ಜಿಲ್ಲೆಯ ಜನತೆ ಮನೆಬಾಗಿಲಿಗೆ ಕುಡಿಯುವ ನೀರು
ಮಂಡ್ಯ

ಜಿಲ್ಲೆಯ ಜನತೆ ಮನೆಬಾಗಿಲಿಗೆ ಕುಡಿಯುವ ನೀರು

August 29, 2021

ಕಿಕ್ಕೇರಿ, ಆ.28- ಆರೋಗ್ಯ ಸಮಸ್ಯೆಗೆ ಪ್ರಮುಖವಾಗಿರುವ ಅಶುದ್ಧ ನೀರಿನ ಬದಲು ಶುದ್ಧ ಜಲವನ್ನು ಜನರ ಮನೆಬಾಗಿಲಿಗೆ ತಲುಪಿಸುವ ಮಹತ್ತರ ಯೋಜನೆ ತಮ್ಮ ಸರ್ಕಾರದಿಂದ ಆಗುತ್ತಿದ್ದು, ಬಹುದೊಡ್ಡ ಕನಸು ನನಸಾಗುವ ಕಾಲ ಬಂದಿದೆ ಎಂದು ಕ್ರೀಡಾ ಹಾಗೂ ಕೋವಿಡ್ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಸಂತಸ ವ್ಯಕ್ತಪಡಿಸಿದರು.
ಕೆ.ಆರ್.ಪೇಟೆ ತಾಲೂಕಿನ ಶಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ `ಮನೆ ಮನೆಗೆ ಗಂಗೆ ಜಲಧಾರಾ ಯೋಜನೆ’ಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೊರೊನಾ ಬದುಕುವ ಪಾಠವನ್ನು ಕಲಿಸಿದೆ. ಮೊದಲು ಮಾನವರಾಗಿ ಮೌಲ್ಯ ಯುತ ಬದುಕು ರೂಢಿಸಿಕೊಳ್ಳುವ ಹಾಗೂ ರೋಗ ಬರುವ ಮುನ್ನ ಎಚ್ಚರಿಕೆ ಅವಶ್ಯ ಎನ್ನುವಂತೆ ಬಹುತೇಕ ಕಾಯಿಲೆ ನೀರಿನಿಂದ ಎಂಬುದನ್ನು ತಿಳಿದು ಜನರ ಆರೋಗ್ಯ ಕಲ್ಯಾಣಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರದ ಮಹತ್ತರ ಜಲಧಾರಾ ಯೋಜನೆ ಅನುಷ್ಠಾನ ವಾಗಿದೆ. ಜಿಲ್ಲೆಗೆ 1,700 ಕೋಟಿ ರೂ. ಅನು ದಾನ ಬಂದಿದ್ದು, ತಾಲೂಕಿಗೆ ಸುಮಾರು 230 ಕೋಟಿ ರೂ. ಅನುದಾನ ಮೀಸಲಾ ಗಿದೆ. ಜಲಧಾರಾ ಯೋಜನೆಯಡಿ ಕೆಆರ್‍ಎಸ್‍ನಿಂದ ತಾಲೂಕಿಗೆ ನೀರು ಸರಬ ರಾಜಾಗಲಿದ್ದು, ಸುಮಾರು 3 ಸ್ಥಳಗಳಲ್ಲಿ ಶುದ್ಧೀಕರಣವಾಗಲಿದೆ. ಕೆಆರ್‍ಎಸ್, ಅಶೋಕ ನಗರ ಹಾಗೂ ಪ್ರತಿ ಗ್ರಾಮದಲ್ಲಿ ನೀರು ಶುದ್ಧೀಕರಣವಾಗುವುದರಿಂದ ಜನಸಾಮಾನ್ಯ ರಿಗೆ ಶುದ್ಧ ನೀರು ಸಿಗಲಿದೆ. ಇದರಿಂದ ಉತ್ತಮ ಆರೋಗ್ಯ ಲಭಿಸಿದೆ. ಒಬ್ಬ ವ್ಯಕ್ತಿಗೆ 55 ಲೀ.ನಂತೆ ಮನೆಯಲ್ಲಿರುವ 4 ಮಂದಿಗೆ 220 ಲೀ. ನೀರು ಉಚಿತವಾಗಿ ಲಭಿಸಲಿದೆ ಎಂದು ಮಾಹಿತಿ ನೀಡಿದರು.

ಅಶುಚಿತ್ವ ನೀರು ಸೇವನೆಯಿಂದ ಶೇ.90ರಷ್ಟು ರೋಗ ಕಾಡುತ್ತಿದ್ದು, ಎಲ್ಲರ ಮನೆಗೆ ಶುದ್ಧ ಗಂಗೆ ಸಿಗಲಿದೆ. ದುಡಿದ ಬಹುತೇಕ ಹಣ ದವಾಖಾನೆಗೆ ಕಟ್ಟುವುದು ತಪ್ಪಲಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಮಂದಗತಿಗೆ ಕೊರೊನಾ ಕಾರಣವಾ ಗಿದ್ದು, ಕಾರ್ಮಿಕರ ಕೊರತೆ ಮತ್ತಿತರ ಸಮಸ್ಯೆ ಕಾಡುತ್ತಿದೆ. ಖೇಲೋ ಇಂಡಿಯಾ 2022ರ ಮಾ.5ರಂದು ನಡೆಯುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿ ದ್ದಾರೆ. ಸುಮಾರು 7,500 ಕ್ರೀಡಾಪಟು ಗಳು ದೇಶದ ವಿವಿಧೆಡೆಯಿಂದ ಆಗಮಿಸ ಲಿದ್ದಾರೆ. ಕ್ರೀಡಾಕೂಟದ ಯಶಸ್ಸಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್ಮುಲ್ ನಿರ್ದೇಶಕ ಕೆ.ಜಿ.ತಮ್ಮಣ್ಣ, ಗ್ರಾಪಂ ಅಧ್ಯಕ್ಷ ದೇವರಾಜು, ಮುಖಂಡ ರಾದ ಶಟ್ಟಹಳ್ಳಿ ಕೃಷ್ಣೇಗೌಡ, ಕರ್ತೆನಹಳ್ಳಿ ಸುರೇಶ್, ವಿನೋದ್, ರಘು, ಪ್ರದೀಪ್, ಶ್ರೀಶೈಲ, ದೇವರಾಜು ಉಪಸ್ಥಿತರಿದ್ದರು.
ಕ್ಯಾಪ್ಷನ್

Translate »