ಮೈಸೂರು: ಮೈಸೂರು ಬಿಬಿ ಗಾರ್ಡನ್‍ನಲ್ಲಿರುವ ಶ್ರೀಕೃಷ್ಣರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಆಚರಿಸಿಕೊಳ್ಳು ತ್ತಿದೆ. ಇದರ ಅಂಗವಾಗಿ ಶಾಲಾವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಯನ್ನು ಸ್ಥಾಪಿಸ ಲಾಗುತ್ತಿದ್ದು, ಡಿ.9ರಂದು ಪುತ್ಥಳಿಯ ಮೆರವಣಿಗೆ ಏರ್ಪಡಿಸಲಾಗಿದೆ. ಡಿ.9ರಂದು ಬೆಳಿಗ್ಗೆ 9ಗಂಟೆಗೆ ಜೆಎಸ್‍ಎಸ್ ವಿದ್ಯಾಪೀಠದ ಬಳಿಯಿರುವ ಶ್ರೀ ಬಸವೇಶ್ವರ ಪುತ್ಥಳಿ ಬಳಿಯಿಂದ ಮೆರವಣಿಗೆ ಆರಂಭ ವಾಗಲಿದ್ದು, ಪ್ರಮುಖ ಬೀದಿಗಳಲ್ಲಿ ಸಾಗಿ ಶಾಲಾ ವರಣದಲ್ಲಿ ಸಮಾವೇಶಗೊಳಲಿದೆ. ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಆಗಮಿಸುವಂತೆ ಶಾಲೆಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ಕೋರಿದೆ. ಮಾಹಿತಿಗೆ 99166-50106 ಸಂಪರ್ಕಿಸಬಹುದು.
