ಮೈಸೂರು,ಏ.2(ವೈಡಿಎಸ್)- ‘ಪ್ರಸ್ತುತ ಭಾರತ ಬದಲಾಗುತ್ತಿದ್ದು, ಮುಂದಿನ 20 ವರ್ಷಗಳಲ್ಲಿ ಪ್ರಪಂಚವನ್ನೇ ಆಳುವ ಮಟ್ಟಿಗೆ ದೇಶದ ಉತ್ಪಾ ದನಾ ವಲಯ ಬೆಳವಣಿಗೆ ಹೊಂದಲಿದೆ ಎಂದು ಟೊಯೋಟ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈ.ಲಿ ಉಪ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ಪರಶುರಾಮನ್ ಅಭಿಪ್ರಾಯಪಟ್ಟರು.
ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಇನ್‍ಸ್ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲೆಪ್‍ಮೆಂಟ್ (ಎಸ್‍ಡಿಎಂಐ ಎಂಡಿ) ಕಾಲೇಜಿನಲ್ಲಿ ಶುಕ್ರವಾರ 26ನೇ ಘಟಿಕೋತ್ಸವ ದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್ ಮೊದಲಾದ ಯೋಜನೆಗಳು ದೂರದೃಷ್ಟಿಯವು. ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯೂ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದರು. ಒಂದು ಕೋರ್ಸ್‍ಗೆ ಸೇರಿದವರು ಮತ್ತೊಂದು ಕೋರ್ಸ್‍ನ ವಿಷಯ ವನ್ನೂ ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ಮುಂದಿನ ದಿನ ಗಳಲ್ಲಿ ದೇಶದ ಬೆಳವಣಿಗೆಯಲ್ಲಿ ಅದು ಪ್ರಮುಖ ಪಾತ್ರ ವಹಿಸಲಿದೆ. ಮ್ಯಾನೇಜ್‍ಮೆಂಟ್ ಪದವಿ ಪಡೆದ ನಿಮಗೆ ಹೇರಳ ಉದ್ಯೋಗವಕಾಶ ಸಿಗಲಿವೆ ಎಂದರು.
ಇದೇ ಸಂದರ್ಭ ಶ್ರೀ ಧರ್ಮಸ್ಥಳದ ಧರ್ಮಾ ಧಿಕಾರಿ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 170 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಿದರು. ಗೌರವ್ ಮಹೇಶ್ವರಿ 2, ಆರ್.ಅಭಿಷೇಕ್, ರಿಷಬ್ ಕುಮಾರ್, ಆಯೇಷ ನೆಹ್ಲಾ, ಆಮನ್ ಕುಮಾರ್, ಕುಶ್ಬುರಾಣಿ ತಲಾ 1 ಚಿನ್ನದ ಪದಕ ಪಡೆದರು. ಸಂಸ್ಥೆ ನಿರ್ದೇಶಕ ಎನ್.ಆರ್.ಪರಶುರಾಮನ್, ಪ್ರೊ.ಹೆಚ್.ಗಾಯತ್ರಿ ಪ್ರೊ.ಎಸ್.ಎನ್.ಪ್ರಸಾದ್, ಪವನ್ ಜಿ.ರಂಗಾ, ಡಿ.ಸುರೇಂದ್ರಕುಮಾರ್, ನಿಶಿತ್ ಜೈನ್, ಅನಂತ್ ಕೊಪ್ಪದ ಉಪಸ್ಥಿತರಿದ್ದರು.