ಕಾಯ್ದೆ ತಿದ್ದುಪಡಿ ವಿರುದ್ಧ ಜನಾಂದೋಲನ
ಮೈಸೂರು

ಕಾಯ್ದೆ ತಿದ್ದುಪಡಿ ವಿರುದ್ಧ ಜನಾಂದೋಲನ

October 1, 2020

ಮೈಸೂರು, ಸೆ.30(ಆರ್‍ಕೆಬಿ)- ನಿರುದ್ಯೊಗ, ಆರ್ಥಿಕ ಕುಸಿತ, ಪ್ರಜಾಪ್ರಭುತ್ವದ ಮೇಲಿನ ಹಲ್ಲೆ, ರೈತರ ಭೂಮಿ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ತರುತ್ತಿರುವ ಮರಣ ಶಾಸನಗಳ ಕುರಿತು ಅ.2ರ ಗಾಂಧಿ ಜಯಂತಿಯಿಂದ ಅ.11ರ ಜೆ.ಪಿ.ಜಯಂತಿವರೆಗೆ ಆನ್‍ಲೈನ್ ವೆಬಿನಾರ್ ಮತ್ತು ಸಭೆಗಳನ್ನು ಆಯೋಜಿಸಲಾಗಿದೆ ಎಂದು ಜನಾಂದೋಲನ ಮಹಾಮೈತ್ರಿಯ ಮುಖ್ಯಸ್ಥ ಎಸ್.ಆರ್.ಹಿರೇಮಠ ಇಂದಿಲ್ಲಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅ.2ರ ಸಂಜೆ ಮೈಸೂರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಅ.4ರಂದು ಬೆಂಗಳೂರು, 6ರಂದು ತುಮ ಕೂರು, 8ರಂದು ಶಿವಮೊಗ್ಗ, 9 ಮತ್ತು 10ರಂದು ರಾಯಚೂರಿ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಅ.11ರಂದು ಧಾರವಾಡದಲ್ಲಿ ಸಮಾರೋಪಗೊಳ್ಳಲಿದೆ. ಮೈಸೂರಿನಲ್ಲಿ ಅ.2ರ ಸಂಜೆ 4ಕ್ಕೆ ಪ್ರೊ. ರಾಜೇಂದ್ರ ಜೆನ್ನಿ ಅವರ `ಲೋಕವಿಮರ್ಶೆ’ ಮತ್ತು ಶಶಿಕಾಂತ ಸೆಂಥಿಲ್ ಅವರ `ನಾನೇಕೆ ರಾಜೀನಾಮೆ ನೀಡಿದೆ’, ಎ.ಎಸ್. ಪುತ್ತಿಗೆ ಅವರ `ನಿಗೂಢ ಅಕ್ಷರಗಳು’ ಪುಸ್ತಕಗಳ ಬಿಡುಗಡೆಯಾಗಲಿದೆ.

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ದೇವನೂರು ಮಹಾದೇವ ಉಪಸ್ಥಿತರಿರುವರು ಎಂದರು. `ನಿರುದ್ಯೋಗ ಸಮಸ್ಯೆಗೆ ಮೂಲ ಕಾರಣ ಮತ್ತು ಪರಿಹಾರ’ ಕುರಿತು ಶ್ರೀರಾಮಾಂಜಿನಪ್ಪ ಆಲ್ದಳ್ಳಿ ಮತ್ತು ಶಿವಸುಂದರ್ ಉಪನ್ಯಾಸ ನೀಡಲಿದ್ದಾರೆ. `ವಲಸೆ ಕಾರ್ಮಿಕರ ಮತ್ತು ನರೇಗಾ ಕಾರ್ಮಿಕರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ’ ಕುರಿತು ಬಸವರಾಜ್ ರಾಯಚೂರು ಮತ್ತು ದಿಲೀಪ್ ಕಾಮತ್ ಧಾರವಾಡ ಅವರು 2ನೇ ಉಪನ್ಯಾಸ ನೀಡಲಿದ್ದಾರೆ. ರೈತಸಂಘ, ದಲಿತ ಸಂಘಟನೆಗಳು, ಮಹಾಮೈತ್ರಿಯ ಸಹಭಾಗಿ ಸಂಘಟನೆಗಳು ಭಾಗವಹಿಸುತ್ತಿವೆ ಎಂದರು. ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜನಾಂದೋಲನ ಮಹಾಮೈತ್ರಿಯ ಸಂಚಾಲಕ ಅಭಿರುಚಿ ಗಣೇಶ್ ಸುದ್ದಿಗೋಷ್ಠಿಯಲ್ಲಿದ್ದರು.

Translate »