ಮೋದಿ ನೇತೃತ್ವದ ಸರ್ಕಾರ ಬಂಡವಾಳಶಾಹಿಗಳ ಪರ
ಮಂಡ್ಯ

ಮೋದಿ ನೇತೃತ್ವದ ಸರ್ಕಾರ ಬಂಡವಾಳಶಾಹಿಗಳ ಪರ

August 29, 2021

ಮಂಡ್ಯ, ಆ.28(ಮೋಹನ್‍ರಾಜ್)-ದೇಶದ ಪ್ರತಿ ಕ್ಷೇತ್ರದಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡಜನರಿಗೆ ಉಪಯೋಗವಾಗದ ಕಾರ್ಯಕ್ರಮಗಳನ್ನೇ ಜಾರಿಗೆ ತಂದು ಬಂಡವಾಳ ಶಾಹಿಗಳ ಪರ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇರಳ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಟೀಕಿಸಿದರು.

ಶನಿವಾರ ನಗರದ ಕರ್ನಾಟಕ ಸಂಘದ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿ ಆಯೋಜಿಸಿದ್ದ ಮನರೇಗಾ-2005 ಮತ್ತು ಗ್ರಾಮೀಣ ಕೆಲಸಗಾರರು ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಎಂಬ ಮಹಾಮಾರಿ ದೇಶದ ಜನತೆಯನ್ನು ಸಂಕಷ್ಟಕ್ಕೀಡು ಮಾಡಿದೆ. ವಿಶ್ವದ ಶ್ರೀಮಂತ ರಾಷ್ಟ್ರ ಎಂಬ ಖ್ಯಾತಿ ಪಡೆದ ಅಮೆರಿಕಾ ದೇಶದಲ್ಲಿ ಆಧುನಿಕ ವೈದ್ಯ ಕೀಯ ಸೌಲಭ್ಯ ಹೊಂದಿದ್ದರೂ ಲಕ್ಷಾಂತರ ಜನ ಕೋವಿಡ್‍ಗೆ ಬಲಿಯಾದರು. ದೇಶದ ಇತರ ಜಿಲ್ಲೆಗಳನ್ನು ಕೋವಿಡ್ ಬಾಧಿಸಿದೆ. ರಾಷ್ಟ್ರದ ಚಿಕ್ಕ ರಾಜ್ಯವಾದ ಕೇರಳ ದಲ್ಲಿ ಶೇ.0.5 ಮರಣ ಪ್ರಮಾಣ ದರವಿದೆ. ಇತರೆಲ್ಲ ರಾಜ್ಯಗಳಲ್ಲಿ 1.7 ರಷ್ಟು ಮರಣ ಪ್ರಮಾಣ ದಾಖಲಾಗಿ ರುವುದನ್ನು ಕಾಣಬಹುದು. ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಡಪಕ್ಷದ ಸರ್ಕಾರ ಕೃಷಿ ಕೂಲಿ ಕಾರರು, ಬಡ ವರ್ಗದವರಿಗೆ ನೆರವಿಗೆ ನಿಂತ ಪರಿಣಾಮ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ಆದರೆ ದೇಶದ ಪ್ರಧಾನಿಯಾದವರಿಗೆ ಇಂತಹ ಕ್ರಮ ಕೈಗೊಳ್ಳಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.

ನಮ್ಮ ರಾಜ್ಯದಲ್ಲಿ 54 ಲಕ್ಷ ಜನರು ಕೋವಿಡ್ ಲಾಕ್ ಡೌನ್‍ನಿಂದಾಗಿ ಸಂಕಷ್ಟಕ್ಕೀಡಾದರು. ಆಗ ನಮ್ಮ ಕೇರಳ ಸರ್ಕಾರ ಪ್ರತೀ ತಿಂಗಳು 1,600 ರೂ.ನಂತೆ ಅವರಿಗೆ ಪರಿಹಾರ ನೀಡುತ್ತಾ ಬಂತು. ಇದು ಬಿಜೆಪಿ, ಕಾಂಗ್ರೆಸ್ ಆಡಳಿತವಿರುವ ಯಾವ ರಾಜ್ಯದಲ್ಲೂ ಆಗಲಿಲ್ಲ ಎಂದರು.
ಪಶ್ಚಿಮ ಬಂಗಾಳದ ಸಿಪಿಐಎಂ ಮುಖಂಡ ಸುನಿಲ್ ಚೋಪ್ರಾ ಮಾತನಾಡಿ, 1952ರಲ್ಲಿ ಶೇ.22ರಷ್ಟಿದ್ದ ಕೃಷಿ ಕೂಲಿಕಾರರು ಇಂದು ಶೇ.50ರಷ್ಟಿದ್ದಾರೆ. ಎಂದರೆ ಕೃಷಿ ಕೂಲಿಕಾರರ ಒಂದು ಅಲೆಯೇ ಎದ್ದಿದೆ. ಈ ಅಲೆ ರಾಷ್ಟ್ರದ ಪರಿವರ್ತನೆಯ ದಿಕ್ಕಾಗಬೇಕು ಎಂದು ಅಭಿಪ್ರಾಯಪಟ್ಟರು.
ನಾವು ಯಾವ ಉz್ದÉೀಶಕ್ಕಾಗಿ ಹೋರಾಟ ಆರಂಭಿಸಿ ದೆವೋ ಅದೀಗ ಫಲ ಕೊಡುತ್ತಿದೆ. ನರೇಗಾ ಕೂಡ ನಮ್ಮ ಹೋರಾಟದ ಪ್ರತಿಫಲ. ಆದರೆ ಅದನ್ನು ಹತಿಕ್ಕಲು ಸಂಚು ನಡೆಸುತ್ತಿರುವ ನರೇಂದ್ರ ಮೋದಿ ಅವರ ಸರ್ಕಾರ ಏನು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿದೆ ಎಂದು ಆರೋಪಿಸಿದರು.

ಕೃಷಿ ತಜ್ಞ ಜಿ.ಎನ್.ನಾಗರಾಜು ಮಾತನಾಡಿದರು. ಅಖಿಲ ಭಾರತ ಕಿಸಾನ್ ಮಹಾಸಭಾ ಪ್ರಧಾನ ಕಾರ್ಯ ದರ್ಶಿ ಹಾಗೂ ಪಶ್ಚಿಮ ಬಂಗಾಳದ ಉಲ್ಬೇರಿಯಾ ಕ್ಷೇತ್ರದ ಸಂಸದ ಹನನ್ ಮೊಲ್ಲಾ, ರಾಜ್ಯಸಭಾ ಸದಸ್ಯ ಇ.ಶಿವದಾಸನ್, ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು, ನವದೆಹಲಿಯ ಕೃಷಿ ಕೂಲಿಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್, ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೆರಾ, ಮುಖಂಡರಾದ ಅನಿಲ್‍ಕುಮಾರ್ ಇತರರು ಪಾಲ್ಗೊಂಡಿದ್ದರು.

Translate »