ಮೈಸೂರು, ಆ.೨೯(ಪಿಎಂ)- ಮೈಸೂ ರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಅತ್ಯಾಚಾರಿಗಳನ್ನು ಗಲ್ಲಿಗೇರಿಸ ಲಾಗಿದೆ! ಇದೇನಿದು ತನಿಖಾ ಹಂತದಲ್ಲೇ ಗಲ್ಲು ಶಿಕ್ಷೆಯಾಗಿದೆಯೇ? ಎಂದು ಹೌಹಾರಬೇಡಿ. ಕಲಾವಿದರೊಬ್ಬರ ಕುಂಚ ದಲ್ಲಿ ಮೂಡಿದ ಚಿತ್ರಕಲೆಯಲ್ಲಿ ಈಗಾ ಗಲೇ ಅತ್ಯಾಚಾರಿಗಳು ಗಲ್ಲಿಗೇರಿದ್ದಾರೆ.
ಆಂಗ್ಲಾ ಭಾಷೆಯ `ಆರ್‌ಎಪಿಇ (ರೇಪ್)’ ಅಕ್ಷರಗಳನ್ನು ಕಪ್ಪು ಬಣ್ಣದಲ್ಲಿ ಬರೆದು, ಸದರಿ ಅಕ್ಷರಗಳಲ್ಲಿ ಅತ್ಯಾಚಾರಿಗಳು ನೇಣು ಕುಣ ಕೆಯಲ್ಲಿ ನೇತಾಡುವಂತೆ ಚಿತ್ರ ಬಿಡಿಸಲಾಗಿದೆ. ಇದರ ಪಕ್ಕದಲ್ಲಿ ಸಂತ್ರಸ್ತೆ ಸಂಕಟದಲ್ಲಿ ಮುಖ ಮುಚ್ಚಿ ದುಃಖಿಸು ತ್ತಿರುವಂತೆ ಚಿತ್ರ ರಚಿಸಲಾಗಿದೆ. ಆ ಮೂಲಕ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾ ಚಾರದ ವಿರುದ್ಧದ ಆಕ್ರೋಶಕ್ಕೆ ಕಲೆಯ ಸ್ಪರ್ಶವೂ ಸಿಕ್ಕಿದೆ. ಅತ್ಯಾಚಾರಿಗಳನ್ನು ಗೆಲ್ಲಿ ಗೇರಿಸಬೇಕೆಂಬ ಆಗ್ರಹ ಗೋಡೆ ಕಲೆ ಮೂಲಕ ವ್ಯಕ್ತವಾಗಿದೆ. ಮೈಸೂರಿನ ರವಿವರ್ಮ ಆರ್ಟ್ಸ್ ಕಾಲೇಜಿನ ಕಲಾ ವಿದ್ಯಾರ್ಥಿ ರಾಹುಲ್ ಮನೋಹರ್ ಅವರ ಕಲಾ ಕಲ್ಪನೆಯಲ್ಲಿ ಇಂತಹ ಚಿತ್ರಕಲೆ ಮೂಡಿ ಬಂದಿದೆ. ಈ ಚಿತ್ರ ಕಲೆಗೆ ಇವರ ಸಹಪಾಠಿ ಕಲಾವಿದ ಸುಮಂತ್‌ಗೌಡ ಸಹ ಸಹಕಾರ ನೀಡಿದರು.
ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯ ಪಾಳು ಕಟ್ಟಡದ ಗೋಡೆಯಲ್ಲಿ ಅತ್ಯಾಚಾರದ ವಿರುದ್ಧದ ಆಕ್ರೋಶಕ್ಕೆ ಕುಂಚದ ಸ್ಪರ್ಶ ನೀಡಲಾಗಿದೆ. ಈ ಮೂಲಕ ಅತ್ಯಾಚಾರಿಗಳ ವಿರುದ್ಧ ಕಲಾ ವಿದರ ಪ್ರತಿಭಟನೆ ದಾಖಲಾಗಿದೆ.
ಕಲಾವಿದ ರಾಹುಲ್ ಮನೋಹರ್ ಮಾತನಾಡಿ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬಹುದು. ಜೊತೆಗೆ ಸಂತ್ರಸ್ತೆಗೆ ಪರಿಹಾರವೂ ದೊರೆಯಬಹುದು. ಆದರೆ ಆಕೆ ಅದೇ ನೋವಿನಲ್ಲಿ ತನ್ನ ಇಡೀ ಜೀವನ ಕಳೆಯುವ ಸನ್ನಿವೇಶ ನಿರ್ಮಾಣವಾಗಲಿದೆ. ಹೀಗಾಗಿ ಇಂತಹ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಜೊತೆಗೆ ಮಹಿಳೆಯರ ರಕ್ಷಣೆಗೆ ಸಂಬAಧಿಸಿದ ಕಾನೂನುಗಳು ಮತ್ತಷ್ಟು ಬಲಿಷ್ಠವಾಗಬೇಕು. ಅತ್ಯಾಚಾರಿ ಗಳಿಗೆ ಶೀಘ್ರ ಗಲ್ಲು ಶಿಕ್ಷೆ ವಿಧಿಸುವಂತಾ ಗಬೇಕು ಎಂದು ಹೇಳಿದರು.