ಕೆಆರ್‍ಎಸ್ ಹಿನ್ನೀರಿನಲ್ಲಿ ಹಾಯಿದೋಣಿ ಸ್ಪರ್ಧೆ
ಮಂಡ್ಯ, ಮೈಸೂರು

ಕೆಆರ್‍ಎಸ್ ಹಿನ್ನೀರಿನಲ್ಲಿ ಹಾಯಿದೋಣಿ ಸ್ಪರ್ಧೆ

August 29, 2021

ಶ್ರೀರಂಗಪಟ್ಟಣ,ಆ,28(ವಿನಯ್ ಕಾರೇಕುರ)-ಕೆ.ಆರ್.ಸಾಗರ ಅಣೆಕಟ್ಟೆಗೆ ಉತ್ತರ ಭಾಗದಲ್ಲಿರುವ ಕಾವೇರಿ ನದಿ ಹಿನ್ನಿರಿನಲ್ಲಿ ಆಯೋಜಿಸಿರುವ ಮೈಸೂರು ಮಲ್ಟಿ ಕ್ಲಾಸ್ ಸೇಲಿಂಗ್ ಚಾಪಿಯನ್‍ಶಿಪ್ ಮೊದಲನೇ ದಿನವಾದ ಶನಿವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ವಿವಿಧ ಸ್ಪರ್ಧೆಗಳು ನಡೆಯಿತು.

ಎಂ.ಇ.ಜಿ ಮದ್ರಾಸ್ ಸಾಪರ್ಸ್‍ನ ತ್ರಿಶ್ನಾ ಸೇಲಿಂಗ್ ಕ್ಲಬ್, ಯಾಚಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ನೇತೃತ್ವದಲ್ಲಿ ಈ ಸ್ಪರ್ಧೆಗಳನ್ನು ಆಯೋಜಿದ್ದು, ಇಂದು ನಡೆದ ಮೊದಲನೇ ಸುತ್ತಿನ ಹಾಯಿದೋಣಿಯ ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ವಿವಿಧೆಡೆಯ ಸ್ಪರ್ಧಿಗಳು ವಿಜೇತರಾದರು.

ಲೇಸರ್ 4.7 ವಿಭಾಗದಲ್ಲಿ 26 ಸ್ಪರ್ಧಿಗಳು ಭಾಗವಹಿಸಿದ್ದು, ಶಿಕಾನ್ಸು ಸಿಂಗ್-ಪ್ರಥಮ, ಬಲ್ಲೆಕಿರಣ್ ಕುಮಾರ್-ದ್ವೀತಿಯ, ಅಲೋಕ್‍ಕುಮಾರ್-ತೃತೀಯ ಸ್ಥಾನ ಗಳಿಸಿದರು. ಲೇಸರ್‍ರೆಡಿಯಲ್ ವಿಭಾಗದಲ್ಲಿ 6 ಮಂದಿ ಸ್ಪರ್ಧಿಸಿದ್ದು, ತಹಮೋದಬೊನಿಯ ಅಜಯ- ಪ್ರಥಮ, ನವ್ಯಾನ್‍ಪ್ರಭಾಕರ್-ದ್ವೀತಿಯ, ಅಲೋಕ್ ಕುಮಾರ್-ತೃತೀಯ ಸ್ಥಾನ ಪಡೆದರು. 29 ಇ.ಆರ್ ವಿಭಾಗದಲ್ಲಿ 5 ಮಂದಿ ಸ್ಪರ್ಧಿಸಿ, ಶಿವಪುಜಾನ್-ಪ್ರಥಮ, ಟಿ.ವೆಂಕಟೇಶ್-ದ್ವೀತಿಯ, ಎಸ್.ಗಗನ್-ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು. ಆಪ್ಟಿಮಿಸ್ ಗ್ರೀನ್ ವಿಭಾಗದಿಂದ ಭಾಗವಹಿಸಿದ್ದ 14 ಸ್ಪರ್ಧಿಗಳಲ್ಲಿ ಕೊಮ್ಮುವಿಜೆÐೀಶ್ -ಪ್ರಥಮ, ಅಹೀಶ್.ಎಂ.-ದ್ವೀತಿಯ, ಎಂ.ಡಿ.ಮೊತ್ತೆಮೀಮ್-ತೃತೀಯ ಸ್ಥಾನ ಪಡೆದರು. ಆರ್.ಎಸ್. ಓನ್ ವಿಭಾಗದಲ್ಲಿ 3 ಮಂದಿ ಸ್ಪರ್ಧಿಸಿ, ಮಂದೀಪ್-ಪ್ರಥಮ, ಗಣೇಶ್ ವಿಶ್ವಕರ್ಮ-ದ್ವೀತಿಯ, ಸತ್ಯ ಸೂದನ್ ತೃತೀಯ ಸ್ಥಾನ ಪಡೆದರು. ಆಪ್ಟಿಮಿಸ್ಟ್ ಮೈನ್ ವಿಭಾಗದ 43 ಸ್ಪರ್ಧಿಗಳಲ್ಲಿ ಏಕಲವ್ಯ ಬಾಥಮ್-ಪ್ರಥಮ, ಲೇವ್ಟಿ ಜಾನ್ಸಿ ಪ್ರೀಯಾ-ದ್ವೀತಿಯ ಕೃಷ್ಣ ದಿವಾಕರ್-ತೃತೀಯ ಸ್ಥಾನ ಪಡೆದರು.

Translate »