ಮೈಸೂರು, ಸೆ.3-ಮೈಸೂರಿನಲ್ಲಿ ಗುರುವಾರ 475 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 19,828ಕ್ಕೆ ಏರಿಕೆಯಾಗಿದೆ. ಇಂದು 237 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 13, 329 ಮಂದಿ ಗುಣಮುಖ ರಾಗಿದ್ದಾರೆ. ಗುರುವಾರ 8 ಮಂದಿ ಮೃತಪಟ್ಟಿದ್ದು, ಸೋಂಕಿ ನಿಂದ ಒಟ್ಟು 475 ಮಂದಿ ಮೃತಪಟ್ಟಂತಾಗಿದೆ. ಉಳಿದ 6024 ಸಕ್ರಿಯ ಸೋಂಕಿತರ ಪೈಕಿ 298 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 110 ಮಂದಿ ಡೆಡಿ ಕೇಟೆಡ್ ಹೆಲ್ತ್‍ಕೇರ್‍ನಲ್ಲಿ, 907 ಮಂದಿ ಕೋವಿಡ್ ಕೇರ್ ಸೆಂಟರ್ ನಲ್ಲಿ, 310 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, 249 ಮಂದಿ ಖಾಸಗಿ ಕೇರ್ ಸೆಂಟರ್‍ನಲ್ಲಿ, 4150 ಮಂದಿ ಹೋಂ ಐಸೋಲೇಷನ್‍ನಲ್ಲಿದ್ದಾರೆ. ಇಂದು ದೃಢಪಟ್ಟ ಸೋಂಕಿತರು ವಾಸಿಸುತ್ತಿದ್ದ 161 ಪ್ರದೇಶಗಳಲ್ಲಿ ಕಂಟೇನ್ಮೆಂಟ್ ಜೋನ್ ಎಂದು ಜಿಲ್ಲಾಡಳಿತ ಘೋಷಿಸಿದೆ.
ರಾಜ್ಯದ ವರದಿ: ರಾಜ್ಯದಲ್ಲಿ ಇಂದು 8865 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ 3,70,206 ಮಂದಿಗೆ ಸೋಂಕು ತಗುಲಿದಂತಾಗಿದೆ. ಇಂದು 7,122 ಮಂದಿ ಸೇರಿದಂತೆ ಈವರೆಗೆ 2,68,035 ಮಂದಿ ಗುಣಮುಖರಾಗಿದ್ದರೆ, ಗುರುವಾರ 104 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 6054ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 96098 ಸಕ್ರಿಯ ಸೋಂಕಿತರಿದ್ದಾರೆ. ಬೆಂಗಳೂರಿನಲ್ಲಿ 3189, ಬಾಗಲಕೋಟೆ 123, ಬಳ್ಳಾರಿ 424, ಬೆಳಗಾವಿ 454, ಬೆಂಗಳೂರು ಗ್ರಾಮಾಂತರ 160, ಬೀದರ್ 56, ಚಾಮ ರಾಜನಗರ 35, ಚಿಕ್ಕಬಳ್ಳಾಪುರ 104, ಚಿಕ್ಕಮಗಳೂರು 123, ಚಿತ್ರದುರ್ಗ 151, ದಕ್ಷಿಣ ಕನ್ನಡ 316, ದಾವಣಗೆರೆ 222, ಧಾರವಾಡ 342, ಗದಗ 183, ಹಾಸನ 252, ಹಾವೇರಿ 139, ಕಲಬುರಗಿ 195, ಕೊಡಗು 61, ಕೋಲಾರ 103, ಕೊಪ್ಪಳ 276, ಮಂಡ್ಯ 293, ಮೈಸೂರು 475, ರಾಯಚೂರು 161, ರಾಮನಗರ 67, ಶಿವಮೊಗ್ಗ 251, ತುಮಕೂರು 132, ಉಡುಪಿ 228, ಉತ್ತರ ಕನ್ನಡ 182, ವಿಜಯಪುರ 131, ಯಾದ ಗಿರಿಯಲ್ಲಿ 112 ಪ್ರಕರಣ ದಾಖಲಾಗಿದೆ.