ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಹೇಳಿಕೆ ಮೇಲೆ ನಿಂತಿದೆ ಶಿಕ್ಷೆಯ ಸ್ವರೂಪ
ಮೈಸೂರು

ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಹೇಳಿಕೆ ಮೇಲೆ ನಿಂತಿದೆ ಶಿಕ್ಷೆಯ ಸ್ವರೂಪ

August 30, 2021

ಹೇಳಿಕೆ ನೀಡಲು ನಿರಾಕರಿಸುತ್ತಿರುವುದೇ ಆರೋಪಿಗಳಿಗೆ ವರದಾನವಾಗಲಿದೆಯೇ?
ಪೋಷಕರೊಂದಿಗೆ ಮುಂಬೈಗೆ ತೆರಳಿದ ಸಂತ್ರಸ್ತೆ ತವರೂರಿಗೆ ಮರಳಿದ ಸಂತ್ರಸ್ತೆಯ ಸ್ನೇಹಿತ

ಮೈಸೂರು, ಆ.೨೯(ಎಂಟಿವೈ)-ಚಾಮುAಡಿಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದಲ್ಲಿ ಕಾಮುಕರಿಂದ ಅತ್ಯಾಚಾರಕ್ಕೊಳಗಾದ ಯುವತಿ ಘಟನೆ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಲು ನಿರಾಕರಿಸುತ್ತಿರುವುದು ಆರೋಪಿಗಳಿಗೆ ವರದಾನವಾಗಿ ಪರಿಣಮಿಸಬಹುದೇ ಎಂಬ ಆತಂಕ ಕಾಡುತ್ತಿದ್ದರೆ, ಪೊಲೀಸ ರಿಗೆ ತಲೆನೋವಾಗಿ ಪರಿಣಮಿಸಿದೆ.
ದುರುಳರಿಂದ ಅತ್ಯಾಚಾರಕ್ಕೊಳಗಾಗಿ ತೀವ್ರ ತೆರವಾದ ಹಲ್ಲೆಯಿಂದ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆ ಯುವತಿಗೆ ಸಾಂತ್ವನ ಹೇಳಲು ಹಲವರು ಬಯಸುತ್ತಿದ್ದುದರಿಂದ ಹಾಗೂ ಪೊಲೀಸರು ಹೇಳಿಕೆ ಪಡೆಯಲು ಬರುತ್ತಿದ್ದುದರಿಂದ ಸಂತ್ರಸ್ತೆಯ ಗುರುತು ಬಹಿರಂಗವಾಗುವ ಆತಂಕವನ್ನು ಆಕೆಯ ಪೋಷಕರು ವ್ಯಕ್ತಪಡಿಸಿದ್ದರು. ಅಲ್ಲದೇ ವಿದ್ಯಾರ್ಥಿನಿಯ ಗೌಪ್ಯತೆ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಆಕೆಯ ಪೋಷಕರು ತಮ್ಮ ಸ್ವಂತ ಸ್ಥಳ ಮುಂಬೈಗೆ ಕರೆದೊಯ್ದಿದ್ದು, ಪೊಲೀಸರ ತನಿಖೆಗೆ ಹಿನ್ನಡೆಯಾಗಿದೆ.

ಸಂತ್ರಸ್ತೆಯ ಪೋಷಕರು ಪೊಲೀಸರಿಗೆ ಹೇಳಿಕೆ ನೀಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದಲ್ಲದೆ ಯುವತಿಯು ಘಟನೆ ಕುರಿತು ಯಾರೊಂದಿಗೂ ಮಾಹಿತಿ ಹಂಚಿಕೊಳ್ಳಲು ನಿರಾಕರಿ ಸುತ್ತಿರುವುದರಿಂದ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಪ್ರಬಲ ಸಾಕ್ಷಿ ಸಲ್ಲಿಸಲು ಹಿನ್ನಡೆಯಾಗಬಹುದು ಎಂಬ ಚಿಂತೆ ಪೊಲೀಸರನ್ನು ಕಾಡಲಾರಂಭಿಸಿದೆ. ಆರೋಪಿಗಳನ್ನು ಬಂಧಿಸಿದ ಬಳಿಕ ದುಷ್ಕೃತ್ಯವೆಸಗಿದ ಆರೋಪಿಗಳನ್ನು ಗುರುತು ಹಿಡಿಯು ವಂತೆ ಸಂತ್ರಸ್ತೆಯ ಪೋಷಕರ ವಾಟ್ಸಪ್‌ಗೆ ಮೈಸೂರು ಪೊಲೀಸರು ಆರೋಪಿಗಳ ಭಾವಚಿತ್ರವನ್ನು ಕಳುಹಿಸಿದ್ದಾರೆ. ಫೋಟೋ ಕಳುಹಿಸಿ ೨೪ ಗಂಟೆಯಾದರೂ ಸಂತ್ರಸ್ತೆಯ ಪೋಷಕರಾಗಲೀ, ದೌರ್ಜನ್ಯಕ್ಕೊಳಗಾದ ಯುವತಿಯಾಗಲೀ ಪ್ರತಿಕ್ರಿಯೆ ನೀಡಿಲ್ಲ. ಈ ಬೆಳವಣ ಗೆ ಪೊಲೀಸರಿಗೆ ಹಿನ್ನಡೆಯಾಗುವಂತೆ ಕಂಡು ಬರುತ್ತಿದ್ದರೆ, ಆರೋಪಿಗಳು ಕಠಿಣ ಶಿಕ್ಷೆಯಿಂದ ಪಾರಾಗಲು ಸಾಧ್ಯವಾಗಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.
ಬಂಧಿತ ಆರೋಪಿಗಳು ಈಗಾಲೇ ಲೈಂಗಿಕ ದೌರ್ಜನ್ಯದಂತಹ ಹಲವು ದುಷ್ಕೃತ್ಯವೆಸಗಿದ್ದರೂ ಯಾರೂ ದೂರು ನೀಡಲು ಮುಂದೆ ಬರದೇ ಇರುವುದನ್ನು ಖಾತರಿಪಡಿಸಿಕೊಂಡು ದೌರ್ಜನ್ಯದಂತಹ ದುಷ್ಕೃತ್ಯವನ್ನು ಮುಂದುವರೆಸಿಕೊAಡು ಬಂದಿದ್ದಾರೆ. ಈ ಅತ್ಯಾಚಾರ ಪ್ರಕರಣದಲ್ಲೂ ಯುವತಿ ಹಾಗೂ ಆಕೆಯ ಪೋಷಕರು ದೃಢ ಮನಸ್ಸು ಮಾಡಿ ಆರೋಪಿಗಳ ವಿರುದ್ಧ ಹೇಳಿಕೆ ನೀಡದಿದ್ದರೆ ಪ್ರಬಲ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಲು ತೊಡಕಾಗಲಿದೆ.

ಊರಿಗೆ ತೆರಳಿದ ಯುವಕ: ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶಕ್ಕೆ ಸಂತ್ರಸ್ತ ಯುವತಿಯನ್ನು ಕರೆದೊಯ್ದಿದ್ದ ಆಕೆಯ ಸ್ನೇಹಿತನೂ ಇದೀಗ ತಮ್ಮ ತವರೂರಿಗೆ ತೆರಳಿದ್ದಾನೆ. ಆತನ ಪೋಷಕರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಊರಿಗೆ ಕರೆದೊಯ್ದಿ ರುವುದು ಬೆಳಕಿಗೆ ಬಂದಿದೆ. ಮೂಲತಃ ನೆರೆ ಜಿಲ್ಲೆಯ ಆ ಯುವಕ ಸಂತ್ರಸ್ತೆಯ ಗೆಳೆಯನಾಗಿದ್ದು, ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದಲ್ಲಿ ವಿಹರಿಸುತ್ತಿದ್ದಾಗ ಆ.೨೪ರಂದು ಸಂಜೆ ೭ ಗಂಟೆಯಲ್ಲಿ ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ನಂತರ ಯುವಕ ಮತ್ತು ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಉದ್ಯಮಿಯೊಬ್ಬರ ಮಗನಾಗಿರುವ ಆ ಯುವಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ತವರೂರಿಗೆ ಕಳುಹಿಸಿಕೊಡಲು ಜನಪ್ರತಿನಿಧಿಯೊಬ್ಬರ ಒತ್ತಡ ಕಾರಣವೆನ್ನ ಲಾಗಿದೆ. ಇದು ಪೊಲೀಸರ ತನಿಖೆಗೆ ಹಿನ್ನಡೆ ಆಗುತ್ತಿದೆ ಎಂದು ತಿಳಿದು ಬಂದಿದೆ. ಸದರಿ ಯುವಕನಿಗೆ ವಿವಾಹ ನಿಶ್ಚಯವಾಗಿದ್ದು, ಈ ಪ್ರಕರಣದಿಂದ ಕೌಟುಂಬಿಕ ಸಮಸ್ಯೆಗೆ ತುತ್ತಾಗಬಹುದೆಂಬ ಆತಂಕದಿAದ ಯುವಕನನ್ನು ಮೈಸೂರಿನಿಂದ ತವರೂರಿಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Translate »