ಪಾಲಿಕೆ ತಂಡ ದಾಳಿ; ಸಂತೆಪೇಟೆಯಲ್ಲಿ  450 ಕೆಜಿ ನಿಷೇಧಿತ ಪ್ಲಾಸ್ಟಿಕ್ ಕವರ್ ವಶ
ಮೈಸೂರು

ಪಾಲಿಕೆ ತಂಡ ದಾಳಿ; ಸಂತೆಪೇಟೆಯಲ್ಲಿ 450 ಕೆಜಿ ನಿಷೇಧಿತ ಪ್ಲಾಸ್ಟಿಕ್ ಕವರ್ ವಶ

April 3, 2021

ಮೈಸೂರು,ಏ.2(ಎಂಟಿವೈ)- ಮೈಸೂ ರಲ್ಲಿ ಏ.5ರಿಂದ ಪ್ಲಾಸ್ಟಿಕ್ ಕವರ್, ಕ್ಯಾರಿ ಬ್ಯಾಗ್ ನಿಷೇಧಿಸಲು ಜಿಲ್ಲಾಡಳಿತ ನಿರ್ಧರಿ ಸಿದ ಬೆನ್ನಲ್ಲೇ ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಶುಕ್ರವಾರ ಸಂತೆಪೇಟೆ ಅಂಗಡಿ ಮೇಲೆ ದಾಳಿ ನಡೆಸಿ ಪರಿಸರಕ್ಕೆ ಮಾರಕವಾದ 450 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು.

ದೇವರಾಜ ಮಾರುಕಟ್ಟೆ, ಸಂತೆಪೇಟೆ, ಚಿಕ್ಕ ಗಡಿಯಾರ, ಸಯ್ಯಾಜಿರಾವ್ ರಸ್ತೆಯ ಅಂಗಡಿಗಳು, ತಳ್ಳುಗಾಡಿ ವ್ಯಾಪಾರಿಗಳು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಕವರ್, ಕ್ಯಾರಿಬ್ಯಾಗ್ ಬಳಸುತ್ತಿರುವ ಬಗ್ಗೆ ಸಾರ್ವ ಜನಿಕರಿಂದ ವ್ಯಾಪಕ ದೂರುಗಳು ಬಂದಿ ದ್ದವು. ಪರಿಣಾಮ ಶುಕ್ರವಾರ ಬೆಳಗ್ಗೆ ಪಾಲಿಕೆಯ ಆರೋಗ್ಯ-ಪರಿಸರ ವಿಭಾಗದ ಅಧಿಕಾರಿಗಳು ದೇವರಾಜ ಮಾರುಕಟ್ಟೆ ಮಳಿಗೆಗಳನ್ನು ಪರಿಶೀಲಿಸಲು ತೆರಳಿದ್ದಾಗ ವ್ಯಾಪಾರಿಗಳ ಬಳಿ ಪ್ಲಾಸ್ಟಿಕ್ ಕವರ್‍ಗಳ ಪೊಟ್ಟಣ ಇದ್ದದ್ದು ಕಂಡು ಬಂತು. ವ್ಯಾಪಾರಿ ಗಳು ನೀಡಿದ ಸುಳಿವಿನ ಮೇರೆಗೆ ಸಂತೆ ಪೇಟೆಯ 3 ಅಂಗಡಿಗಳಲ್ಲಿ ತಪಾಸಣೆ ನಡೆಸಿ ದಾಗ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪ್ಲಾಸ್ಟಿಕ್ ಕವರ್, ಕ್ಯಾರಿಬ್ಯಾಗ್ ಕಂಡು ಬಂತು.

ರಹಸ್ಯ ಅಟ್ಟ: ಪಾಲಿಕೆ ಮುಖ್ಯ ಆರೋ ಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು, ಪರಿ ಸರ ಅಭಿಯಂತರರಾದ ಮೈತ್ರಿ, ಯೋಗೇಶ್, ಎಇಇ ಮೃತ್ಯುಂಜಯ ಅವರನ್ನೊಳ ಗೊಂಡ ಪಾಲಿಕೆ ಅಧಿಕಾರಿಗಳ ತಂಡ ಸಂತೆ ಪೇಟೆಯ ಸತ್ಯನಾರಾಯಣ ಎಂಟರ್ ಪ್ರೈಸಸ್, ಮಹದೇಶ್ವರ ಟ್ರೇಡರ್ಸ್‍ಗೆ ತೆರಳಿ ಪರಿಶೀಲಿಸಿದಾಗ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಕಾಣಲಿಲ್ಲ. ರೇಖಾ ಎಂಟರ್ ಪ್ರೈಸಸ್‍ನಲ್ಲಿ ಅಡಿಕೆಹಾಳೆಯಿಂದ ತಯಾರಿ ಸಿದ ಪ್ಲೇಟ್, ಊಟದ ಎಲೆ ಮತ್ತಿತರ ಪರಿಸರ ಸ್ನೇಹಿ ವಸ್ತುಗಳನ್ನು ಇಟ್ಟಿರುವುದು ಕಂಡು ಬಂದಿತು. ನಿಷೇಧಿತ ಪ್ಲಾಸ್ಟಿಕ್ ಕವರ್, ಕ್ಯಾರಿಬ್ಯಾಗ್ ಸಿಗಲಿಲ್ಲ. ಆದರೂ ಅನುಮಾನಗೊಂಡ ಅಧಿಕಾರಿಗಳ ತಂಡ ಮಳಿಗೆ ಒಳಗೆ ಜಾಲಾಡಿದಾಗ, ಅಲ್ಲಿ ಸುಲ ಭಕ್ಕೆ ಗೋಚರಿಸದಂತೆ ಫ್ಲೈವುಡ್‍ಶೀಟ್ ನಿಂದ ಅಟ್ಟ ಮಾಡಿರುವುದು ಕಂಡಿದೆ. ಅದರ ಬಾಗಿಲು ತೆರೆದು ನೋಡಿದರೆ ಪ್ಲಾಸ್ಟಿಕ್ ಕವರ್‍ಗಳ ಮೂಟೆ ಕಂಡು ಬಂದಿದೆ. ಅಂಗಡಿಯಲ್ಲಿ ಒಟ್ಟು 450 ಕೆಜಿ ನಿಷೇಧಿತ ಪ್ಲಾಸ್ಟಿಕ್ ಕವರ್ ವಶವಾಗಿದೆ. ಏ.5ರ ನಂತರ ಪ್ಲಾಸ್ಟಿಕ್ ಮಾರಿದರೆ ಟ್ರೇಡ್ ಲೈಸೆನ್ಸ್ ರದ್ದು ಮಾಡುವುದಾಗಿ ಅಧಿಕಾರಿ ಗಳು ಎಚ್ಚರಿಕೆ ನೀಡಿದರು.

ವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಿದ್ಯಾರಣ್ಯಪುರಂನ `ಜಾಗೃತಿ ಪ್ರೈ.ಲಿ.’ಗೆ ನೀಡಲಾಯಿತು. ಮೈಸೂರು ನಗರ ಪಾಲಿಕೆ ಜತೆ ಒಡಂಬಡಿಕೆ ಮಾಡಿ ಕೊಂಡಿರುವ ಜಾಗೃತಿ ಸಂಸ್ಥೆ ನಿರುಪ ಯುಕ್ತ ವಸ್ತುಗಳನ್ನು ಮರು ಬಳಕೆ ಮಾಡಿ ಪೀಠೋಪಕರಣ ತಯಾರಿಸುತ್ತಿದೆ.

Translate »