ರೈಸ್ ಪುಲ್ಲಿಂಗ್ ಮೂಲಕ ವಂಚನೆ: ನಾಲ್ವರ ಸೆರೆ
ಮೈಸೂರು

ರೈಸ್ ಪುಲ್ಲಿಂಗ್ ಮೂಲಕ ವಂಚನೆ: ನಾಲ್ವರ ಸೆರೆ

October 1, 2020

ಮೈಸೂರು,ಸೆ.30(ಆರ್‍ಕೆ)-ರೈಸ್ ಪುಲ್ಲಿಂಗ್ ಮೂಲಕ ಲಕ್ಷಾಂತರ ರೂ. ವಸೂಲಿ ಮಾಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ನಾಲ್ವರನ್ನು ಮೈಸೂರಿನ ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಚೆನ್ನೈ ನಗರದ ಎಂ.ಜಿ.ಚಂದ್ರ ಮೋಹನ್ (57), ಕೇರಳದ ಮಲಪುರಂ ನಿವಾಸಿ ಟಿ.ವಿ.ಇಬ್ರಾಹಿಂ (50), ಬೆಂಗಳೂರಿನ ಕೆ.ಆರ್. ಗಿರಿನಾದನ್ (49) ಹಾಗೂ ಎಂ.ಗೋಪಿ(40) ಬಂಧಿತ ಆರೋಪಿಗಳಾಗಿದ್ದು, ಅವರಿಂದ ರೈಸ್‍ಪುಲ್ಲಿಂಗ್‍ಗೆ ಬಳಸುತ್ತಿದ್ದ ಪರಿಕರಗಳನ್ನು ಪೊಲೀಸರು ವಶಪಡಿ ಸಿಕೊಂಡಿದ್ದಾರೆ. ಬಾತ್ಮಿದಾರರು ನೀಡಿದ ಖಚಿತ ಮಾಹಿತಿಯನ್ನು ಆದರಿಸಿ ಬೆನ್ನತ್ತಿದ ಇನ್ಸ್‍ಸ್ಪೆಕ್ಟರ್ ಪ್ರಸನ್ನ ಹಾಗೂ ಸಿಬ್ಬಂದಿ, ಸೆಪ್ಟೆಂಬರ್ 26ರಂದು ಧನ್ವಂತರಿ ರಸ್ತೆಯ ಹೋಟೆಲ್‍ವೊಂದರ ಕೊಠಡಿಯ ಮೇಲೆ ದಾಳಿ ನಡೆಸಿದಾಗ ನಾಲ್ವರು ತಮ್ಮ ನಕಲಿ ಉಪಕರಣಗಳನ್ನು ಬಳಸಿ ಮೊಬೈಲ್‍ಗಳಿಂದ ವೀಡಿಯೋಗಳನ್ನು ತೋರಿಸಿ ನಕಲಿ ರೈಸ್‍ಪುಲ್ಲಿಂಗ್ ದಂಧೆಯಲ್ಲಿ ತೊಡಗಿದುದ್ದು ಕಂಡುಬಂತು. ಆ ಮೂಲಕ ಸಾರ್ವಜನಿಕರಿಂದ ಲಕ್ಷಾಂತರ ರೂ. ಸುಲಿಗೆ ಮಾಡಿ, ವಂಚನೆ ಮಾಡುತ್ತಿದ್ದರೂ ಎಂಬುದು ಆರೋಪಿಗಳ ವಿಚಾರಣೆಗೊಳಪಡಿಸಿದಾಗ ತಿಳಿಯಿತು. ಪ್ರಕರಣ ದಾಖಲಿಸಿಕೊಂಡಿ ರುವ ದೇವರಾಜ ಠಾಣೆ ಪೊಲೀಸರು, ಈ ಆಸಾಮಿಗಳಿಗೆ ಹಣ ನೀಡಿ ವಂಚನೆ ಗೊಳಗಾಗಿರುವ ಸಾರ್ವಜನಿಕರು ಇನ್ಸ್‍ಸ್ಪೆಕ್ಟರ್ ಮೊ.ನಂ 9480802231 ಅಥವಾ ಪೊಲೀಸ್ ಠಾಣೆ 0821-2418306 ಅನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

Translate »