ಮೈಸೂರು, ಸೆ. 30- ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಅಂತರ್ಜಾಲದಲ್ಲಿ ಸ್ಮರಣೆ ಕಾರ್ಯ ಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಕರ್ನಾಟಕ ಮೃಗಾ ಲಯ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಅವರನ್ನು ಸ್ಮರಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಶರಣು ವಿಶ್ವ ವಚನ ಫೌಂಡೇಷನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ ಶರಣರು ಮರಣವನ್ನು ಮಹಾ ನವಮಿ ರೀತಿ ಬರಮಾಡಿಕೊಂಡವರು. ನಾವು ಎಷ್ಟು ವರ್ಷ ಬದು ಕಿದ್ದೆವು ಎನ್ನುವುದಕ್ಕಿಂತ ಬದುಕಿದ್ದಷ್ಟು ವರ್ಷ ಯಾವ ರೀತಿ ಬದುಕಿದ್ದೆವು ಎಂಬುದು ಮುಖ್ಯ. ಪ್ರಪಂಚದಲ್ಲಿ ಎರಡು ರೀತಿಯ ವರ್ಗದ ಜನರನ್ನು ಕಾಣು ತ್ತೇವೆ. ಬದುಕಿ ಸತ್ತವರು, ಸತ್ತು ಬದುಕಿದವರು. ನಂಜುಂಡ ಸ್ವಾಮಿ ಅವರು ನಮ್ಮೊಡನೆ ಇಲ್ಲದಿದ್ದರೂ ವಕೀಲರಾಗಿ, ಮೃಗಾಲಯದ ಅಧ್ಯಕ್ಷರಾಗಿ, ಕಾನೂನು ಸಲಹೆಗಾರರಾಗಿ ಅವರು ಸಲ್ಲಿಸಿದ ಸೇವೆ ಮುಖಾಂತರ ಕೀರ್ತಿಶೇಷರಾಗಿದ್ದಾರೆ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಚಂದ್ರಶೇಖರ್, ಜೆ.ಪಿ.ನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್, ಹಿರಿಯ ವಕೀಲ ಅಂಬಳೆ ಶಿವಾನಂದಸ್ವಾಮಿ ಅವರ ಸೇವೆಯನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘದ ಉಪಾಧ್ಯಕ್ಷ ಎ.ಪಿ.ವಿರೂಪಾಕ್ಷ, ಸರಸ್ವತಿ ರಾಮಣ್ಣ, ದೀಪ ತೊಲಗಿ ಉಪಸ್ಥಿತರಿದ್ದರು.