ಬೆಂಗಳೂರು, ಸೆ.29(ಕೆಎಂಶಿ)- ಶಾಲಾ ಕಾಲೇಜುಗಳ ಪುನರಾರಂಭ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶಾಲಾ ಕಾಲೇಜು ಆರಂಭ ಗೊಂದಲಕ್ಕೆ ಟ್ವೀಟ್ ಮಾಡಿ, ತೆರೆ ಎಳೆದಿರುವ ಅವರು, ಸದ್ಯಕ್ಕೆ ಶಾಲಾ ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ. ಶಾಲಾ ಕಾಲೇಜುಗಳನ್ನು ಸೆ.22ರಿಂದ ತೆರೆಯಲು ಕೇಂದ್ರ ಅನುಮತಿ ನೀಡಿತ್ತು. ನಾವು ಶಾಲಾ ಕಾಲೇಜು ಪುನ ರಾರಂಭಿಸಿದ್ದೇವೆ. ಆದರೆ ತರಗತಿಗಳನ್ನು ಪ್ರಾರಂಭಿಸಿಲ್ಲ. ಶಾಲೆಗಳಲ್ಲಿ ಪಾಠ ಪ್ರವಚನ ಪ್ರಾರಂಭಿಸುವ ಸಂಬಂಧ ಸಾರ್ವಜನಿ ಕರು ಮತ್ತು ಶಾಸಕರ ಅಭಿಪ್ರಾಯ ಕೇಳಿ ದ್ದೇವೆ. ಈ ಸಂಬಂಧ ಯಾವುದೇ ಸಮಿತಿ ಗಳನ್ನು ಮಾಡಿಲ್ಲ. ಇಲಾಖೆ ಮಾಹಿತಿ ಪಡೆದು, ನಂತರ ತನ್ನ ತೀರ್ಮಾನ ತೆಗೆದುಕೊಳ್ಳಲಿದೆ. ಕೊರೊನಾ ದಿನದಿಂದ ದಿನಕ್ಕೆ ತೀವ್ರವಾಗು ತ್ತಿದೆ. ಈ ಪರಿಸ್ಥಿತಿ ನಡುವೆ ಸಾಮಾಜಿಕ ಜೀವನ ತಹಬದಿಗೆ ತರಬೇಕಿದೆ. ಆದರೆ ಮಕ್ಕಳ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟು ಕೊಂಡು ಪೋಷಕರ ಅಭಿಪ್ರಾಯವನ್ನು ಕಾಯ್ದಿರಿಸಿ ಮುಂದಿನ ತೀರ್ಮಾನ ಕೈಗೊಳ್ಳ ಲಾಗುವುದು. ಶಾಲಾ ಕಾಲೇಜು ಆರಂಭಿ ಸುವ ಕುರಿತು ಶಿಕ್ಷಕ ಸಂಘಟನೆಗಳೊಂದಿಗೆ ಹಾಗೂ ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸುತ್ತಿದ್ದೇನೆ. ಅವರಿಂದಲೂ ಅಭಿಪ್ರಾಯ ಪಡೆದು, ತೀರ್ಮಾನ ಕೈಗೊಳ್ಳಲಾಗುವುದು. ಕಳೆದ ಮಾರ್ಚ್ ತಿಂಗಳಲ್ಲೇ ಶಾಲಾ ಕಾಲೇಜು ಗಳನ್ನು ಸರ್ಕಾರ ಮುಚ್ಚಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಕಳೆದ ಜೂನ್ ತಿಂಗಳಿನಿಂದ ಆರಂಭ ಗೊಳ್ಳಬೇಕಿತ್ತು. ಆದರೆ ಸೋಂಕು ತಹಬದಿಗೆ ಬಾರದ ಕಾರಣ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.