ಮೈಸೂರು,ಜ.10(ಪಿಎಂ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಕಬಳಿಕೆ ಪ್ರಕರಣಗಳ ಸಂಬಂಧ ತನಿಖೆ ನಡೆಸುವಂತೆ ಲೋಕಾಯುಕ್ತ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ನೀಡುವುದಾಗಿ ತಿಳಿಸಿದ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಜೊತೆಗೆ ಜನವರಿ 12ರಂದು ಮುಡಾ ಎದುರು `ಮುಡಾ ಭ್ರಷ್ಟ ಮುಕ್ತಗೊಳಿಸಿ’ ಶೀರ್ಷಿಕೆ ಯಡಿ ಸಹಿ ಸಂಗ್ರಹ ಅಭಿಯಾನ ನಡೆಸ ಲಾಗುವುದು ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ 4ನೇ ಹಂತದ ನಿವೇಶನ (ಸಂಖ್ಯೆ 3165) ಅಕ್ರಮ ವರ್ಗಾವಣೆ ಸೇರಿದಂತೆ ಮುಡಾದಲ್ಲಿ ನಡೆ ದಿರುವ ನಿವೇಶನ ಕಬಳಿಕೆ ಪ್ರಕರಣಗಳ ಸಂಬಂಧ ಶೀಘ್ರದಲ್ಲಿ ಲೋಕಾಯುಕ್ತ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಸ ಲಾಗುವುದು. ಅಲ್ಲದೆ, ಜ.12ರಂದು ನಡೆಸ ಲಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ನಾಡಿನ ಹಲವು ಸಾಹಿತಿಗಳು ಹಾಗೂ ಜನಪರ ಹೋರಾಟಗಾರರು ಭಾಗವಹಿಸ ಲಿದ್ದಾರೆ ಎಂದು ಹೇಳಿದರು.
ಅಧಿಕಾರಿ ವರ್ಗ ಮುಡಾವನ್ನು ಭ್ರಷ್ಟಾ ಚಾರದ ಕೂಪ ಮಾಡುತ್ತಿದೆ. 20-30 ವರ್ಷ ಗಳಿಂದ ಮುಡಾದಿಂದ ಬಹುತೇಕ ಅಧಿ ಕಾರಿಗಳು ವರ್ಗಾವಣೆಯೇ ಆಗಿಲ್ಲ. ಹೀಗಾಗಿ ಅವರಿಗೆ ಅಕ್ರಮ ನಡೆಸಲು ರಹದಾರಿ ನಿರ್ಮಾಣವಾಗಿದೆ. ಹೆಚ್.ವಿ.ರಾಜೀವ್ ಅವರು ಮುಡಾ ಅಧ್ಯಕ್ಷರಾದ ಬಳಿಕ ಬಹ ಳಷ್ಟು ಹಗರಣಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ ಅವರು ಅಭಿನಂದನೆಗೆ ಅರ್ಹರು. ಆದರೆ ಅವರು ಈ ಬಗ್ಗೆ ತಾರ್ಕಿಕ ಅಂತ್ಯ ಕೊಡುವಲ್ಲಿ ಎಡವುತ್ತಿದ್ದಾರೆ. ಮೂರ್ನಾಲ್ಕು ನಿವೇಶನ ಕಬಳಿಕೆ ಸಂಬಂಧ ರಾಜೀವ್ ಅವರು ಸುದ್ದಿಗೋಷ್ಠಿ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಆ ಬಳಿಕ ಪಲಾಯನ ಮಾಡುತ್ತಿದ್ದಾರೆ. ನಿನ್ನೆಯೂ ಒಂದು ಪ್ರಕರಣ ಸಂಬಂಧ ಮುಡಾ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಎಫ್‍ಐಆರ್ ಆಗಿದೆ ಎಂದರು.
ಮುಡಾ ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸಿ ಅಧಿಕಾರಿಗಳನ್ನು ಹೆದರಿಸಿ ಡೀಲಿಂಗ್ ಮಾಡುತ್ತಿರುವ ಅನುಮಾನ ಕಾಡುತ್ತಿದೆ. ನಿವೇಶನ ಸಂಖ್ಯೆ 3165ರ ಸಂಬಂಧ ಮುಡಾ ಆಯುಕ್ತರು ಅಕ್ರಮ ವರ್ಗಾವಣೆ ಆಗಿರುವು ದನ್ನು ಒಪ್ಪಿಕೊಂಡಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದ ದಾಖಲೆಯ ಕಡತಗಳು ಕಳೆದು ಹೋಗಿವೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಈ ನಿವೇಶನದ ದಾಖಲೆಗಳ ಕಡತವೇ ಕಳೆದು ಹೋಗಿದ್ದರೆ, ನೀವು (ಮುಡಾ ಆಯುಕ್ತರು) ಹೇಗೆ ಪೌತಿ ಖಾತೆ ವರ್ಗಾವಣೆ ಮಾಡಿದ್ದೀರಿ? ಎಂದು ಪ್ರಶ್ನಿಸಿದರು.
ನಿವೇಶನ ಸಂಖ್ಯೆ 3165 ಅನ್ನು ಐಎಫ್‍ಎಸ್ ಅಧಿಕಾರಿಯಾಗಿದ್ದ ನಾಗ ರಾಜು ಮುಡಾಗೆ ಹಿಂದಿರುಗಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ ಅವರ ಪತ್ನಿ ದೀಪಾ ಹೆಸರಿಗೆ ಈ ನಿವೇಶನ ಅಕ್ರಮವಾಗಿ ವರ್ಗಾವಣೆ ಆಗಿದೆ. ಇದಕ್ಕೂ ಮುನ್ನ ನಾಗರಾಜು ಪತ್ನಿ ಜೆ.ಶಶಿಕಲಾ ಅವರಿಗೆ ಈ ನಿವೇಶನಕ್ಕೆ ಪೌತಿ ಖಾತೆ ಮಾಡಿಕೊಡಲಾಗಿದೆ. ಡಾ.ನಂದೀಶ್ ಹಂಚೆಯವರು ಒಟ್ಟು 60 ಲಕ್ಷ ರೂ. ಗಳನ್ನು ತಮ್ಮ ಬ್ಯಾಂಕ್ ಖಾತೆ ಮೂಲಕ ಶಶಿಕಲಾ ಅವರಿಗೆ ಪಾವತಿಸಿದ್ದಾರೆ. ಡಾ. ನಂದೀಶ್ ಹಂಚೆ ಈ ಸಂಬಂಧ `ಮಧ್ಯ ವರ್ತಿಗಳು ಈ ನಿವೇಶನ ಕೊಡಿಸಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ. ದಾಖಲೆ ಗಳು ಕಾಣೆಯಾದ ಮೇಲೆ ಮಧ್ಯವರ್ತಿ ಗಳು ಹೇಗೆ ವ್ಯವಹಾರ ನಡೆಸಿದರು? ಎಂದು ಅನುಮಾನ ವ್ಯಕ್ತಪಡಿಸಿದರು.
ಮುಡಾ ಅಧಿಕಾರಿಗಳು, ಜೆ.ಶಶಿಕಲಾ, ಮಧ್ಯವರ್ತಿಗಳು ಹಾಗೂ ಡಾ.ನಂದೀಶ್ ಹಂಚೆ ಸೇರಿಕೊಂಡು ಸರ್ಕಾರಿ ನಿವೇಶನ ಕಬಳಿಸಲು ಪ್ರಯತ್ನ ಮಾಡಿದ್ದಾರೆ. ಈ ಸಂಬಂಧ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ ಮುಡಾ ಆಯುಕ್ತರನ್ನು ಅಮಾನತು ಗೊಳಿಸಿ ತನಿಖೆ ನಡೆಸಬೇಕು ಎಂದು ಆಗ್ರ ಹಿಸಿದರು. ಮುಡಾ ಆಯುಕ್ತರು, ಅಧಿಕಾರಿ ಗಳು, ಡಾ.ನಂದೀಶ್ ಹಂಚೆ ವಿರುದ್ಧ ಲೋಕಾಯುಕ್ತ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗುವುದು. ಇನ್ನಿತರ ಪ್ರಕರಣಗಳ ಸಂಬಂಧವೂ ದೂರು ಸಲ್ಲಿಸಲಾಗುವುದು. ಜೆ.ಶಶಿಕಲಾ ಅವರನ್ನು ಬಲಿಪಶು ಮಾಡುತ್ತಿರುವ ಶಂಕೆ ಇದ್ದು, ಅವರು ಸಂಪರ್ಕಕ್ಕೆ ಸಿಗು ತ್ತಿಲ್ಲ. ಅವರು ನಾಪತ್ತೆ ಆಗಿದ್ದಾರಾ ಅಥವಾ ನಾಪತ್ತೆ ಮಾಡಿಸಿದ್ದರಾ? ಎಂಬ ಅನು ಮಾನ ಇದೆ. ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಹಿಂದುಳಿದ ವರ್ಗಗಳ ಮುಖಂಡರಾದ ಎಂ.ಲೋಕೇಶ್ ಕುಮಾರ್, ಪವನ್, ಶಶಿರಾಜ್, ಎಂ.ಮಂಜುನಾಥ್ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.