ಕ್ಲಿಷ್ಟ ಮಾರ್ಗಸೂಚಿಯನ್ವಯ ಮುಂಜಾಗ್ರತೆಯೊಂದಿಗೆ ಜೂ.8ರಿಂದ ಹೋಟೆಲ್, ರೆಸ್ಟೋರೆಂಟ್ ಆರಂಭ
ಮೈಸೂರು

ಕ್ಲಿಷ್ಟ ಮಾರ್ಗಸೂಚಿಯನ್ವಯ ಮುಂಜಾಗ್ರತೆಯೊಂದಿಗೆ ಜೂ.8ರಿಂದ ಹೋಟೆಲ್, ರೆಸ್ಟೋರೆಂಟ್ ಆರಂಭ

June 6, 2020

ಮೈಸೂರು, ಜೂ.5(ಆರ್‍ಕೆ)- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಲು ಕಷ್ಟ ಎನಿಸಿದರೂ ಜೂನ್ 8ರಿಂದ ಹೋಟೆಲ್, ರೆಸ್ಟೋರೆಂಟ್ ಗಳನ್ನು ತೆರೆಯಲು ಅವುಗಳ ಮಾಲೀ ಕರು ನಿರ್ಧರಿಸಿದ್ದಾರೆ.

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ರುವ ಹೋಟೆಲ್ ಮಾಲೀಕರ ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸುಮಾರು 2 ತಾಸು ಚರ್ಚೆ ನಡೆಸಿದ ಹೋಟೆಲ್ ಮಾಲೀಕರು, ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಎರಡೂವರೆ ತಿಂಗ ಳಿಂದ ಉದ್ದಿಮೆ ಬಂದ್ ಆಗಿ ನಷ್ಟ ಅನುಭವಿ ಸಿದ ಬಗ್ಗೆ ತಮ್ಮ ಅಳಲು ತೋಡಿಕೊಂಡರು.

ಸುಮಾರು 45 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಕೊರೊನಾ ವೈರಸ್ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಜೂ. 8ರಿಂದ ಹೋಟೆಲ್‍ಗಳನ್ನು ತೆರೆಯಬಹು ದೆಂದು ಕೇಂದ್ರ ಸರ್ಕಾರ ಅನುಮತಿ ನೀಡಿ ರುವುದು ಗಾಯದ ಮೇಲೆ ಬರೆ ಎಳೆದಂತಾ ಗಿದೆ ಎಂದು ಹೋಟೆಲ್ ಮಾಲೀಕರು ಅಸಮಾಧಾನ ಹೊರಹಾಕಿದರು.

ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳ ಬೇಕು, ಕನಿಷ್ಠ ಗಂಟೆಗೊಮ್ಮೆ ಮಾಸ್ಕ್ ಬದ ಲಾಯಿಸಬೇಕು, ಸೋಪಿನಿಂದ ಕೈತೊಳೆದು ಕೊಳ್ಳುತ್ತಿರಬೇಕು. ಇಲ್ಲವೇ ಆಗಿಂದಾಗ್ಗೆ ಸ್ಯಾನಿ ಟೈಸರ್ ಬಳಸಬೇಕು. ಜಿಲ್ಲಾ ಹೆಲ್ಪ್‍ಲೈನ್‍ನ ಸೂಚನೆ ಪಾಲಿಸಬೇಕು, ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಒದಗಿಸ ಬೇಕು ಎಂಬುದು ಸೇರಿದಂತೆ 45 ಮಾರ್ಗ ಸೂಚಿಗಳನ್ನು ಪಾಲಿಸುವುದು ಕಷ್ಟಸಾಧ್ಯ ಎಂದು ಹೋಟೆಲ್ ಮಾಲೀಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ತೀವ್ರ ಸಂಕಷ್ಟದಲ್ಲಿರುವ ತಾವು ಈ ನಿಬಂಧನೆಗಳನ್ನು ಪಾಲಿಸಬೇಕೆಂದರೆ ಅಧಿಕ ವೆಚ್ಚವಾಗಲಿದ್ದು, ಆ ವೆಚ್ಚವನ್ನು ಆಹಾರ ಪದಾರ್ಥಗಳ ಮೇಲೆ ಹಾಕಿ ಗ್ರಾಹಕರ ಮೇಲೇರುವುದು ಅನಿವಾರ್ಯವಾಗಲಿದೆ. ಆದ್ದರಿಂದ ನಿಗದಿಯಂತೆ ಜೂನ್ 8 ರಿಂದ ಹೋಟೆಲ್ ಆರಂಭಿಸುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟರು.

ನಂತರ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾ ಯಣಗೌಡ, ನಿಮ್ಮ ಕಷ್ಟ ಅರ್ಥವಾಗುತ್ತದೆ. ಕೇಂದ್ರ ಸರ್ಕಾರ ನೀಡಿರುವ ನಿಬಂಧನೆ, ಮಾರ್ಗಸೂಚಿಗಳು ಇಡೀ ದೇಶಕ್ಕೆ ಅನ್ವಯ ವಾಗುವುದರಿಂದ ಹಾಗೂ ಕೊರೊನಾ ವೈರಸ್ ಸೋಂಕು ಹರಡದಂತೆ ನಾವು ಮಾರ್ಗ ಸೂಚಿಗಳನ್ನು ಅನುಸರಿಸಲೇಬೇಕಾದ ಅನಿವಾರ್ಯತೆ ಇದೆ ಎಂದರು.

ಇನ್ನು ಮುಂದೆ ನಾವು ಈ ಸೋಂಕಿನ ಜೊತೆಯೇ ಬದುಕಬೇಕಾಗಿರುವುದರಿಂದ ಮುಂಜಾಗ್ರತಾ ಕ್ರಮವಹಿಸಿ ಹೋಟೆಲ್ ಉದ್ಯಮವನ್ನು ಆರಂಭಿಸದೇ ಅನ್ಯ ಮಾರ್ಗ ವಿಲ್ಲ. ಮುಂದೆ ಪರಿಸ್ಥಿತಿ ಸಡಿಲವಾಗುವು ದೆಂಬ ಆಶಾಭಾವನೆಯೊಂದಿಗೆ ಉದ್ದಿಮೆ ಯನ್ನು ಪುನಾರಂಭ ಮಾಡುವುದು ಸೂಕ್ತ ಎಂದು ಅವರು ತಿಳಿಸಿದರು.

ಹೋಟೆಲ್, ರೆಸ್ಟೋರೆಂಟ್, ಬೇಕರಿ ಗಳಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸ ಬೇಕು ಎಂಬುದರ ಬಗ್ಗೆ ಫುಡ್‍ಸೇಫ್ಟಿ ಅಂಡ್ ಸ್ಟಾಟಿಸ್ಟಿಕಲ್ ಇನ್‍ಸ್ಟಿಟ್ಯೂಷನ್‍ನ (ಈSSI) ಪಿ.ಎಂ. ಪ್ರಸಾದ್ ಇದೇ ವೇಳೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಅಂತಿಮವಾಗಿ ಮಾರ್ಗಸೂಚಿಗಳನ್ನು ಪಾಲಿಸಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಜೂ.8ರಿಂದ ಮೈಸೂರಲ್ಲಿ ಹೋಟೆಲ್ ಗಳನ್ನು ತೆರೆದು ಗ್ರಾಹಕರಿಗೆ ಸೇವೆ ಒದಗಿ ಸಲು ಹೋಟೆಲ್ ಮಾಲೀಕರ ಸಂಘದ ಸದಸ್ಯರು ನಿರ್ಧರಿಸಿದರು. ಸಂಘದ ಪದಾ ಧಿಕಾರಿಗಳಾದ ರವಿಶಾಸ್ತ್ರಿ, ರವೀಂದ್ರ ಭಟ್, ಸುಬ್ರಹ್ಮಣ್ಯ ತಂತ್ರಿ, ಉಗ್ರಯ್ಯ ಸುರೇಶ, ಭಾಸ್ಕರ್ ಶೆಟ್ಟಿ, ನಾರಾಯಣ ಹೆಗ್ಡೆ, ನಾರಾಯಣ ಕುಂದರ ಸೇರಿದಂತೆ ಹಲವು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Translate »