ವಾಗಿ ಕೋವಿಡ್ ಎರಡನೇ ಅಲೆ ವಿರುದ್ಧ ದೇಶ ಹೇಗೆ ಹೋರಾಡುತ್ತಿದೆ, ಸರ್ಕಾರ ಏನು ಮಾಡುತ್ತಿದೆ, ಎರಡು ಚಂಡಮಾರುತಗಳನ್ನು ದೇಶ ಹೇಗೆ ಎದುರಿಸಿದೆ ಎಂಬು ದರ ಬಗ್ಗೆಯೇ ಹೆಚ್ಚು ಮಾತನಾಡಿದ್ದಾರೆ. ದೇಶದ ಹಲವು ವರ್ಗದ ನಾಗರಿಕರ ಜೊತೆ ಮಾತನಾಡಿದ್ದಾರೆ.

ಕೋವಿಡ್ 2ನೇ ಅಲೆಯ ಸಮಯದಲ್ಲಿ ಮೆಡಿಕಲ್ ಆಕ್ಸಿಜನ್ ಅನ್ನು ಮೂಲೆಮೂಲೆಗಳಿಗೆ ತಲುಪಿಸುವುದು ಬಹಳ ದೊಡ್ಡ ಸವಾಲಾಗಿತ್ತು. ಈ ಸವಾಲಿಗೆ ಪ್ರತಿಯಾಗಿ ಕ್ರೈಯೊಜೆನಿಕ್ ಆಕ್ಸಿಜನ್ ಟ್ಯಾಂಕರ್‍ಗಳ ಮೂಲಕ ಚಾಲಕರು ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಲಕ್ಷಾಂತರ ಜನರ ಜೀವವನ್ನು ಕಾಪಾಡಿದ್ದಾರೆ ಎಂದರು.

ಕೊರೊನಾದಿಂದ ತಮ್ಮವರನ್ನು ಕಳೆದುಕೊಂಡವರಿಗೆ ನಾನು ಈ ಸಂದರ್ಭದಲ್ಲಿ ಸಂತಾಪಗಳನ್ನು ಸೂಚಿಸು ತ್ತೇನೆ. ತಮ್ಮವರನ್ನು ಕಳೆದುಕೊಂಡವರ ಪರವಾಗಿ ನಾವು ಈ ಸಂದರ್ಭದಲ್ಲಿ ನಿಲ್ಲುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ಕೊರೊನಾ ಬಗ್ಗೆ ಪ್ರಧಾನಿ ಮನದ ಮಾತು: ತನ್ನೆಲ್ಲಾ ಶಕ್ತಿ ಗಳನ್ನು ಒಗ್ಗೂಡಿಸಿ ದೇಶ ಕೊರೊನಾ ವಿರುದ್ಧ ಹೇಗೆ ಹೋರಾ ಡುತ್ತಿದೆ ಎಂದು ನಾವೆಲ್ಲರೂ ನೋಡು ತ್ತಿದ್ದೇವೆ. ಕಳೆದ 100 ವರ್ಷಗಳಲ್ಲಿ ಇದು ಅತಿ ದೊಡ್ಡ ಸಾಂಕ್ರಾಮಿಕ ರೋಗವಾಗಿದ್ದು, ಈ ವರ್ಷದ ಕೊರೊನಾ 2ನೇ ಅಲೆಯ ಜೊತೆಗೆ
ದೇಶ ಈ ಬಾರಿ ಚಂಡಮಾರುತದಂತಹ ಪ್ರಕೃತಿ ವಿಕೋಪವನ್ನು ಕಂಡಿದೆ. ಪ್ರವಾಹ ಪೀಡಿತ ರಾಜ್ಯಗಳು ಧೈರ್ಯದಿಂದ ಶಿಸ್ತು ಮತ್ತು ತಾಳ್ಮೆಯಿಂದ ಹೋರಾಟ ನಡೆಸಿದ್ದಾರೆ. ಚಂಡಮಾರುತದ ಪ್ರವಾಹ ಸಮಯದಲ್ಲಿ ಸಕ್ರಿಯವಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿಯನ್ನು ನಾನು ವಿನಯಪೂರ್ವಕವಾಗಿ ಪ್ರಮಾಣ ಹೇಳುತ್ತೇನೆ ಎಂದರು. ಸಾಮಾನ್ಯ ಸಂದರ್ಭಗಳಲ್ಲಿ ನಾವು ಒಂದು ದಿನದಲ್ಲಿ 900 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸುತ್ತಿದ್ದೆವು. ಈಗ, ಇದು ಸಾಮಾನ್ಯ ಉತ್ಪಾದನೆ 15 ಕ್ಕಿಂತ 10 ಪಟ್ಟು ಹೆಚ್ಚು ಉತ್ಪಾದಿಸಲು ಮತ್ತು ದಿನಕ್ಕೆ ಸುಮಾರು 9500 ಮೆಟ್ರಿಕ್ ಟನ್‍ಗಳನ್ನು ಉತ್ಪಾದಿಸಲು ವಿಸ್ತರಿಸಿದೆ ಎಂದರು. ಸ್ನೇಹಿತರೇ, ನಮ್ಮ ಈ ಯೋಧರಿಗೆ ಅವರು ಮಾಡಿದ ಕೆಲಸಕ್ಕೆ ರಾಷ್ಟ್ರವು ನಮಸ್ಕರಿಸುತ್ತದೆ. ಅಂತೆಯೇ, ಲಕ್ಷಾಂತರ ಜನರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅವರು ಮಾಡುವ ಕಾರ್ಯಗಳು ಅವರ ದಿನಚರಿಯ ಕೆಲಸದ ಭಾಗವಲ್ಲ, ಆದರೂ ಮಾಡುತ್ತಿದ್ದಾರೆ, ಅವರಿಗೆ ನಿಜಕ್ಕೂ ಧನ್ಯವಾದ ಹೇಳಲೇಬೇಕು ಎಂದಿದ್ದಾರೆ.ಕೊರೊನಾ ಸಂಕಷ್ಟ, ಲಾಕ್‍ಡೌನ್‍ನ ಸಮಯದಲ್ಲಿಯೂ ನಮ್ಮ ರೈತರು ದಾಖಲೆ ಯಲ್ಲಿ ಬೆಳೆ ಬೆಳೆದಿದ್ದಾರೆ. ಹಲವು ಕಡೆಗಳಲ್ಲಿ ರೈತರಿಗೆ ಸಾಸಿವೆಗೆ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ದರ ರೈತರಿಗೆ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಿಸಾನ್ ರೈಲು ನೂರು ಕೆಜಿಗಳಿಂದ ಕ್ವಿಂಟಾಲ್ ಗಟ್ಟಲೆ ವಿಜಿಯನಗರಂ ಮಾವುಗಳನ್ನು ದೆಹಲಿಗೆ ಪೂರೈಸುತ್ತಿದೆ. ಇದರಿಂದ ದೇಶಾದ್ಯಂತ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಇದುವರೆಗೆ ಕಿಸಾನ್ ರೈಲು ಸುಮಾರು 2 ಲಕ್ಷ ಟನ್ ಮಾವು ಉತ್ಪಾದನೆಯನ್ನು ಪೂರೈಸಿದೆ ಎಂದರು.

ಈ ವರ್ಷ ಬಿಹಾರದಿಂದ ಶಶಿ ಲೀಚಿ ಹಣ್ಣನ್ನು ಲಂಡನ್‍ಗೆ ವಿಮಾನದಲ್ಲಿ ಕಳುಹಿಸಲಾ ಗಿದೆ. 2018ರಲ್ಲಿ ಸರ್ಕಾರ ಇದಕ್ಕೆ ಜಿಐ ಟ್ಯಾಗ್ ನ್ನು ನೀಡಿತ್ತು. ಈ ಮೂಲಕ ಅದರ ಗುರುತು ಹೆಚ್ಚಾಗಿ ರೈತರಿಗೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದರು. ಕೋವಿಡ್ ಸಂಕಷ್ಟ ಸಮಯದಲ್ಲಿ ರೈತರು ಕಷ್ಟಪಟ್ಟು ಬೆಳೆ ಬೆಳೆಯುವುದರಿಂದ ನಾವೆಲ್ಲಾ ಊಟ ಮಾಡುತ್ತಿ ದ್ದೇವೆ. ಕೊರೊನಾ ಸಮಯದಲ್ಲಿಯೂ ನಮ್ಮ ರೈತರು ದಾಖಲೆಯ ಬೆಳೆಯನ್ನು ಉತ್ಪಾದಿಸಿದ್ದಾರೆ. ಅಲ್ಲದೆ ಸಾಕಷ್ಟು ಸಂಗ್ರಹಣೆಯನ್ನು ಕೂಡ ಮಾಡಿದ್ದೇವೆ ಎಂದರು.

Translate »