ವಿದೇಶದಿಂದ ಬಂದ ವ್ಯಕ್ತಿಯ ತಿರುಗಾಟ ಕಂಡು ಬೆಚ್ಚಿದ ಅರಕೆರೆ, ಬೆಸಗರಹಳ್ಳಿಯ ಜನತೆ
ಮಂಡ್ಯ

ವಿದೇಶದಿಂದ ಬಂದ ವ್ಯಕ್ತಿಯ ತಿರುಗಾಟ ಕಂಡು ಬೆಚ್ಚಿದ ಅರಕೆರೆ, ಬೆಸಗರಹಳ್ಳಿಯ ಜನತೆ

March 24, 2020

ಮಂಡ್ಯ,ಮಾ.23(ನಾಗಯ್ಯ)-ಈಗಾ ಗಲೇ ಕೊರೊನಾ ಸೋಂಕು ಹರಡುವಿಕೆ ಯಿಂದ ಭಯಭೀತರಾಗಿರುವ ಜನತೆ ವಿದೇಶ ಭೇಟಿಯ ಬಳಿಕ ಗ್ರಾಮದಲ್ಲಿ ತಿರು ಗಾಡುತ್ತಿದ್ದ ವ್ಯಕ್ತಿಗಳ ಕಂಡು ಬೆಚ್ಚಿ ಬೀಳುತ್ತಿರುವ ನಿದರ್ಶನಗಳು ಜಿಲ್ಲೆಯ ವಿವಿಧೆಡೆ ಕಂಡು ಬಂದಿದೆ.ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಮತ್ತು ಮದ್ದೂರು ತಾಲ್ಲೂಕಿನ ಬೆಸಗರ ಹಳ್ಳಿಯಲ್ಲಿಂದು ಇಂತಹ ಘಟನೆ ನಡೆದಿದೆ.

ಅರಕೆರೆ ಘಟನೆ: ವಿದೇಶಕ್ಕೆ ತೆರಳಿದ್ದ ಅರಕೆರೆಯ ಸುಮಾರು 58 ವರ್ಷದ ವ್ಯಕ್ತಿ 15 ದಿನಗಳ ಹಿಂದೆಯೇ ಮನೆಗೆ ವಾಪ ಸ್ಸಾಗಿದ್ದ, ಸದ್ಯಕ್ಕೆ ಆರೋಗ್ಯವಾಗಿರುವ ಈತ ಇಂದು ಗ್ರಾಮದ ಅಂಗಡಿಗಳ ಬಳಿ ನಿತ್ಯದ ವ್ಯವಹಾರದಲ್ಲಿ ತೊಡಗಿಕೊಂಡು ತಿರುಗಾಡುತ್ತಿದ್ದ, ಮೊದಲೇ ವಿದೇಶದಿಂದ ಬರುವವರಿಂದ ಹರಡುತ್ತಿರುವ ಕೊರೊನಾ ಭೀತಿಯಿಂದ ಕಂಗಾಲಾಗಿರುವ ಜನತೆ ಗ್ರಾಮದೊಳಗೆ ಈತನ ತಿರುಗಾಟವನ್ನು ಕಾಣುತ್ತಿದ್ದಂತೆಯೇ ಬಿಚ್ಚಿಬಿದ್ದಿದ್ದಾರೆ, ಆತ ನಿಂದ ದೂರನಿಲ್ಲುತ್ತಿದ್ದುದಲ್ಲದೆ ಯಾರೂ ಕೂಡ ಹತ್ತಿರ ಹೋಗದಂತೆ ಪುಕಾರು ಹಬ್ಬಿಸಿದ್ದಾರೆ. ಈ ಸುದ್ದಿ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಕಿವಿಗೂ ಬಿದ್ದಿದೆ. ಮೆಕ್ಕಾದಿಂದ ವ್ಯಕ್ತಿಯಿಂದ ಭೀತಿಗೊಂಡಿರುವ ಗ್ರಾಮಸ್ಥರ ಸುದ್ದಿ ತಿಳಿದ ಜಿಲ್ಲಾ ಆರೋಗ್ಯಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಚೇಗೌಡ ನೇತೃತ್ವದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಈ ವೇಳೆ ಆರೋಗ್ಯ ಇಲಾಖಾಧಿಕಾರಿಗಳಿಗೆ ಈತನನ್ನು ಈಗಾ ಗಲೆ ತಪಾಸಣೆಗೊಳಪಡಿಸಿದ್ದ “ಸೋಂಕು ನಿಗಾ’ದಲ್ಲಿರುವವನೆಂಬುದು ಗೊತ್ತಾಗಿದೆ. ಬಳಿಕ ಆತನಿಗೆ ತಿಂಗಳವರೆಗೂ ಹೊರ ಬರದಂತೆ ನೀಡಿರುವ ಸೂಚನೆಯನ್ನು ಉಲ್ಲಂಘಿಸಿರುವುದಕ್ಕೆ ಕಠಿಣ ಕ್ರಮ ಕೈಗೊ ಳ್ಳುವ ಎಚ್ಚರಿಕೆ ನೀಡಿದರು. ಅಲ್ಲದೆ ಸ್ಥಳೀ ಯರಿಗೂ ಆತ ವಿದೇಶಕ್ಕೆ ಭೇಟಿ ನೀಡಿ ಬಂದಿರ ಬಹುದು ಆದರೆ, ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲ, ಸದ್ಯಕ್ಕೆ ಆರೋಗ್ಯವಾ ಗಿದ್ದಾನೆ, ಆತಂಕ ಪಡುವ ಅಗತ್ಯವಿಲ್ಲ ಎಂದು ಅರಿವು ಮೂಡಿಸಿದರು ಎನ್ನಲಾಗಿದೆ.

ಬೆಸಗರಹಳ್ಳಿ ಪ್ರಕರಣ: ಇಂತಹದ್ದೇ ಮತ್ತೊಂದು ಪ್ರಕರಣ ಮದ್ದೂರು ತಾಲ್ಲೂ ಕಿನ ಬೆಸಗರಹಳ್ಳಿಯಲ್ಲಿಯೂ ಕೂಡ ನಡೆದಿದೆ, ಬೆಸಗರಹಳ್ಳಿಯಲ್ಲಿ 65ವರ್ಷದ ಒಬ್ಬ ವ್ಯಕ್ತಿ 20 ದಿನಗಳ ಹಿಂದೆ ವಿದೇಶ ದಿಂದ ವಾಪಸ್ ಬಂದಿದ್ದಾರೆ, ಆದರೆ ಕಳೆದ ವಾರದಿಂದೀಚೆಗೆ ಆನಾರೋಗ್ಯಕ್ಕೆ ತುತ್ತಾಗಿದ್ದರು, ಜ್ವರದಿಂದ ಬಳಲುತ್ತಿದ್ದ ವಿಷಯ ತಿಳಿದ ಸ್ಥಳೀಯರಿಗೆ ಗೊತ್ತಾಗಿದೆ, ಇದು ಇಡೀ ಗ್ರಾಮಕ್ಕೆಲ್ಲಾ ಹರಡಿ ಜನರಲ್ಲಿ ಅನು ಮಾನದ ಕೊರೊನಾ ಭಯ ಶುರುವಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಆರೋಗ್ಯ ಇಲಾಖಾ ಅಧಿಕಾರಿಗಳು ಮತ್ತು ಪೊಲೀಸರು ಪರಿಶೀಲಿಸಿದ್ದಾರೆ, ಅನಾರೋಗ್ಯ ಪೀಡಿತ ಆ ವ್ಯಕ್ತಿಯನ್ನು ಆಂಬುಲೆನ್ಸ್‍ನಲ್ಲಿ ಕರೆತಂದು ಕೊರೊನಾ ಐಸೋಲೇಷನ್‍ನಲ್ಲಿ ತಪಾಸಣೆ ನಡೆಸಿ ದ್ದಾರೆ. ಆದರೆ ಆತನಿಗೆ ಯಾವುದೇ ಕೊರೊನಾ ಸೋಂಕಿಲ್ಲ, ಬದಲಾಗಿ ಯೂರಿನಲ್ ಇನ್ಸ್‍ಪೆಕ್ಷನ್‍ನಿಂದ ಜ್ವರ ಬಂದಿದೆ ಎಂಬುದು ಗೊತ್ತಾಗಿದೆ.ಇದರೊಂದಿಗೆ ವೈದ್ಯರೂ ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

ಆರೋಗ್ಯ ಇಲಾಖೆಗೆ ತಂದಿದೆ ಹೊಸ ತಲೆನೋವು: ಇದುವರೆಗೂ ಕೊರೊನಾ ಹರಡುವಿಕೆಯನ್ನು ತಡೆಯುವ ಮತ್ತು ಚಿಕಿತ್ಸೆ ನೀಡುವ ಕುರಿತು ತಲೆ ಕೆಡಿಸಿ ಕೊಂಡಿದ್ದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಇತ್ತೀಚೆಗೆ ವಿದೇಶದಿಂದ ಬಂದವರಿಗೆಲ್ಲಾ ಕೊರೊನಾ ಸೋಂಕಿದೆಯೆಂದು ಹರಡುತ್ತಿರುವ ವದಂತಿ ಹೊಸ ತಲೆನೋವಾಗಿ ಪರಿಣಮಿ ಸಿದೆ. ಜಿಲ್ಲಾಡಳಿತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಳ್ಳಿಗಳಲ್ಲಿಯೂ ಕೊರೊನಾ ವೈರಸ್ ಬಗ್ಗೆ ಮತ್ತಷ್ಟು ಅರಿವು ಮತ್ತು ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎನ್ನುವುದು ಈ ಘಟನೆಗಳಿಂದ ಗೋಚರಿಸುತ್ತಿದೆ.

ನಿಷೇಧಾಜ್ಞೆ ಬೆನ್ನಲ್ಲೇ ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದ ಜನತೆ: ಕೊರೊನಾ ಸೋಂಕು ಹರಡುವಿಕೆ ತಡೆಗೆ ಮುಂಜಾ ಗೃತಾಕ್ರಮವಾಗಿ ಜಿಲ್ಲಾಧಿಕಾರಿಗಳು 144 ಸೆಕ್ಷನ್ ಜಾರಿಗೊಳಿಸುತ್ತಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಮಂಡ್ಯದ ಜನತೆ ಇಂದು ಸಂಜೆ ಅಗತ್ಯ ವಸ್ತುಗಳ ಖರೀದಿ ಗಾಗಿ ಮೋರ್‍ಗಳು,ಪೇಟೆ ಬೀದಿಗಳಲ್ಲಿನ ಅಂಗಡಿಗಳತ್ತ ಮುಗಿಬೀಳುತ್ತಿದ್ದ ದೃಶ್ಯವೂ ಕಂಡು ಬಂತು.ಪೇಟೆ ಬೀದಿಗಳಲ್ಲಿ ಜನ ಜಂಗುಳಿಯಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಕೂಡ ಆಗಿತ್ತು.

Translate »