ಮೈಸೂರಲ್ಲಿ ಸೋಂಕಿತರ ಸಂಖ್ಯೆ ಕೊಂಚ ಇಳಿಮುಖ: ಶನಿವಾರ 536 ಜನರಿಗೆ ಸೋಂಕು
ಮೈಸೂರು

ಮೈಸೂರಲ್ಲಿ ಸೋಂಕಿತರ ಸಂಖ್ಯೆ ಕೊಂಚ ಇಳಿಮುಖ: ಶನಿವಾರ 536 ಜನರಿಗೆ ಸೋಂಕು

April 25, 2021

ಆದರೆ ರಾಜ್ಯದಲ್ಲಿ ಮಹಾಸ್ಫೋಟ: 29,438 ಮಂದಿಗೆ ಕೊರೊನಾ
ಮೈಸೂರು,ಏ.24(ಎಸ್‍ಬಿಡಿ)-ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪಾಸಿ ಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾದಂತಿದ್ದು, ರಾಜ್ಯ ದಲ್ಲಿ ಮಾತ್ರ 30 ಸಾವಿರ ಗಡಿ ತಲುಪಿದೆ. ಮೈಸೂರು ನಗರದಲ್ಲಿ 365, ಮೈಸೂರು ತಾಲೂಕು 46, ಕೆ.ಆರ್. ನಗರ 31, ತಿ.ನರಸೀಪುರದಲ್ಲಿ 25, ಹುಣ ಸೂರು 24, ಹೆಚ್.ಡಿ.ಕೋಟೆ 13, ಪಿರಿಯಾಪಟ್ಟಣ 10 ಹಾಗೂ ನಂಜನಗೂಡು ತಾಲೂಕಿನಲ್ಲಿ 2 ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ 536 ಜನರಿಗೆ ಸೋಂಕು ದೃಢಪಟ್ಟಿದ್ದು, 637 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದ ರೊಂದಿಗೆ ಒಟ್ಟು ಸೋಂಕು ಬಾಧಿತರ ಸಂಖ್ಯೆ 65,992ಕ್ಕೆ ಹಾಗೂ ಗುಣಮುಖ ರಾದವರ ಸಂಖ್ಯೆ 59,926ಕ್ಕೆ ಹೆಚ್ಚಿದೆ. ಇಂದು 63 ವರ್ಷದ ವೃದ್ಧೆ, 76 ವರ್ಷದ ವೃದ್ಧ, ನಿನ್ನೆ 75 ವರ್ಷದ ವೃದ್ಧ, ಏ.22 ರಂದು 45 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿರುವುದಾಗಿ ಬುಲೆಟಿನ್‍ನಲ್ಲಿ ತಿಳಿಸಲಾಗಿದ್ದು, ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1,144ಕ್ಕೆ ಹೆಚ್ಚಿದೆ.

ಗುಣಮುಖರಾದವರು ಹಾಗೂ ಸಾವಿನ ಸಂಖ್ಯೆ ಹೊರತುಪಡಿಸಿ ಜಿಲ್ಲೆಯಲ್ಲಿನ್ನು 4,922 ಜನರಲ್ಲಿ ಸೋಂಕು ಸಕ್ರಿಯವಾಗಿದ್ದು, ಇವರಲ್ಲಿ ರೋಗ ಲಕ್ಷಣಗಳಿಲ್ಲದ ಹಾಗೂ ಸಾಧಾರಣ ಲಕ್ಷಣಗಳಿರುವ 1,129 ಸೋಂಕಿತರು ಹೋಂ ಐಸೋಲೇಷನ್‍ನಲ್ಲಿ ದ್ದಾರೆ. ಇನ್ನುಳಿದವರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಇತರೆ ನಿಗಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ನಿತ್ಯ 8 ಸಾವಿ ರಕ್ಕೂ ಹೆಚ್ಚು ಜನರಿಗೆ ಕೋವಿಡ್ ಪರೀಕ್ಷೆ ಮಾಡ ಲಾಗುತ್ತಿದ್ದು, ಶನಿವಾರವೂ 8,544 ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಆರಂಭದಿಂದ ಇಲ್ಲಿಯ ವರೆಗೆ ಒಟ್ಟು 11,45,818 ಟೆಸ್ಟಿಂಗ್ ನಡೆಸಲಾಗಿದೆ.

ರಾಜ್ಯದಲ್ಲಿ 30 ಸಾವಿರ: ಮೈಸೂರಲ್ಲಿ ಸೋಂಕು ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿರುವ ನಡುವೆ ರಾಜ್ಯದಲ್ಲಿ ಕೊರೊನಾ ಅಬ್ಬರ ಮಿತಿ ಮೀರುವ ಹಂತ ತಲುಪಿದೆ. ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮೈಸೂರು 536, ಬಾಗಲಕೋಟೆ 105, ಬಳ್ಳಾರಿ 731, ಬೆಳಗಾವಿ 313, ಬೆಂಗಳೂರು ಗ್ರಾಮಾಂತರ 684,ಬೆಂಗಳೂರು ನಗರ 17342, ಬೀದರ್ 265, ಚಾಮ ರಾಜನಗರ 295, ಚಿಕ್ಕಬಳ್ಳಾಪುರ 506, ಚಿಕ್ಕಮಗಳೂರು 185, ಚಿತ್ರದುರ್ಗ 114, ದಕ್ಷಿಣಕನ್ನಡ 517, ದಾವಣಗೆರೆ 254, ಧಾರವಾಡ 385, ಗದಗ 76, ಹಾಸನ 823, ಹಾವೇರಿ 92, ಕಲಬುರಗಿ 791, ಕೊಡಗು 196, ಕೋಲಾರ 373, ಕೊಪ್ಪಳ 266, ಮಂಡ್ಯ 688, ರಾಯಚೂರು 497, ರಾಮನಗರ 385, ಶಿವಮೊಗ್ಗ 266, ತುಮ ಕೂರು 1559, ಉಡುಪಿ 403, ಉತ್ತರಕನ್ನಡ 185, ವಿಜಯಪುರ 411 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 95 ಸೇರಿ ಶನಿ ವಾರ ಒಟ್ಟು 29,438 ಹೊಸ ಪ್ರಕರಣ ವರದಿಯಾಗಿವೆ.

200ಕ್ಕೂ ಹೆಚ್ಚು ಸಾವು: ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಸೋಂಕಿನಿಂದ ಒಂದೇ ದಿನ 149 ಮಂದಿ ಮೃತಪಟ್ಟಿದ್ದಾರೆ. ಇನ್ನು ಕಲಬುರ್ಗಿ ಜಿಲ್ಲೆಯಲ್ಲಿ 8, ಕೋಲಾರದಲ್ಲಿ 6, ಧಾರವಾಡದಲ್ಲಿ 5, ಮೈಸೂರು 4, ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾವೇರಿ, ಬಳ್ಳಾರಿ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ 3, ಹಾಸನ, ಕೊಡಗು, ದಕ್ಷಿಣ ಕನ್ನಡ, ದಾವಣಗೆರೆ, ರಾಯಚೂರು, ಉತ್ತರಕನ್ನಡ ಹಾಗೂ ವಿಜಯಪುರದಲ್ಲಿ ತಲಾ 2, ಬೆಳಗಾವಿ, ಚಾಮ ರಾಜನಗರ, ಚಿಕ್ಕಬಳ್ಳಾಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 1 ಪ್ರಕರಣ ಸೇರಿ ರಾಜ್ಯದಲ್ಲಿ ಶನಿವಾರ 208 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 14,283ಕ್ಕೆ ಹೆಚ್ಚಿದೆ. ಒಟ್ಟು ಸೋಂಕು ಬಾಧಿತರ ಸಂಖ್ಯೆ 13,04,397, ಒಟ್ಟು ಗುಣಮುಖರಾದವರ ಸಂಖ್ಯೆ 10,55,612 ದಾಖಲಾಗಿದೆ. ಪಾಸಿಟಿವ್ ಪ್ರಕರಣಗಳಿಗಿಂತ ಗುಣ ಮುಖರಾದವರ ಸಂಖ್ಯೆ ಬಾರೀ ಕಡಿಮೆ ಇರುವುದ ರಿಂದ ಸಕ್ರಿಯ ಪ್ರಕರಣ 2,34,483ಕ್ಕೆ ಹೆಚ್ಚಿದೆ.

Translate »