ನಾಗರಿಕರ ನಡುವೆ ಸೇತುವೆಯಾಗಿ, ಗೋಡೆ ಕಟ್ಟದಿರಿ
Uncategorized, ಮೈಸೂರು

ನಾಗರಿಕರ ನಡುವೆ ಸೇತುವೆಯಾಗಿ, ಗೋಡೆ ಕಟ್ಟದಿರಿ

April 3, 2021

ಮೈಸೂರು, ಏ.2(ಆರ್‍ಕೆ)- ನಾಗರಿಕರ ನಡುವೆ ಸೇತುವೆಯಾಗಿ ಕೆಲಸ ಮಾಡಿ. ಆದರೆ ಗೋಡೆ ಕಟ್ಟಬೇಡಿ ಎಂದು ನಿವೃತ್ತ ಡಿಐಜಿಪಿ ಪಿ.ಪಿ. ರಾಜೇಂದ್ರಪ್ರಸಾದ್ ಅವರು ಪೊಲೀಸ್ ಸಮುದಾಯಕ್ಕೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ.

ಮೈಸೂರು ನಗರ ಪೊಲೀಸ್, ಅಶ್ವಾ ರೋಹಿ ದಳ, ಕರ್ನಾಟಕ ಪೊಲೀಸ್ ಅಕಾಡೆಮಿ, ಜಿಲ್ಲಾ ಪೊಲೀಸ್, ಕೆಎಸ್ ಆರ್‍ಪಿ, ಪೊಲೀಸ್ ತರಬೇತಿ ಶಾಲೆ, ರಾಜ್ಯ ಗುಪ್ತವಾರ್ತೆ, ಡಿಸಿಆರ್‍ಇ, ಕರ್ನಾ ಟಕ ಲೋಕಾಯುಕ್ತ ಎಸಿಬಿ, ಚೆಸ್ಕಾಂ ಹಾಗೂ ಐಎಸ್‍ಡಿ ಘಟಕಗಳ ಸಂಯುಕ್ತಾ ಶ್ರಯದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್ ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕವಾಯತು ವಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಪೊಲೀಸರಿಂದ ಜನರು ಹೆಚ್ಚು ಹೆಚ್ಚು ಸೇವೆಯ ನಿರೀಕ್ಷೆ ಇದೆ. ಸಮುದಾಯ ಪೊಲೀಸರಾದ ನಾವು ಜನರ ಮನಸ್ಸು ಗೆದ್ದು ಸೇತುವೆಯಾಗಿ ಕೆಲಸ ಮಾಡಬೇಕೇ ಹೊರತು, ಗೋಡೆ ನಿರ್ಮಿಸಬಾರದು ಎಂದ ಅವರು, ಸಮಾಜದಲ್ಲಿ ಯಾವುದೇ ಘಟನೆ ಸಂಭವಿಸಿದರೂ, ಮೊದಲು ಸ್ಥಳದಲ್ಲಿ ಪೊಲೀಸರು ಕಾಣಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಜನರು ನಮ್ಮ ಬಳಿ ಬರಲು ಹೆದರು ತ್ತಾರೆ. ನಾವೇ ಅವರ ಬಳಿಗೆ ಹೋಗಬೇಕು. ಈ ಹಿಂದೆ ನಾನು ಡಿಸಿಪಿಯಾಗಿದ್ದಾಗ ‘ನಮ್ಮ ಮನೆ ಪೊಲೀಸ್’, ‘ಆಪರೇಷನ್ ಸನ್ ಸೆಟ್’ ಹಾಗೂ ‘ನ್ಯೂ ಬೀಟ್ ಸಿಸ್ಟಂ’ ಅನ್ನು ಜಾರಿಗೆ ತಂದು ಪ್ರತೀ 50 ಮನೆಗಳಿಗೊಬ್ಬ ಪೊಲೀಸರಿಗೆ ಜವಾಬ್ದಾರಿ ನೀಡಿ ಅಲ್ಲಿನ ಜನರ ಬಳಿಗೆ ಹೋಗಿ ಸಮಸ್ಯೆ ತಿಳಿದು ಕೊಂಡು ಪರಿಹಾರೋ ಪಾಯ ಸೂಚಿಸು ತ್ತಿದ್ದರಿಂದ ನಾಗರಿಕರು ಮತ್ತು ಪೊಲೀಸರ ನಡುವೆ ಉತ್ತಮ ಬಾಂಧವ್ಯ ಬೆಸೆದಿತ್ತಲ್ಲದೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಂದಿತ್ತು ಎಂದು ರಾಜೇಂದ್ರಪ್ರಸಾದ್ ನುಡಿದರು.

1965ರ ಏಪ್ರಿಲ್ 2ರಂದು ರಾಜ್ಯದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ (ಏP ಂಛಿಣ) ಜಾರಿಗೆ ಬಂದ ಹಿನ್ನೆಲೆಯಲ್ಲಿ ಈ ದಿನವನ್ನು ಪೊಲೀಸ್ ಧ್ವಜ ದಿನಾಚರಣೆ ಯನ್ನಾಗಿ ಆಚರಿಸಲಾಗುತ್ತಿದೆಯಲ್ಲದೆ, ಪೊಲೀಸರ ಯೋಗಕ್ಷೇಮಕ್ಕಾಗಿ ಯೋಜನೆ ರೂಪಿಸಲು ಚಿಂತಿಸಲಾರಂಭಿಸಿದ ಕಾರಣ ಏಪ್ರಿಲ್ 2ರ ದಿನವನ್ನು ಪೊಲೀಸರ ಕಲ್ಯಾಣ ದಿನವೆಂದೂ ಕರೆಯಲಾಗುತ್ತದೆ ಎಂದ ಅವರು, ಸಮಾಜ ಸುಖ ನಿದ್ರೆಯಲ್ಲಿರು ವಾಗ ರಾತ್ರಿ ಗಸ್ತು (ಓighಣ ಖouಟಿಜs) ಕರ್ತವ್ಯದಲ್ಲಿರುವ ಪೊಲೀಸರ ಆರೋಗ್ಯ ದಲ್ಲಿ ವ್ಯತ್ಯಯವಾಗುವುದು ಸಹಜ ಎಂದರು.

ಕರ್ತವ್ಯದ ಒತ್ತಡದಲ್ಲಿ ಆರೋಗ್ಯ ಸುರಕ್ಷತೆ ಯನ್ನು ಮರೆಯಬಾರದು ನಿತ್ಯ ವ್ಯಾಯಾಮ, ವಾಕಿಂಗ್, ಸೈಕ್ಲಿಂಗ್ ನಂತರ ಅಭ್ಯಾಸ ಗಳನ್ನು ಮುಂದುವರಿಸಬೇಕು. ಆಗಿಂದಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪೊಲೀಸರಿಗೆ ಅತ್ಯಗತ್ಯ ಎಂದು ರಾಜೇಂದ್ರಪ್ರಸಾದ್ ಕಿವಿಮಾತು ಹೇಳಿದರು.

ಆರೋಗ್ಯ ಸುಸ್ಥಿತಿಯಲ್ಲಿರಿಸಿಕೊಳ್ಳುವ ಬಗ್ಗೆ ಹಿರಿಯ ಅಧಿಕಾರಿಗಳು ಪೊಲೀಸರಿಗೆ ಮಾರ್ಗದರ್ಶನ ನೀಡಿ ಅವರಿಗೆ ಸೌಲಭ್ಯ ಒದಗಿಸುವುದೂ ಅಷ್ಟೇ ಮುಖ್ಯ. ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲೂ ಇಡೀ ದೇಶದ ಜನರು ಮನೆಯೊಳಗೆ ಸುರಕ್ಷಿತವಾಗಿರಿಸಲು ಪೊಲೀಸರು ಹೊರಗಿದ್ದು ಕಾರ್ಯಾಚರಣೆ ನಡೆಸಿದ ಕೆಲಸ ಶ್ಲಾಘನೀಯ ಎಂದು ಅವರು ಇದೇ ಸಂದರ್ಭ ಮೆಚ್ಚುಗೆ ವ್ಯಕ್ತಪಡಿಸಿದರು.

ನಾಗರಿಕರ ಸೇವೆಗೆಂದೇ ಪೊಲೀಸ್ ಇಲಾಖೆ ಸೇರಿರುವ ನಾವು, ಜನರ ಭಾವನೆಗಳಿಗೆ ಸ್ಪಂದಿಸಿ ಅವರ ಪ್ರೀತಿ-ವಿಶ್ವಾಸ ಗಳಿಸುವ ಮೂಲಕ ಜನಸ್ನೇಹಿ ಹಾಗೂ ಜನಮಿತ್ರ ಪೊಲೀಸ್ ಆಗಿ ಕೆಲಸ ಮಾಡುವ ಮೂಲಕ ಒಳ್ಳೆಯ ವಾತಾವರಣ ನಿರ್ಮಿಸಬೇಕೆಂದು ಅವರು ಸಲಹೆ ನೀಡಿದರು.

Translate »