ಮೈಸೂರು ಪಾಲಿಕೆ ವಾರ್ಡ್ ೫೯ರ ವ್ಯಾಪ್ತಿಯ ವಿವೇಕಾನಂದ ಕ್ರೀಡಾಂಗಣ ಅಭಿವೃದ್ಧಿಗೆ ಪಾಲಿಕೆಯಿಂದ ಅನುದಾನ
ಮೈಸೂರು

ಮೈಸೂರು ಪಾಲಿಕೆ ವಾರ್ಡ್ ೫೯ರ ವ್ಯಾಪ್ತಿಯ ವಿವೇಕಾನಂದ ಕ್ರೀಡಾಂಗಣ ಅಭಿವೃದ್ಧಿಗೆ ಪಾಲಿಕೆಯಿಂದ ಅನುದಾನ

August 30, 2021

ಮಕ್ಕಳ ಕ್ರೀಡಾ ಚಟುವಟಿಕೆಗೆ ಪೂರಕವಾಗಿ ೯೧ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ

ರಾಷ್ಟಿçÃಯ ಕ್ರೀಡಾ ದಿನಾಚರಣೆಯಲ್ಲಿ ಮೇಯರ್ ಸುನಂದಾ ಪಾಲನೇತ್ರ ಮಾಹಿತಿ

ಹಾಕಿ ಮಾಂತ್ರಿಕ ಮೇ. ಧ್ಯಾನ್‌ಚಂದ್ ಸ್ಮರಣೆ

ಸಾಧನೆಗೆ ಸೌಲಭ್ಯವಷ್ಟೇ ಅಲ್ಲ, ಸ್ವಯಂಪ್ರೇರಣೆಯೂ ಮುಖ್ಯ…
ಕೇವಲ ಸೌಲಭ್ಯ ಪರಿಪೂರ್ಣವಾಗಿದ್ದರೆ ಮಾತ್ರ ಕ್ರೀಡೆಯಲ್ಲಿ ಸಾಧನೆ ಎಂಬುದು ಸಾಧ್ಯವಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಕ್ರೀಡಾಪಟುವಲ್ಲಿ ಸ್ವಯಂಪ್ರೇರಣೆಯಿAದ ತೊಡಗಿಸಿಕೊಳ್ಳುವ ಗುಣ ಇರಬೇಕು. ಸಾಧಿಸುವ ಛಲದೊಂದಿಗೆ ಮುನ್ನಡೆಯಬೇಕು. ಕ್ರೀಡಾಪಟುವಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಅತ್ಯಂತ ಮುಖ್ಯವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಕ್ರೀಡಾಪಟುಗಳು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
-ಎಂ.ಮುತ್ತುರಾಜ್, ಮೈಸೂರು ವಿಭಾಗದ ಗುಪ್ತಚರಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿ

ಮೈಸೂರು,ಆ.೨೯(ಪಿಎಂ)-ಮೈಸೂರು ಮಹಾನಗರ ಪಾಲಿಕೆ ವಾರ್ಡ್ ೫೯ರ ವ್ಯಾಪ್ತಿಯ ವಿವೇಕಾನಂದ ಕ್ರೀಡಾಂಗಣದ ಅಭಿವೃದ್ಧಿಗೆ ಪಾಲಿಕೆಯಿಂದ ೯೧ ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಪೂರಕ ವಾಗಿ ಸದರಿ ಕ್ರೀಡಾಂಗಣ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ವಾರ್ಡಿನ ಪಾಲಿಕೆ ಸದಸ್ಯರೂ ಆದ ಮೇಯರ್ ಸುನಂದ ಪಾಲನೇತ್ರ ತಿಳಿಸಿದರು.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂ ಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ೨೦೨೧-೨೨ನೇ ಸಾಲಿನ ರಾಷ್ಟಿçÃಯ ಕ್ರೀಡಾ ದಿನಾಚರಣೆ (ಹಾಕಿ ಮಾಂತ್ರಿಕ ಮೇ.ಧ್ಯಾನ್‌ಚಂದ್ ಜನ್ಮದಿನ) ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ವಾರ್ಡ್ನಲ್ಲಿದ್ದ ಚಿಕ್ಕ ಉದ್ಯಾನವನ ವನ್ನು ಕ್ರೀಡಾಂಗಣವಾಗಿ ಪರಿವರ್ತಿಸಿ, ಮಕ್ಕಳ ಕ್ರೀಡಾ ಚಟುಟವಿಕೆಗೆ ಸಾಕಷ್ಟು ಅವಕಾಶ ಕಲ್ಪಿಸಲಾಗಿದೆ. ವಿವೇಕಾನಂದ ಕ್ರೀಡಾಂಗಣ ಎಂದು ನಾಮಕರಣ ಮಾಡಿ ರುವ ಇದರ ಅಭಿವೃದ್ಧಿಗೆ ಪಾಲಿಕೆಯಿಂದ ಅನುದಾನ ಕಲ್ಪಿಸಲಾಗಿದೆ. ಕ್ರೀಡಾ ಇಲಾಖೆ ಸಹಕಾರದೊಂದಿಗೆ ಸದರಿ ಕ್ರೀಡಾಂಗಣ ವನ್ನು ಮಕ್ಕಳು ಕ್ರೀಡಾ ಚಟುವಟಿಕೆಗೆ ಪೂರಕವಾಗಿ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಶಿಕ್ಷಣ, ಕ್ರೀಡೆ ಸೇರಿದಂತೆ ಎಲ್ಲಾ ವಲಯ ದಲ್ಲೂ ಮಹಿಳಾ ಸಮುದಾಯ ಮತ್ತಷ್ಟು ಛಾಪು ಮೂಡಿಸಬೇಕು. ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಯವರು ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ಕ್ರೀಡಾ ಸಾಧಕರು ರಾಜ್ಯದ ಮುಖ್ಯಮಂತ್ರಿಗಳ ಶಿಫಾರಸ್ಸಿನ ಮೂಲಕ ಪ್ರಧಾನಿಯವರಿಂದ ಅಗತ್ಯ ಸಹಕಾರ ಪಡೆದುಕೊಳ್ಳಬಹುದು ಎಂದು ಹೇಳಿದರು.

ಮೇ. ಧ್ಯಾನ್‌ಚಂದ್ ಅವರ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿದ ಮೈಸೂರು ವಿಭಾ ಗದ ಗುಪ್ತಚರ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಮಾತ ನಾಡಿ, ಮೇ. ಧ್ಯಾನ್‌ಚಂದ್ರ ಅವರ ಕುರಿತಂತೆ ನಮ್ಮ ಶಾಲಾ ದಿನಗಳಿಂದಲೇ ಓದಿ ತಿಳಿದಿದ್ದೇವೆ. ಅವರು ಹಾಕಿಯಲ್ಲಿ ಸಾಧಿಸಿದ್ದ ಪರಿಣ ತಿ ಮತ್ತು ಕೌಶಲ್ಯ ಇಡೀ ಜಗತ್ತಿನಲ್ಲೇ ಖ್ಯಾತಿಗೆ ಒಳಗಾಗಿತ್ತು. ೧೯೩೬ರಲ್ಲಿ ಅವರು ಪಂದ್ಯಾವಳಿವೊAದರಲ್ಲಿ ಪಾಲ್ಗೊ ಳ್ಳುವ ಸಂಬAಧ ಇಂಗ್ಲೆAಡ್‌ನ ಪ್ರತಿಷ್ಠಿತ ಪತ್ರಿಕೆಯೊಂದು `ನಾಳೆ ಕ್ರೀಡಾಂಗಣದಲ್ಲಿ ಹಾಕಿ ಮಾತ್ರವಲ್ಲ, ಜೊತೆಗೆ ಮ್ಯಾಜಿಕ್ ಕೂಡ ನಡೆಯಲಿದೆ’ ಎಂದು ಸುದ್ದಿ ಪ್ರಕಟಿಸಿತ್ತು. ಅಷ್ಟರ ಮಟ್ಟಿಗೆ ಅವರು ಹಾಕಿಯಲ್ಲಿ ಚತುರತೆ ಸಾಧಿಸಿದ್ದರು ಎಂದು ಸ್ಮರಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಮಾತನಾಡಿ, ಪ್ರತಿವರ್ಷ ಮೇ. ಧ್ಯಾನ್ ಚಂದ್ ಅವರ ಜನ್ಮದಿನದ ಪ್ರಯುಕ್ತ ಆ.೨೯ ಅನ್ನು ರಾಷ್ಟಿçÃಯ ಕ್ರೀಡಾ ದಿನಾಚರಣೆ ಯಾಗಿ ಆಚರಿಸಲಾಗುತ್ತಿದೆ. ಕ್ರೀಡಾ ದಿನ ದಂದು ಕ್ರೀಡೆಗಳನ್ನು ಪ್ರಗತಿಯತ್ತ ಮುನ್ನಡೆ ಸುವ ಸಂಕಲ್ಪ ಮಾಡಬೇಕಿದೆ. ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ಯುವ ಕ್ರೀಡಾಪಟುಗಳ ಆಶಯ ಮತ್ತು ನಿರೀಕ್ಷೆಗಳನ್ನು ಗಂಭೀರ ವಾಗಿ ಪರಿಗಣ ಸುವತ್ತ ಗಮನ ನೀಡುವ ಸಮಯವೂ ಇದಾಗಿದೆ ಎಂದು ಹೇಳಿದರು. ಅಂತಾರಾಷ್ಟಿçÃಯ ಕ್ರೀಡಾಪಟು ಎಂ.ಆರ್. ಧನುಷಾ, ಪಾಲಿಕೆ ಸದಸ್ಯ ಸತ್ಯರಾಜು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ. ಗೋವಿಂದರಾಜು ಮತ್ತಿತರರು ಹಾಜರಿದ್ದರು.

 

Translate »