ಭಗವಾನ್ ಬುದ್ಧನ ಸಂದೇಶ ಯುವಪೀಳಿಗೆಗೆ ಪ್ರಸ್ತುತ
ಮೈಸೂರು

ಭಗವಾನ್ ಬುದ್ಧನ ಸಂದೇಶ ಯುವಪೀಳಿಗೆಗೆ ಪ್ರಸ್ತುತ

April 3, 2021

ಮೈಸೂರು, ಏ.2(ಎಸ್‍ಪಿಎನ್)-`ಆಸೆಯೇ ದುಃಖಕ್ಕೆ ಕಾರಣ’ ಎಂಬ ಭಗವಾನ್ ಬುದ್ಧರ ಸಂದೇಶ ಯುವ ಪೀಳಿಗೆಗೆ ಪ್ರಸ್ತುತ. ಈ ಸಂದೇಶವನ್ನು ಪ್ರತಿ ಭಾರತೀಯರೂ ಬದುಕಿನಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು.

ಮೈಸೂರಿನ ಸರಸ್ವತಿಪುರಂನಲ್ಲಿರುವ ಮಹಾ ಬೋಧಿ ವಿದ್ಯಾಸಂಸ್ಥೆ ಆವರಣದಲ್ಲಿ ಆಚಾರ್ಯ ಬುದ್ಧ ರಕ್ಖಿತ್ ಬಂತೇಜಿ ಜನ್ಮಶತಮಾನೋತ್ಸವ ಮತ್ತು ಮಹಾಬೋಧಿ ವಿದ್ಯಾಸಂಸ್ಥೆಯ ಮೈಸೂರು ಘಟಕದ ಸುವರ್ಣ ಮಹೋತ್ಸವದಲ್ಲಿ ಅವರು ಮಾತನಾಡಿದರು. ವಿದ್ಯಾಸಂಸ್ಥೆಯಲ್ಲಿ ಲಡಾಖ್ ಸೇರಿದಂತೆ 15ಕ್ಕೂ ಹೆಚ್ಚು ರಾಜ್ಯಗಳ ವಿದ್ಯಾರ್ಥಿ ಗಳಿದ್ದು, ಉತ್ತಮ ಶಿಕ್ಷಣ ನೀಡುತ್ತಿರುವುದು ಪ್ರಶಂ ಸಾರ್ಹ. ಈ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ಶ್ರೀ ಬುದ್ಧ ರಕ್ಖಿತ್ ಬಂತೇಜಿ ಅವರ ಪರಿಶ್ರಮವಿದೆ. ಅಂತಹ ಸಾಧಕರ ಸ್ಮರಣಾರ್ಥ ಶತಮಾನೋತ್ಸವ ಆಚರಣೆ ನಡೆಸುತ್ತಿರುವುದು ಪ್ರಶಂಸಾರ್ಹ ಎಂದರು.
ಮಹಾಬೋಧಿ ವಿದ್ಯಾಸಂಸ್ಥೆಯ ಮಾರ್ಗಕ್ಕೆ `ಮಹಾಬೋಧಿ ರಸ್ತೆ’ ಎಂಬ ಹೆಸರಿಡಲು ಮಾಜಿ ಮೇಯರ್ ಆರ್.ಲಿಂಗಪ್ಪ ಪ್ರಯತ್ನಪಟ್ಟು ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾವ ಮಂಡಿಸಿದಾಗ ಬೆಂಬಲಿಸಿದವ ರಲ್ಲಿ ನಾನೂ ಒಬ್ಬ. ಆದರೆ ಅಂದು ಉಳಿದ ಸದಸ್ಯರು ವಿರೋಧಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಉಪ ಪೊಲೀಸ್ ಆಯುಕ್ತ ಎ.ಎನ್.ಪ್ರಕಾಶ್ ಗೌಡ ಮಾತನಾಡಿ, ಬುದ್ಧನ ಪಂಚಶೀಲತತ್ವ ಗಳನ್ನು ವಿದ್ಯಾರ್ಥಿಗಳು ಮನನ ಮಾಡಿದರೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿ. ಈ ಸಂಸ್ಥೆಯ ಆರಂ ಭದ ದಿನಗಳಲ್ಲಿ ನಾನು ಪಕ್ಕದ ವಸತಿ ನಿಲಯ ದಲ್ಲಿದ್ದೆ. ಆಗಿನಿಂದ ಇದರ ಬೆಳವಣಿಗೆಯನ್ನು ಹತ್ತಿರದಿಂದ ನೋಡಿದ್ದೇನೆ ಎಂದರು. ವಿದ್ಯಾರ್ಥಿ ಗಳು ಉತ್ತಮ ಚಟುವಟಿಕೆ ಅಳವಡಿಸಿಕೊಂಡು, ಉತ್ತಮ ಪ್ರಜೆಗಳಾಗಲಿ ಎಂದು ಹಾರೈಸಿದರು. ಬಳಿಕ `ಲೈಫ್ ಆಫ್ ಬುದ್ಧ’, `ಅನುಕಂಪ’, ಕಾಲೇಜು ಸಂಚಿಕೆ `ಸರ್ವಮಿತ್ರ’, ಮಹಾಬೋಧಿ ಸೊಸೈ ಟಿಯ 100 ವರ್ಷದ ಸಾಧನೆ ಬಿಂಬಿಸುವ ಪುಸ್ತಕ ವನ್ನು ಬಿಡುಗಡೆಗೊಳಿಸಲಾಯಿತು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಂಗಾ ಯಣ ಮಾಜಿ ನಿರ್ದೇಶಕ ಬಿ.ವಿ.ರಾಜಾರಾಂ, ಧಮ್ಮ ಜ್ಯೋತಿ ಮಹಾತೇರ, ಮಹಾಬೋಧಿ ಸೊಸೈಟಿ ಪ್ರಧಾನ ಕಾರ್ಯದರ್ಶಿ ಬಿಕ್ಕು ಆನಂದ ಬಂತೇಜಿ, ಮಹಾಬೋಧಿ ಸೊಸೈಟಿ ಅಧ್ಯಕ್ಷ ಕಸ್ಸಪಮಹಾ ತೇರ, ಸಂಸ್ಥೆ ಸಿಇಓ ವಾಂಗ್‍ಡುಸ್ ಜ್ಯೋತಿ, ಬಿಕ್ಕು ಧಮ್ಮಬೋಧಿ ಮತ್ತಿತರರಿದ್ದರು. ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Translate »