ಮೈಸೂರು,ಸೆ.30(ಆರ್‍ಕೆ)-ಎಲ್ಲಾ ಬಗೆಯ ಸಿಹಿ ತಿಂಡಿ(ಸ್ವೀಟ್ಸ್)ಗಳ ಮೇಲೆ ಇಂತಿಷ್ಟೆ ದಿನಾಂಕದೊಳಗೆ ಬಳಸಬೇಕೆಂಬ ಎಕ್ಸ್ ಪೈರಿ ಡೇಟ್ ನಮೂದಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರದ ಫುಡ್ ಸೇಫ್ಟಿ ಅಂಡ್ ಸ್ಟಾಂಡಡ್ರ್ಸ್ ಅಥಾರಿಟಿ ಆಫ್ ಇಂಡಿಯಾ(FSSAI) ದವರು ನಾಳೆ(ಅ.1)ಯಿಂದ ಸ್ವೀಟ್ಸ್ ಅಂಗಡಿ ಗಳಲ್ಲಿ ಅವುಗಳನ್ನು ಇಂತಿಷ್ಟೆ ದಿನದೊಳಗೆ ಬಳಸಬೇಕೆಂದು(Use Best before-Expiry Date) ಎಂದು ಪ್ರತಿ ಸಿಹಿ ತಿಂಡಿಯ ಪ್ಯಾಕೆಟ್ ಮೇಲೆ ಹಾಗೂ ಟ್ರೇ ಮುಂಭಾಗ ಶೋಕೇಸ್‍ನಲ್ಲಿ ಪ್ರದರ್ಶಿಸುವುದು ಕಡ್ಡಾಯ ಎಂಬ ಆದೇಶ ಹೊರಡಿಸಿದೆ. ಅದರಂತೆ ಮೈಸೂರು ನಗರ ಮತ್ತು ಜಿಲ್ಲಾದ್ಯಂತ ಎಲ್ಲಾ ಸ್ವೀಟ್ಸ್ ಅಂಗಡಿಗಳು, ಬೇಕರಿಗಳು ಹಾಗೂ ಸಿಹಿ ತಿಂಡಿ ಮಾರುವ ಇನ್ನಿತರ ಶಾಪ್‍ಗಳಲ್ಲಿ ಈ ಆದೇಶದನ್ವಯ Use Best before-Expiry Date ಆಚಿಣe ಅನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಾಗಿದೆ.
ಕೆಲವು ಪ್ರದೇಶಗಳಲ್ಲಿ ಮಾರಾಟ ಮಾಡುವ ಸಿಹಿ ತಿಂಡಿಗಳು ಕಳಪೆ ಸ್ಟಾಂಡಡ್ರ್ಸ್ ಆಗಿದ್ದು, ಕೆಲವರಂತೂ ಎಕ್ಸ್‍ಪೈರಿ ದಿನಾಂಕ ಮುಗಿದಿ ದ್ದರೂ ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಹಕರು ದೂರು ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಬೇರೆ ಆಹಾರ ಪದಾರ್ಥ, ನೀರು, ತಂಪುಪಾನೀಯಗಳಂತೆಯೇ ಸ್ವೀಟ್ಸ್‍ಗಳ ಎಕ್ಸ್‍ಪೈರಿ ದಿನಾಂಕವನ್ನು ಪ್ರಕಟಿಸಬೇಕೆಂದು ಆದೇಶ ಹೊರಡಿಸಿತ್ತು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ವಿಭಾಗದ ಅಧಿಕಾರಿಗಳು ಹಾಗೂ ನಗರ ಪ್ರದೇಶ ಗಳಲ್ಲಿ ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಈ ಆದೇಶ ವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದೆಯೇ ಎಂಬುದರ ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಹೊಂದಿದ್ದಾರೆ.
ಸರ್ಕಾರದ ಈ ಆದೇಶಕ್ಕೆ ಬಹುತೇಕ ಸಿಹಿ ತಿಂಡಿ ಮಾರಾಟ ಮಾಡುವ ಅಂಗಡಿ ಹಾಗೂ ಹೋಟೆಲ್‍ಗಳ ಮಾಲೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಅವೈಜ್ಞಾ ನಿಕ ಕ್ರಮ ಎಂದಿದ್ದಾರೆ. ಮೈಸೂರಿನ ಪ್ರತಿ ಷ್ಠಿತ ಮಹಾಲಕ್ಷ್ಮೀ ಸ್ವೀಟ್ಸ್ ಮಾಲೀಕರಾದ ಶಿವಕುಮಾರ್ ಅವರು ಈ ಕುರಿತು `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಸ್ವೀಟ್ಸ್ ಬಾಕ್ಸ್‍ಗಳ ಮೇಲೆ ಎಕ್ಸ್ ಪೈರಿ ಡೇಟ್‍ಗಳನ್ನು ಮುದ್ರಿಸಲಾಗಿದ್ದು, ಗ್ರಾಹ ಕರಿಗೆ ಉತ್ತಮ ಗುಣಮಟ್ಟದ ಸಿಹಿ ತಿಂಡಿ ಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಇದೀಗ ಸರ್ಕಾರ ಹೊಸ ಆದೇಶವನ್ನು ಹೊರಡಿಸಿರುವುದರಿಂದ ಟ್ರೇಗಳಲ್ಲಿ ಇಡುವ ಸಿಹಿ ತಿಂಡಿಗಳ ಬಳಿಯೂ ಅವುಗಳನ್ನು ಇಂತಿಷ್ಟೇ ದಿನದೊಳಗೆ ಬಳಸಬೇಕೆಂದು ಫಲಕ ಪ್ರದರ್ಶಿಸಲು ನಮ್ಮ ಎಲ್ಲಾ ಔಟ್ ಲೆಟ್‍ಗಳಲ್ಲಿ ವ್ಯವಸ್ಥೆ ಮಾಡಿದ್ದೇವೆ ಎಂದರು.
ಬಾಂಬೆ ಟಿಫಾನಿಸ್ ಅನೆಕ್ಸ್ ಮಾಲೀಕ ಅನಿಲ್‍ಕುಮಾರ್ ಮಾತನಾಡಿ, ಈ ಕುರಿ ತಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿ ರುವ ಕ್ರಮದ ಬಗ್ಗೆ ಮಾಹಿತಿ ಇದೆಯಾದರೂ ನಮಗೆ ಸ್ಪಷ್ಟ ನಿರ್ದೇಶನಗಳು ಬಂದಿಲ್ಲ. ಇಂದು ಸಂಜೆ ವೇಳೆಗೆ ಅಧಿಕೃತ ಮಾಹಿತಿ ಬರುವ ನಿರೀಕ್ಷೆ ಇದೆ. ಅದರಂತೆ ಸ್ವೀಟ್ಸ್ ಅಂಗಡಿ ಮಾಲೀಕರೆಲ್ಲರೂ ಮಾತನಾಡಿ ಕೊಂಡು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಲಹೆ -ಮಾರ್ಗದರ್ಶನದಂತೆ ಕ್ರಮ ವಹಿಸು ತ್ತೇವೆ ಎಂದರು. ಮೈಸೂರಿನ ಶಿವರಾಂ ಪೇಟೆ ರಸ್ತೆಯಲ್ಲಿರುವ ಪ್ರೀತಿಸಾಗರ್ ಹೋಟೆಲ್ ಮಾಲೀಕ ನಾರಾಯಣ ಕುಂದರ್, ಯಾವುದೇ ಕಾನೂನು ಬದಲಾವಣೆಗಳು ಉದ್ಯಮದ ಬೆಳವಣಿಗೆಗೆ ಪೂರಕವಾಗಿರಬೇಕೇ ಹೊರತು, ಉದ್ಯಮದ ಕತ್ತು ಹಿಸುಕುವಂತಾಗಬಾ ರದು. ಈಗಾಗಲೇ ಕೋವಿಡ್ -19 ಲಾಕ್ ಡೌನ್ ನಿರ್ಬಂಧದಿಂದಾಗಿ ವ್ಯಾಪಾರವಿಲ್ಲದೆ ಕಂಗಾಲಾಗಿರುವ ಹೋಟೆಲ್ ಉದ್ಯಮಿ ಗಳಿಗೆ ಈ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ಇಂದ್ರ ಕೆಫೆ ಪರಾಸ್ ಮಾಲೀಕ ಸೋನು ಚಂದ್ರ, ಈ ಕುರಿತು ಪ್ರತಿಕ್ರಿಯಿಸಿ ಈಗಾ ಗಲೇ ಸ್ವೀಟ್ಸ್ ಪ್ಯಾಕೆಟ್‍ಗಳಲ್ಲಿ ತಯಾರಿಸಲಾದ ದಿನಾಂಕ ಹಾಗೂ ಎಕ್ಸ್‍ಪೈರಿ ದಿನಾಂಕ ವನ್ನು ಮುದ್ರಿಸಲಾಗಿದೆ. ಬಿಡಿ ಬಿಡಿಯಾಗಿ ಮಾರಾಟ ಮಾಡುವ ಸ್ವೀಟ್‍ಗಳಿಗೂ ಇದನ್ನು ಪ್ರದರ್ಶಿಸಬೇಕೆಂಬುದು ಅವೈಜ್ಞಾನಿಕ ನಿಯಮ, ಪ್ರಾಯೋಗಿಕವಾಗಿ ಅದನ್ನು ಅನು ಸರಿಸುವುದು ಕಷ್ಟಕರ ಎಂದರು. ಮೈಸೂ ರಿನ ಚಿಕ್ಕಗಡಿಯಾರದ ಬಳಿ ದೇವರಾಜ ಮಾರ್ಕೆಟ್ ಕಟ್ಟಡದಲ್ಲಿರುವ ಅತ್ಯಂತ ಅಳೆಯ ದಾದ ಗುರುಸ್ವೀಟ್ಸ್ ಮಾಲೀಕ ಕುಮಾರ್, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾನೂನು ಕೇವಲ ಸಂಬಂಧಪಟ್ಟ ಅಧಿಕಾರಿ ಗಳನ್ನು ಭ್ರಷ್ಟರನ್ನಾಗಿ ಮಾಡುವ ಹುನ್ನಾರವೇ ಹೊರತು, ಇದರಿಂದ ಸ್ವೀಟ್ಸ್ ಅಂಗಡಿ ಮಾಲೀ ಕರಿಗಾಗಲೀ ಗ್ರಾಹಕರಿಗಾಗಲಿ ಯಾವುದೇ ಅನುಕೂಲವಾಗಲಾರದು. ಏಕೆಂದರೆ, ಸಣ್ಣ ಪುಟ್ಟ ಸಿಹಿ ತಿಂಡಿ ಮಾರಾಟಗಾರರು ಹಾಗೂ ಟ್ರೇನಲ್ಲಿಟ್ಟುಕೊಂಡು ಮಾರಾಟ ಮಾಡು ವವರು ಹೇಗೆ ತಾನೆ, ಎಕ್ಸ್‍ಪೈರಿ ಡೇಟ್ ಬರೆ ಯುವರು. ಇದೊಂದು ಅವೈಜ್ಞಾನಿಕ ಕ್ರಮ ವಾಗಿದ್ದು ಸರ್ಕಾರ ತಕ್ಷಣವೇ ಈ ಆದೇಶ ವನ್ನು ಹಿಂಪಡೆಯುವುದು ಸೂಕ್ತ ಎಂದರು.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಫುಡ್ ಸೇಫ್ಟಿ ಅಂಡ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ ದವರು ಜಾರಿಗೆ ತಂದಿರುವ ಈ ನಿಯಮ ವನ್ನು ಸ್ವೀಟ್ ಅಂಗಡಿಗಳು ಪಾಲಿಸಲು ಸಾಧ್ಯ ವಾಗುವುದಿಲ್ಲ, ಈಗ ಗುಣಮಟ್ಟದ ಸಿಹಿತಿಂಡಿ ಗಳನ್ನು ತಯಾರಿಸಿ ಮಾರಾಟ ಮಾಡಲಾಗು ತ್ತಿದೆ. ಪ್ಯಾಕ್‍ಗಳ ಮೇಲೆ ಎಕ್ಸ್‍ಪೈರಿ ಡೇಟನ್ನೂ ಮುದ್ರಿಸಲಾಗಿದೆ. ಟ್ರೇನಲ್ಲಿಟ್ಟು ಮಾರಾಟ ಮಾಡುವ ಸ್ವೀಟ್ಸ್‍ಗಳ ಮುಂದೆಯೂ ಎಕ್ಸ್ ಪೈರಿ ದಿನಾಂಕ ಫಲಕ ಹಾಕಬೇಕೆಂಬುದು ಅವೈಜ್ಞಾನಿಕ ಹಾಗೂ ಕೇವಲ ಅಧಿಕಾರಿಗಳಿಗೆ ಅನುಕೂಲವಾಗುವುದೇ ಹೊರತು ಇದರಿಂದ ಗ್ರಾಹಕರಿಗೆ ಪ್ರಯೋಜನವಾಗಲಾರದು. ತಕ್ಷಣ ಸರ್ಕಾರ ಈ ಆದೇಶವನ್ನು ಮರು ಪರಿಶೀಲಿಸಿ ಸೂಕ್ತ ಕ್ರಮ ವಹಿಸುವುದು ಒಳಿತು ಎಂದರು.