ಇಬ್ಬರು ಭಾರತೀಯರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ
ದೇಶ-ವಿದೇಶ

ಇಬ್ಬರು ಭಾರತೀಯರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

July 27, 2018

ನವದೆಹಲಿ: ಈ ವರ್ಷ ಏಷ್ಯಾದ ಅತ್ಯು ನ್ನತ ಪ್ರಶಸ್ತಿಗಳಲ್ಲಿ ಒಂದಾದ ರಾಮನ್ ಮ್ಯಾಗ್ಸೆಸೆ ಗೌರವಕ್ಕೆ ಇಬ್ಬರು ಭಾರತೀಯರು ಭಾಜನರಾಗಿದ್ದಾರೆ.

ಭಾರತದ ಭರತ್ ವಟ್ವಾನಿ ಮತ್ತು ಸೋನಮ್ ವಾಂಗ್ ಚುಕ್ ಅವರ ಸಾಧನೆ ಮತ್ತು ಸೇವೆಯನ್ನು ಗುರುತಿಸಿ 2018ನೇ ಸಾಲಿನ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಗಿದೆ. ಲಡಾಕ್ ಮೂಲದ ಎಂಜಿನಿಯರ್ ಆಗಿರುವ 51 ವರ್ಷದ ಸೋನಮ್ ವಾಂಗ್ ಚುಕ್ ಅವರು, ಪಶ್ಚಿಮ ಹಿಮಾಲಯದ ಮರುಭೂಮಿ ಯಲ್ಲಿ ಕೃಷಿಗೆ ನೀರಿನ ಕೊರತೆಯನ್ನು ನೀಗಿಸಲು ಐಸ್ ಸ್ತೂಪ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಇನ್ನು ಭರತ್ ವಟ್ವಾನಿ ಅವರಿಗೆ ಅವರ ಅಸಾಧಾರಣ ಧೈರ್ಯ ಮತ್ತು ಬಹಿಷ್ಕರಿಸಿದ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಅವರ ಘನತೆಯನ್ನು ಪುನಃ ಸ್ಥಾಪಿಸುವ ಕಾರ್ಯವನ್ನು ಗುರುತಿಸಿ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಗಿದೆ.

1957ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಯನ್ನು ಫಿಲಿಪ್ಪೀನ್ಸ್‍ನ ಮೂರನೇ ಅಧ್ಯಕ್ಷರ ಹೆಸರಲ್ಲಿ ಸ್ಥಾಪಿಸಲಾಗಿದ್ದು, ಇದು ಏಷ್ಯಾದ ಪ್ರತಿಷ್ಠಿತ ಪ್ರಶಸ್ತಿ ಎಂದು ಕರೆಯಲ್ಪಡುತ್ತದೆ.

Translate »