ಟಿಬೆಟಿಯನ್ ಗೋಲ್ಡನ್ ಟೆಂಪಲ್ ಪ್ರವಾಸಿಗರಿಗೆ ಮುಕ್ತ
ಮೈಸೂರು

ಟಿಬೆಟಿಯನ್ ಗೋಲ್ಡನ್ ಟೆಂಪಲ್ ಪ್ರವಾಸಿಗರಿಗೆ ಮುಕ್ತ

March 9, 2022

ಬೈಲುಕುಪ್ಪೆ, ಮಾ. ೮(ರಾಜೇಶ್)- ೭೦೦ ದಿನದ ಬಳಿಕ ಲಾಕ್‌ಡೌನ್ ಹಿಂಪಡೆದು ಬುದ್ಧನ ವೀಕ್ಷಣೆ ಮಾಡಲು ಪ್ರವಾಸಿಗರಿಗೆ ಅನುವು ಮಾಡಿಕೊಟ್ಟ ಗೋಲ್ಡನ್ ಟೆಂಪಲ್.
ಭಾರತದಲ್ಲಿ ಹೆಸರುವಾಸಿಯಾಗಿರುವ ಪ್ರವಾಸಿ ತಾಣಗಳಲ್ಲಿ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿರುವ ಟಿಬೆಟಿಯನ್ನರ ಗೋಲ್ಡನ್ ಟೆಂಪಲ್ ಕೂಡ ಒಂದು. ಪ್ರತಿನಿತ್ಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಇತರ ರಾಜ್ಯಗಳು ಸೇರಿದಂತೆ ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬುದ್ಧನ ದರ್ಶನ ಮಾಡಲು ಜನಜಂಗುಳಿಯೇ ಈ ಸ್ಥಳದಲ್ಲಿ ಕಂಡುಬರುತ್ತಿತ್ತು. ಆದರೆ ಚೀನಾದ ವ್ಯೂಹಾನ್‌ನಲ್ಲಿ ಉದ್ಭವಗೊಂಡ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಲಾಕ್‌ಡೌನ್ ನಿಯಮವನ್ನು ಜಾರಿಗೆ ತಂದಿತ್ತು. ಅದರ ಪ್ರಕಾರ ಗೋಲ್ಡನ್ ಟೆಂಪಲ್ ಆಡಳಿತ ಮಂಡಳಿ ಈ ಪ್ರವಾಸಿ ತಾಣಕ್ಕೆ ಪ್ರವಾಸಿಗರ ವೀಕ್ಷಣೆಗೆ ಕಡಿವಾಣ ಹಾಕಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಂತಹAತ ವಾಗಿ ಲಾಕ್‌ಡೌನ್ ಸಡಿಲಗೊಳಿಸಿದರೂ ಇಲ್ಲಿ ಮಾತ್ರ ಲಾಕ್‌ಡೌನ್ ತೆಗೆಯದೆ ಕೊರೊನಾ ವಿರುದ್ಧ ಹೋರಾ ಡಲು ಇಲ್ಲಿನ ಬೌದ್ಧ ಭಿಕ್ಷುಗಳು ಮುಂದಾಗಿದ್ದರು. ಸುಮಾರು ೭೦೦ ದಿನಗಳ ಕಾಲ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿ, ಬುದ್ಧನ ವೀಕ್ಷಣೆ ಮಾಡಲು ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಟಿಬೆಟಿಯನ್ ಹೊಸ ವರ್ಷದ ವಾಟರ್ ಟೈಗರ್ ಲೋಸರ್ ಹಬ್ಬದಂದೇ ಲಾಕ್‌ಡೌನ್ ಸಡಿಲಗೊಳಿಸಿ, ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರಿಗೆ ಬುದ್ಧನ ವೀಕ್ಷಣೆ ಮಾಡಲು ಅನುವು ಮಾಡಿಕೊಡಲಾಗಿದೆ.

ಹೊಸ ವಿನ್ಯಾಸದಲ್ಲಿ ಕಂಗೊಳಿಸುತ್ತಿರುವ ಗೋಲ್ಡನ್ ಟೆಂಪಲ್ : ಚಿನ್ನದ ಲೇಪನ ಹೊಂದಿರುವ ಬುದ್ಧನ ಪ್ರತಿಮೆ ಸೇರಿದಂತೆ ಬಗೆಬಗೆಯ ಪ್ರತಿಮೆಗಳಿಗೆ ಹೊಸ ಮಾದರಿಯ ಲೇಪನಗಳನ್ನು ಅಳವಡಿಸಿ, ಗೋಡೆಗಳ ಮೇಲೆ ಬುದ್ಧನಿಗೆ ಸಂಬAಧಿಸಿದ ಹಾಗೂ ಟಿಬೆಟ್ ಮಾದರಿಯ ಚಿತ್ರಗಳನ್ನು ಬಿಡಿಸುವುದರ ಮೂಲಕ ಎಲ್ಲಾ ಕಟ್ಟಡಗಳಿಗೆ ಹೊಸ ಮಾದರಿಯ ಬಣ್ಣ ಗಳನ್ನು ತುಂಬಿ, ಹೊಸ ಅಲಂಕಾರದೊAದಿಗೆ, ಮಧುವಣ ಗಿತ್ತಿಯಂತೆ ಸಿಂಗಾರ ಮಾಡಿದ್ದಾರೆ. ಒಮ್ಮೆ ಭೇಟಿ ನೀಡಿ ಹೋಗುವ ಪ್ರವಾಸಿಗರು ಮತ್ತೊಮ್ಮೆ ಭೇಟಿ ನೀಡುವಂತೆ ಆಕರ್ಷಿಸುತ್ತಿದೆ. ಪ್ರವಾಸಿಗರು ಮನಸೂರೆಗೊಳ್ಳುವಷ್ಟು ಇಲ್ಲಿಯ ಗೋಲ್ಡನ್ ಟೆಂಪಲ್ ಆಡಳಿತ ಮಂಡಳಿಯವರು ಲಾಕ್‌ಡೌನ್ ಸಂದರ್ಭ ಬಳಸಿಕೊಂಡು ಇಲ್ಲಿನ ಬೌದ್ಧ ಭಿಕ್ಷುಗಳು ಎಲ್ಲಾ ರೀತಿಯ ಕೆಲಸಗಳನ್ನು ಮುಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೊರೊನಾ ಹೆಚ್ಚಾದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಮಾಡುವುದಾಗಿ ಸಂಸ್ಥೆಯವರು ತಿಳಿಸಿದ್ದಾರೆ.

Translate »