ಪ್ರಧಾನಿ ಮೋದಿಯಿಂದ ಜನರ  ಬದಲು ಉದ್ಯಮಿಗಳ ಹಿತ ಸಾಧನೆ
ಮೈಸೂರು

ಪ್ರಧಾನಿ ಮೋದಿಯಿಂದ ಜನರ ಬದಲು ಉದ್ಯಮಿಗಳ ಹಿತ ಸಾಧನೆ

April 3, 2021

ಮೈಸೂರು,ಏ.2(ಎಂಟಿವೈ)-ಪ್ರಧಾನಿ ನರೇಂದ್ರ ಮೋದಿ, ದೇಶದ ಜನರನ್ನು ಕಡೆಗಣಿಸಿ ಉದ್ಯಮಿಗಳ ಹಿತ ಕಾಯಲು ಮುಂದಾಗಿದ್ದು, ರಿಸರ್ವ್ ಬ್ಯಾಂಕ್ ಇಂಡಿಯಾ ವನ್ನು ಶೀಘ್ರದಲ್ಲಿಯೇ ರಿಲಯನ್ಸ್ ಬ್ಯಾಂಕ್ ಇಂಡಿಯಾ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಪಂಚದ ಹಲವು ರಾಷ್ಟ್ರವನ್ನು ಕಾಡಿದ ಕೊರೊನಾ, ಜಾಗತಿಕ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕೃಪಾಕಟಾಕ್ಷ ದಿಂದ ಕೊರೊನಾ ಕಾಲಘಟ್ಟದಲ್ಲೂ ಜಗತ್ತಿನ ಶ್ರೀಮಂ ತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 4ನೇ ಸ್ಥಾನ ಪಡೆದಿದ್ದಾರೆ. ಈ ಸಾಧನೆ ಮಾಡಲು ಪ್ರಧಾನಿ ಮೋದಿ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ನನ್ನನ್ನೂ ಸೇರಿದಂತೆ ಹಲವು ಮಂದಿ ಮೋದಿ ಪ್ರಧಾನಿಯಾದ ಬಳಿಕ ದೇಶಕ್ಕೆ ಒಳಿತಾಗಬಹುದು ಎಂದು ನಂಬಿ ದ್ದೆವು. ಆದರೆ ಇದೀಗ ದೇಶದ ಅರ್ಥ ವ್ಯವಸ್ಥೆಯೇ ಅಧೋಗತಿಗೆ ತಲುಪಿದೆ. ಆರ್‍ಎಸ್‍ಎಸ್ ಹಿಡಿತದಲ್ಲಿ ರುವ ಪ್ರಧಾನಿ ನರೇಂದ್ರ ಮೋದಿ, ನಾಮಕಾವಸ್ಥೆ ಪ್ರಧಾನಿಯಾಗಿದ್ದಾರೆ ಎಂದು ಟೀಕಿಸಿದರು.

ದೇಶದ ಸಂಪತ್ತನ್ನು ಖಾಸಗಿ ವ್ಯಕ್ತಿಗಳ ಸುಪರ್ದಿಗೆ ನೀಡಲು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯೇ ಸಹಕರಿಸುತ್ತಿದ್ದಾರೆ. ಬ್ಯಾಂಕ್, ಎಲ್‍ಐಸಿ, ರೈಲ್ವೆ, ಬಿಎಸ್ ಎನ್‍ಎಲ್, ಬಿಇಎಂಎಒಲ್, ಬಿಪಿಸಿಎಲ್, ವಿಮಾನ ಯಾನ ಸಂಸ್ಥೆ, ವಿಮಾನ ನಿಲ್ದಾಣಗಳೂ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀ ಕರಣ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಮೋದಿ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ಸಾಮಾನ್ಯ ಜನತೆಯ ಬದುಕು ದುರ್ಭರವಾಗುತ್ತಿದೆ. ಖಾಸಗೀ ಕರಣದ ನೀತಿ, ಇಂಧನ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಈ ಹಿಂದೆ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ಖಾಸಗಿ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಶ್ರೀಮಂತರ ಹಿಡಿತ ದಲ್ಲಿದ್ದ ಬ್ಯಾಂಕ್‍ಗಳ ಸೇವೆ ಬಡವರಿಗೂ ದೊರಕು ವಂತೆ ಮಾಡಿದರು. ಈಗ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಮೋಸಗಾರ ಉದ್ಯಮಿಗಳು ಸಾಲ ಪಡೆದು ಮರು ಪಾವತಿಸದೇ ವಂಚಿಸುವ ಮೂಲಕ ಬ್ಯಾಂಕ್ ಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಈ ರೀತಿ ಎನ್‍ಪಿಎ ಮೌಲ್ಯ 14 ಲಕ್ಷ ಕೋಟಿ ತಲುಪಿದೆ. ಇನ್ನು, ಖಾಸಗೀಕರಣ ಮಾಡಿದರೆ ವಂಚನೆ ಇನ್ನಷ್ಟು ಹೆಚ್ಚಾ ಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡುವುದರಿಂ ದಾಗಿ ಬಡವರು, ಮಧ್ಯಮ ವರ್ಗದವರು, ವ್ಯಾಪಾರ ವಹಿವಾಟು ನಡೆಸುವವರು, ಮುಖ್ಯವಾಗಿ ಹಿರಿಯ ನಾಗರಿಕರು, ನಿವೃತ್ತ ಅಧಿಕಾರಿಗಳು ತಾವು ಸಂಪಾ ದಿಸಿದ ಹಣವನ್ನು ಸುರಕ್ಷಿತವಾಗಿ ಎಲ್ಲಿ ಇಡಬೇಕು ಎಂಬ ಪ್ರಶ್ನೆ ಕಾಡುತ್ತದೆ. ಬ್ಯಾಂಕ್‍ಗಳ ಖಾಸಗೀಕರಣ ವಾದರೆ ಜನರು ಠೇವಣಿ ಇಡುವ ಹಣಕ್ಕೆ ಗ್ಯಾರಂಟಿ ಇಲ್ಲದಂತಾಗುತ್ತದೆ. ಯಾವಾಗ ಬೇಕಾದರೂ ಬ್ಯಾಂಕ್‍ಗಳು ಮುಚ್ಚುವ ಹಂತಕ್ಕೆ ತಲುಪಬಹುದು. ಹಾಗಾಗಿ ಎಲ್ಲಾ ಬ್ಯಾಂಕ್‍ಗಳು ಹಾಲಿ ಸರ್ಕಾರದ ಒಡೆತನದಲ್ಲಿಯೇ ಇರುವ ವ್ಯವಸ್ಥೆ ಮುಂದುವರೆಸು ವಂತೆ ಸೋಮಶೇಖರ್ ಆಗ್ರಹಿಸಿದರು.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ, ದೇಶದ ಆರ್ಥಿಕತೆ ಕುಸಿತ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ವೈಫಲ್ಯಗಳ ಸಂಬಂಧ ಬಿಜೆಪಿ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರ ಮಣ್ಯ ಸ್ವಾಮಿ, ಪ್ರಧಾನಿ ಅವರಿಗೆ ಆರ್ಥಿಕತೆ ತಿಳಿದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಪ್ರದಾನಿ ಮೋದಿಯನ್ನೇ ಸಮರ್ಥಿಸಿಕೊಳ್ಳುತ್ತಿದ್ದ ಬಿಜೆಪಿ ಮುಖಂಡರೇ ಸರ್ಕಾರದ ನಡೆ ವಿರುದ್ಧ ಕಟುವಾಗಿ ಟೀಕಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನ ವಿರೋಧಿ ನೀತಿ, ರೈತ ವಿರೋಧಿ, ಖಾಸಗೀ ಕರಣದ ಹುನ್ನಾರ, ಉದ್ಯಮಿಗಳ ಪರವಾದ ನಿಲುವು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ ಸೇರಿದಂತೆ ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ದ ಜನರು ಎಚ್ಚೆತ್ತುಕೊಂಡು ಹೋರಾಟ ನಡೆಸಬೇಕು. ಇನ್ನಾದರೂ ಬಿಜೆಪಿ ಸರ್ಕಾರ ದುರಾಡಳಿತದ ವಿರುದ್ಧ ದ್ವನಿ ಎತ್ತದಿದ್ದರೆ ಜನಜೀವನ ಮತ್ತಷ್ಟು ಕಷ್ಟಕರ ವಾಗಲಿದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿ ಯಲ್ಲಿ ಮಾಜಿ ಮೇಯರ್ ನಾರಾಯಣ, ಮುಖಂಡರಾದ ಶಿವಣ್ಣ, ಶ್ರೀಧರಮೂರ್ತಿ, ವಿಜಯಕುಮಾರ್ ಇದ್ದರು.

Translate »