ಅವಧೂತ ಪರಂಪರೆಯಲ್ಲಿ ವಾಸುದೇವ್ ಮಹಾರಾಜರ ಹೆಸರು ಅಗ್ರಗಣ್ಯ
ಮೈಸೂರು

ಅವಧೂತ ಪರಂಪರೆಯಲ್ಲಿ ವಾಸುದೇವ್ ಮಹಾರಾಜರ ಹೆಸರು ಅಗ್ರಗಣ್ಯ

June 6, 2020

ಮೈಸೂರು,ಜೂ.5-ಮೈಸೂರಿನ ಶ್ರೀ ವಾಸುದೇವ್ ಮಹಾರಾಜ್ ಫೌಂಡೇಷನ್ ವತಿಯಿಂದ ನಗರದ ಪತ್ರ ಕರ್ತರ ಭವನದಲ್ಲಿ ಶ್ರೀ ವಾಸುದೇವ್ ಮಹಾರಾಜ್ 82ನೇ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಶಶಿಶೇಖರ್ ದೀಕ್ಷಿತ್ (ಧಾರ್ಮಿಕ), ಡಾ.ವಿ. ಶ್ರೀಕಂಠಸ್ವಾಮಿ ದೀಕ್ಷಿತ್ (ಆಧ್ಯಾತ್ಮಿಕ), ಡಾ.ಕೆ.ಲೀಲಾ ಪ್ರಕಾಶ್(ಸಾಹಿತ್ಯ), ಡಾ.ಪಿ.ಆರ್.ವಿಶ್ವನಾಥ್ ಶೆಟ್ಟಿ (ಯೋಗ), ಕೆ.ಆರ್.ಯೋಗನರಸಿಂಹ (ಸಮಾಜ ಸೇವೆ), ವಿಕ್ರಂ ಅಯ್ಯಂಗಾರ್ (ಸಂಘಟನೆ), ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜ ಪೇಯಿ ಮಾತನಾಡಿ, ಮೈಸೂರಿನ ಅವಧೂತ ಪರಂಪರೆ ಯಲ್ಲಿ ವಾಸುದೇವ್ ಮಹಾರಾಜರ ಹೆಸರು ಅಗ್ರಗಣ್ಯ ವಾಗಿದೆ. ಅವರು ಸಂಸಾರಿಯಾದರೂ ಸನ್ಯಾಸಿಯಂತೆ ವಿರಕ್ತ ಜೀವನ ನಡೆಸಿದವರು. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಹಾಗೂ ಶಿರಡಿ ಸಾಯಿ ಬಾಬಾರ ಅನನ್ಯ ಭಕ್ತರಾದ ಇವರು ಭಕ್ತಿ ಪಂಥದ ಮೂಲಕ ಆಧ್ಯಾತ್ಮಿಕ ಜೀವನವನ್ನು ನಡೆಸಿದವರು. ಜೀವನದಲ್ಲಿ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಸರಳ ಜೀವನ ನಡೆಸುತ್ತಾ ತಮ್ಮ ಬದುಕನ್ನು ತಪಸ್ಸಿ ನಂತೆ ಕಳೆದು ಆಧ್ಯಾತ್ಮಿಕ ಜೀವನವನ್ನು ಯಶಸ್ವಿಯಾಗಿ ಕಳೆದವರು. ಜೀವನದಲ್ಲಿ ಯೋಗ ಅಧ್ಯಾತ್ಮ ಪಥದಲ್ಲಿ ಸಾಗುವುದರಿಂದ ಮನುಷ್ಯ ಉತ್ತಮ ಆರೋಗ್ಯವನ್ನು ಹೊಂದುವುದರಿಂದ ಇಂದಿನ ಮಾನವ ಕುಲಕ್ಕೆ ಸವಾ ಲಾಗಿ ಪರಿಣಮಿಸಿರುವ ಮಹಾಮಾರಿ ಕೊರೊನಾ ವನ್ನು ಸುಲಭವಾಗಿ ಹಿಮ್ಮೆಟ್ಟಿಸಬಹುದು ಎಂದರು.

ವಾಸುದೇವ ಮಹಾರಾಜರ ಆದರ್ಶಗಳು ಸಮಾಜದ ಎಲ್ಲೆಡೆ ವಿಸ್ತಾರಗೊಳ್ಳಬೇಕು. ಮುಂದಿನ ದಿನಗಳಲ್ಲಿ ವಾಸುದೇವ್ ಮಹಾರಾಜರ ಹೆಸರನ್ನು ನಗರದ ಯಾವುದಾದರೂ ವೃತ್ತಕ್ಕೆ ಇಡುವುದರಿಂದ ಅವರ ಆದರ್ಶವನ್ನು ಎಲ್ಲೆಡೆ ಪಸರಿಸಬಹುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿ ಕೆರೆ ಗೋಪಾಲ್, ಸಮಾಜ ಸೇವಕ ದೊರೆಸ್ವಾಮಿ, ಸಂಸ್ಥೆ ಸಂಚಾಲಕ ಅನಂತ್ ದೀಕ್ಷಿತ್, ಸಂಸ್ಥೆಯ ಅಧ್ಯಕ್ಷೆ ಅನಿತಾ, ಗದಾಧರ, ನಾಗೇಂದ್ರ ಬಾಬು ಮತ್ತಿತರರು ಹಾಜರಿದ್ದರು.

Translate »