88 ಲಸಿಕೆ ಮಳಿಗೆಗಳೊಂದಿಗೆ ಕೋವಿಡ್ ವಿರುದ್ಧ ಹೋರಾಟಕ್ಕೆ ರಾಜ್ಯ ತಯಾರಿ
ಮೈಸೂರು

88 ಲಸಿಕೆ ಮಳಿಗೆಗಳೊಂದಿಗೆ ಕೋವಿಡ್ ವಿರುದ್ಧ ಹೋರಾಟಕ್ಕೆ ರಾಜ್ಯ ತಯಾರಿ

January 11, 2021

ಬೆಂಗಳೂರು,ಜ.10-ಬೆಂಗಳೂರಿನ ಆನಂದ್ ರಾವ್ ಸರ್ಕಲ್‍ನಲ್ಲಿರುವ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಹಳೆಯ ಕಚೇರಿಯಲ್ಲಿ ಕೋವಿಡ್-19 ಲಸಿಕೆ ಬಾಟಲುಗಳನ್ನು ಸುರಕ್ಷಿತ ವಾಗಿ ಸರಬರಾಜು ಹಾಗೂ ಸಂಗ್ರಹಿಸುವ ವ್ಯವಸ್ಥೆಯನ್ನು ಕರ್ನಾಟಕ ಆರೋಗ್ಯ ಸಚಿವ ಕೆ.ಸುಧಾಕರ್ ಪರಿಶೀಲಿಸಿದ್ದಾರೆ.

ಸಚಿವರ ಪ್ರಕಾರ, ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಟದ ಚೈನ್ ನೆಟ್‍ವರ್ಕ್ ನಲ್ಲಿ 88 ಲಸಿಕೆ ಮಳಿಗೆಗಳಿದೆ. ಎರಡು ದೊಡ್ಡ ಶೇಖರಣಾ ಘಟಕಗಳು-ಬೆಂಗ ಳೂರು ಮತ್ತು ಬೆಳಗಾವಿಯಲ್ಲಿರಲಿದೆ. ಚಿತ್ರದುರ್ಗ, ಕಲಬುರಗಿ, ದಕ್ಷಿಣ ಕನ್ನಡ, ಮೈಸೂರು ಮತ್ತು ಬಾಗಲಕೋಟೆಯಲ್ಲಿ ಐದು ಪ್ರಾದೇಶಿಕ ಘಟಕಗಳಿರಲಿದೆ. ಬಿಬಿ ಎಂಪಿ ಮಿತಿಯಲ್ಲಿ ಒಬೆ ಕಾಪೆರ್Çರೇಷನ್ ಶೇಖರಣೆಯ ಜೊತೆಗೆ 30 ಜಿಲ್ಲಾ ಲಸಿಕೆ ಸಂಗ್ರಹ ಗಾರಗಳೂ ಇದೆ. ಸಚಿವಾಲಯವು 50 ಬ್ಲಾಕ್ ಲಸಿಕೆ ಮಳಿಗೆಗಳು, 2767 ಕೋಲ್ಡ್ ಚೈನ್ ಪಾಯಿಂಟ್‍ಗಳು ಮತ್ತು 900 ಲಾಜಿಸ್ಟಿಕ್ ವಾಹನಗಳನ್ನು ಸಿದ್ಧವಾಗಿಸಿದೆ.

ಜ.16ರಿಂದ ಪ್ರಾರಂಭವಾಗುವ ಲಸಿಕೆ ಅಭಿ ಯಾನದ ಹಿನ್ನೆಲೆಯಲ್ಲಿ ನಾವು ಶೇಖರಣೆಯ ಗುಣಮಟ್ಟವನ್ನು ನಿರ್ವಹಿಸಿದ್ದೇವೆ ಮತ್ತು ಕರ್ನಾಟಕದ ಪ್ರತಿಯೊಂದು ಮೂಲೆಮೂಲೆ ಯಲ್ಲೂ ಕೋವಿಡ್ ಲಸಿಕೆಗಳನ್ನು ಲಭ್ಯವಾಗಿಸಲು ಸಜ್ಜಾಗಿ ದ್ದೇವೆ. ಮೊದಲ ಹಂತದಲ್ಲಿ 13.90 ಲಕ್ಷ ಲಸಿಕೆಗಳನ್ನು ನಿರೀಕ್ಷಿಸಲಾಗಿದೆ, ಅಂದರೆ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಹೋರಾಟಗಾರರನ್ನು ಮೊದಲ ಸಾಲಿನಲ್ಲಿ ಪರಿಗಣಿಸಲಾಗುತ್ತದೆ. ಬೆಂಗಳೂರಿನಲ್ಲಿ 2 ವಾಕ್-ಇನ್ ಕೂಲರ್‍ಗಳಿವೆ, ಅದು 45 ಲಕ್ಷ ಬಾಟಲು ಗಳನ್ನು ಸಂಗ್ರಹಿಸಬಲ್ಲದು, ಮತ್ತು 25 ಲಕ್ಷ ಸಿರಿಂಜ್‍ಗಳು ಬರುವ ನಿರೀಕ್ಷೆಯಿದೆಒಂದು ವಾಕ್-ಇನ್ ಫ್ರೀಜರ್ ಇದ್ದು ಅದು 40 ಲಕ್ಷ ಲಸಿಕೆ ಸಂಗ್ರಹಿಸಬಹುದು ಮತ್ತು ಇನ್ನೂ ಒಂದು ಕೇಂದ್ರ ಸರ್ಕಾರದಿಂದ ಬರುವ ನಿರೀಕ್ಷೆ ಇದೆ ಸುಧಾಕರ್ ಹೇಳಿದರು.

ಲಸಿಕೆಗಳು ಮೊದಲು ರಾಜ್ಯ ಶೇಖರಣಾ ಘಟಕಗಳಿಗೆ ತಲುಪಲಿದೆ. ನಂತರ ಐದು ಪ್ರಾದೇಶಿಕ ಮಳಿಗೆಗಳಿಗೆ ಜಿಲ್ಲಾ ಕೇಂದ್ರಗಳಿಗೆ ಕೊಂಡೊಯ್ಯಲ್ಪಡಲಿದೆ. ಲಸಿಕೆ ತೆಗೆದು ಕೊಳ್ಳುವಲ್ಲಿ ಯಾವುದೇ ಭಯದ ಅಗತ್ಯವಿಲ್ಲ. ಸಚಿವರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಲಸಿಕೆಯನ್ನು ಎಂದು ಪಡೆದುಕೊಳ್ಳಬಹುದು ಎಂಬ ಬಗ್ಗೆ ಕೇಂದ್ರದಿಂದ ಮಾರ್ಗಸೂಚಿಗಳಿಗಾಗಿ ಕಾಯುತ್ತಿದ್ದಾರೆ ಎಂದು ಆರೋಗ್ಯ ಸಚಿವರು ಹೇಳಿದರು.

ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ನಂತರ, ನಾನು ಅದನ್ನು ತೆಗೆದುಕೊಳ್ಳುವ ರಾಜ್ಯದ ಮೊದಲ ವ್ಯಕ್ತಿಯಾಗುತ್ತೇನೆ, ಸುರಕ್ಷಿತ ಲಸಿಕೆ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಸತತ ಪ್ರಯತ್ನ ಮಾಡಿದ್ದಾರೆ. ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುತ್ತಿರುವಾಗ ಜನಸಮೂಹ ನಿರ್ವಹಣೆ ಸಮಸ್ಯೆಯಾಗುವುದಿಲ್ಲ ಆದರೆ ಲಸಿಕೆಯನ್ನು ಸಾಮಾನ್ಯ ಜನರಿಗೆ ತಲುಪಿಸುವಾಗ ಎದುರಾಗುವ ಸವಾಲು ದೊಡ್ಡದಾಗಿರಲಿದೆ.ಎರಡು ಡ್ರೈ ರನ್ಗಳು ಅಥವಾ ಅಣಕು ಡ್ರಿಲ್‍ಗಳು ಇತ್ತೀಚೆಗೆ ರಾಜ್ಯದಲ್ಲಿ ನಡೆದಿದ್ದು ಅದರಿಂದ ಸರ್ಕಾರವು ತಾಂತ್ರಿಕ ಮತ್ತು ಡಿಜಿಟಲ್ ತೊಂದರೆಗಳನ್ನು ನಿಭಾಯಿಸಲ್ಲು ಸಹಾಯವಾಗಿದೆ. ಒಟಿಪಿ ಸರಿಯಾದ ವ್ಯಕ್ತಿಯನ್ನು ತಲುಪಬೇಕು. ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಲಸಿಕೆ ಕರ್ನಾಟಕದ ಎಲ್ಲ ಜನರನ್ನು ತಲುಪಲು ಕೆಲವು ತಿಂಗಳುಗಳನ್ನು ತೆಗೆದು ಕೊಳ್ಳುತ್ತದೆ” ಎಂದರು. ಖಾಸಗಿ ಆಸ್ಪತ್ರೆಗಳು ಲಸಿಕೆ ಸಂಗ್ರಹಕ್ಕೆ ತಮ್ಮನ್ನು ಸಿದ್ಧಪಡಿಸಿ ಕೊಳ್ಳುತ್ತಿವೆ. ಎಂ.ಎಸ್.ರಾಮಯ್ಯ ಸ್ಮಾರಕ ಆಸ್ಪತ್ರೆಯು ತನ್ನ 3,500 ಕೋವಿಡ್ ಫ್ರಂಟ್‍ಲೈನ್ ಸಿಬ್ಬಂದಿಗೆ 10 ವ್ಯಾಕ್ಸಿನೇಷನ್ ಕೇಂದ್ರಗಳನ್ನು ತನ್ನ ವಿಸ್ತಾರವಾದ ಆವರಣದಲ್ಲಿ ಹೊಂದಿರ ಲಿದೆ. ನಾವು ಎರಡು ಹಾಸ್ಪಿಟಲ್ ವಿಂಗ್‍ಗಳಲ್ಲಿ ತಲಾ ಎರಡು ವ್ಯಾಕ್ಸಿನೇಷನ್ ಕೇಂದ್ರಗಳನ್ನು ಹೊಂದಿದ್ದೇವೆ, ನಮ್ಮ ವೈದ್ಯಕೀಯ ಔಷಧಾಲಯ ಮತ್ತು ನರ್ಸಿಂಗ್ ಕಾಲೇಜುಗಳಲ್ಲಿ ಒಂದೊಂದು ಲಸಿಕೆ ಕೇಂದ್ರಗಳಿದೆ ಎಂಎಸ್‍ಆರ್ ಸ್ಮಾರಕ ಆಸ್ಪತ್ರೆಯ ಅಧ್ಯಕ್ಷ ಡಾ.ನರೇಶ್ ಶೆಟ್ಟಿ ತಿಳಿಸಿದರು. ಪ್ರತಿ ವ್ಯಾಕ್ಸಿನೇಷನ್ಗೆ 10 ನಿಮಿಷಗಳ ಸಮಯ ತೆಗೆದುಕೊಳ್ಳಬಹುದು ಮತ್ತು ಯಾವುದೇ ಪ್ರತಿಕೂಲ ಪ್ರತಿಕ್ರಿಯೆಗೆ40 ನಿಮಿಷಗಳ ವೀಕ್ಷಣಾ ಅವಧಿ ಇರುತ್ತದೆ ಎಂದರು. ನಮ್ಮ ಸಮುದಾಯ ಔಷಧಾಲಯ ವೈದ್ಯರು ಮತ್ತು ತುರ್ತು ತಜ್ಞರನ್ನು ಸ್ಥಳದಲ್ಲಿ ಯಾವುದೇ ಬದಲಾವಣೆಗಳ ಗಮನಿಸಲು ಇರಿಸುತ್ತೇವೆ. ಲಸಿಕೆ ತೆಗೆದುಕೊಳ್ಳುವ ವ್ಯಕ್ತಿಗಳಿಗೆಗೆ ನಾವು ಹಾಸಿಗೆಗಳನ್ನು ಒದಗಿಸಿದ್ದೇವೆ ಎಂದು ಅವರು ಹೇಳಿದರು. ತನ್ನ ಸಿಬ್ಬಂದಿಗಳಲ್ಲಿ ಕೋವಿಡ್ ಲಸಿಕೆಗೆ ಸಂಬಂಧಿಸಿದ ಆತಂಕಗಳನ್ನು ನಿವಾರಿಸಲು ತಾವೇ ಮೊದಲ ಲಸಿಕೆಯನ್ನು ತೆಗೆದುಕೊಳ್ಳುವುದಾಗಿ ಡಾ. ಶೆಟ್ಟಿ ಹೇಳಿದ್ದಾರೆ.

Translate »