ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೦೬ನೇ ಜಯಂತಿ ಆಚರಣೆ
ಮೈಸೂರು

ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೦೬ನೇ ಜಯಂತಿ ಆಚರಣೆ

August 30, 2021

ನಿರಂಜನ ಮಠದ ಹೋರಾಟದಲ್ಲಿ ಮೊದಲ ದಿನದಿಂದಲೂ ಇದ್ದೇನೆ ; ಮೇಯರ್ ಸುನಂದಾ ಪಾಲನೇತ್ರ

ಮೈಸೂರು,ಆ.೨೯(ಪಿಎಂ)-ಶ್ರೀ ನಿರಂಜನ ಮಠ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಮಠದ ಅಸ್ಮಿತೆ ಉಳಿಸುವ ನಿಟ್ಟಿನಲ್ಲಿ ಮಠದ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಹೋರಾಟದಲ್ಲಿ ಭಾನುವಾರ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಯವರ ೧೦೬ನೇ ಜಯಂತಿ ಆಚರಿಸಲಾಯಿತು.

ಅತಿಥಿಯಾಗಿ ಪಾಲ್ಗೊಂಡಿದ್ದ ಮೇಯರ್ ಸುನಂದ ಪಾಲನೇತ್ರ, ರಾಜೇಂದ್ರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ನೋವು, ತುಳಿತ ಎಲ್ಲವನ್ನೂ ಅನುಭವಿಸಿದರೂ ಸಮುದಾಯದ ಹಾರೈಕೆಯಿಂದ ಇಂದು ಮೇಯರ್ ಸ್ಥಾನ ಅಲಂಕರಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಅವರ ಆರ್ಶೀವಾದ ದಿಂದ ಮೇಯರ್ ಸ್ಥಾನ ದೊರಕುವಂತಾಗಿದೆ. ೨೫ ವರ್ಷಗಳ ಕಾಲ ಪಾಲಿಕೆಯಲ್ಲಿ ಸದಸ್ಯೆ ಯಾಗಿ ಸೇವೆ ಸಲ್ಲಿಸಿ ಇಂದು ಒಂದು ಸ್ಥಾನಕ್ಕೆ ಬಂದಿ ದ್ದೇನೆ. ಇದು ನಮ್ಮ ಮಠ ಎಂಬ ಭಾವನೆಯಿಂದ ನಿರಂಜನ ಮಠದ ಹೋರಾಟದಲ್ಲಿ ಮೊದಲ ದಿನದಿಂ ದಲೂ ಇದ್ದೇನೆ ಎಂದು ಬೆಂಬಲ ಸೂಚಿಸಿದರು.

ರಾಜೇಂದ್ರ ಶ್ರೀಗಳಿಗೆ ನುಡಿ ನಮನ ಸಲ್ಲಿಸಿದ ಶರಣ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಮ.ಗು. ಸದಾನಂದಯ್ಯ ಮಾತನಾಡಿ, ೫೦ ವರ್ಷಗಳ ಹಿಂದೆ ಹಳೆ ಮೈಸೂರು ಪ್ರಾಂತ್ಯದ ಸಾಮಾಜಿಕ ಪರಿಸ್ಥಿತಿ ಅವಲೋಕಿಸಿದರೆ ಆ ಬಳಿಕ ಪರಿವರ್ತನೆ ಯಾಗಿದೆ. ಸಮಗ್ರ ಶಿಕ್ಷಣ ಒದಗಿಸುವ ನೇತಾರರಾಗಿ ಶಿವರಾತ್ರಿ ರಾಜೇಂದ್ರ ಶ್ರೀಗಳು ಅಂದು ಇಟ್ಟ ಒಂದು ಹೆಜ್ಜೆ ಇಂತಹ ಉನ್ನತ ಬದಲಾವಣೆಗೆ ಕಾರಣ ವಾಗಿದೆ. ವಿದ್ಯೆಯ ಜೊತೆಗೆ ವಿದ್ಯಾರ್ಥಿನಿಲಯ ಗಳನ್ನು ಶ್ರೀಗಳು ತೆರೆದರು. ಅವರಿಗೆ ಸಂಕಲ್ಪ ಶಕ್ತಿ ಇತ್ತು. ಬಡ ಮತ್ತು ಗ್ರಾಮೀಣ ಮಕ್ಕಳಿಗೆ ವಿದ್ಯೆ ಅಗತ್ಯ ಎಂಬುದನ್ನು ಅರಿತ್ತಿದ್ದರು ಎಂದು ಸ್ಮರಿಸಿದರು.

ಸಾಂಸ್ಕೃತಿಕ, ಶೈಕ್ಷಣ ಕ, ಆರೋಗ್ಯ, ಔದ್ಯೋ ಗಿಕ ಕ್ಷೇತ್ರಗಳಲ್ಲಿ ಅವರು ಈ ಭಾಗದಲ್ಲಿ ಹಾಕಿದ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. ಶ್ರೀಗಳ ೭೦ನೇ ಜನ್ಮದಿನದ ಸಂದರ್ಭದಲ್ಲಿ `ಧಾರ್ಮಿಕ ಕ್ಷೇತ್ರವನ್ನು ಜ್ಞಾನ ಕ್ಷೇತ್ರವಾಗಿ ಪರಿವರ್ತಿಸಿದ ಮಹಾತಪಸ್ವಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ’ ಎಂದು ಕುವೆಂಪು ಬಣ ್ಣಸಿದ್ದಾರೆ. ಶ್ರೀಗಳು ಹಾಕಿ ಕೊಟ್ಟ ಕಾರ್ಯಕ್ಷೇತ್ರದಿಂದ ಈ ಭಾಗದ ಎಲ್ಲಾ ವರ್ಗದವರ ಶೈಕ್ಷಣ ಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿ ಸುಧಾರಣೆ ಕಂಡಿದೆ. ರಾಜೇಂದ್ರ ಶ್ರೀಗಳೆಂಬ ಮಹಾವೃಕ್ಷದಡಿಯಲ್ಲಿ ನಾವೆಲ್ಲಾ ಬೆಳೆದಿದ್ದೇವೆ ಎಂದು ನುಡಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎಸ್.ಲೋಕೇಶ್, ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಹಿನಕಲ್ ಬಸವರಾಜು ಮತ್ತಿತರರು ಹಾಜರಿದ್ದರು.

Translate »