ಹಳೇ ಆರ್‍ಎಂಸಿಯಲ್ಲಿ `ಹಸಿವು ನಿವಾರಣಾ ಕೇಂದ್ರ’ ಪುನಾರಂಭ
ಮೈಸೂರು

ಹಳೇ ಆರ್‍ಎಂಸಿಯಲ್ಲಿ `ಹಸಿವು ನಿವಾರಣಾ ಕೇಂದ್ರ’ ಪುನಾರಂಭ

October 1, 2020

ಮೈಸೂರು, ಸೆ.30(ಆರ್‍ಕೆಬಿ)-ಮೈಸೂರಿನ ಹಳೆ ಆರ್‍ಎಂಸಿ ಮಾರುಕಟ್ಟೆ ಆವರಣ ದಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರ `ಹಸಿವು ನಿವಾರಣಾ ಕೇಂದ್ರ’ ಪುನಾರಂಭಗೊಂಡಿದೆ. 2019ರ ಸೆಪ್ಟೆಂಬರ್‍ನಲ್ಲಿ ಆರಂಭಿಸಿ ಪ್ರತಿದಿನ 50 ಮಂದಿ ಬಡವರು, ಕೂಲಿಕಾರ್ಮಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೊರೊನಾ ಲಾಕ್‍ಡೌನ್ ಸಂದರ್ಭ ಕಳೆದ ಮಾರ್ಚ್‍ನಲ್ಲಿ ಸ್ಥಗಿತಗೊಳಿಸಲಾಗಿತ್ತು.

ಲಯನ್ಸ್ ಸಂಸ್ಥೆಯ ವಿದ್ಯಾಸ್ ಶಾಖೆ ಇದರ ಜವಾಬ್ದಾರಿ ಹೊತ್ತಿದೆ. ದಾನಿಗಳು ತಮ್ಮ, ಕುಟುಂಬ ದವರ ಮದುವೆ, ಹುಟ್ಟುಹಬ್ಬ ಇನ್ನಿತರೆ ಸಂದರ್ಭಗಳಲ್ಲಿ ಹಣ ಅಥವಾ ಊಟ ನೀಡ ಬಹುದಾಗಿದೆ ಎಂದು ಮುಖ್ಯಸ್ಥ ಪಪ್ಪಾಯಿ ಪಿ.ರೇವಣ್ಣ ಮನವಿ ಮಾಡಿದ್ದಾರೆ.

Translate »