ವಿದೇಶದಿಂದ ಬಂದ 16 ವಿದ್ಯಾರ್ಥಿಗಳಿಗೂ ಕೊರೊನಾ ವೈರಸ್ ಇಲ್ಲ
ಮಂಡ್ಯ

ವಿದೇಶದಿಂದ ಬಂದ 16 ವಿದ್ಯಾರ್ಥಿಗಳಿಗೂ ಕೊರೊನಾ ವೈರಸ್ ಇಲ್ಲ

March 24, 2020

ಕೆ.ಆರ್.ಪೇಟೆ,ಮಾ.23-ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿದ್ದ ಕೆ.ಆರ್.ಪೇಟೆ ತಾಲೂಕಿನ 16 ವಿದ್ಯಾರ್ಥಿ ಗಳು ವಾಪಸ್ ಬಂದಿದ್ದು ಇವರನ್ನು ಪರೀಕ್ಷಿಸಲಾಗಿದ್ದು ಯಾರಿಗೂ ಕೊರೊನಾ ಸೊಂಕು ತಗುಲಿರುವುದಿಲ್ಲ. ಎಲ್ಲರಿಗೂ ಅವರವರ ಮನೆಯಲ್ಲಿ ಪ್ರತ್ಯೇಕವಾಗಿ ಸುರಕ್ಷತೆ ಯಲ್ಲಿ (ಕ್ವಾರಂಟೈನ್) ಇರಿಸಲಾಗಿದೆ ಎಂದು ತಹಸೀಲ್ದಾರ್ ಎಂ.ಶಿವಮೂರ್ತಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಕರೆಯಲಾಗಿದ್ದ ತುರ್ತು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಹೊರ ದೇಶಗ ಳಿಂದ ಹಾಗೂ ಸೊಂಕು ಪೀಡಿತ ರಾಜ್ಯ ಗಳಿಂದ ಬಂದವರ ಬಗ್ಗೆ ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಮಾಹಿತಿ ನೀಡ ಬೇಕು. ಮಾಹಿತಿ ನೀಡಿದರೆ ವಲಸೆ ಬಂದ ವರನ್ನು ಕೊರೊನಾ ಪರೀಕ್ಷೆಗೆ ಒಳಪಡಿ ಸಲು ಕ್ರಮ ಕೈಗೊಳ್ಳಲಾಗುವುದು. ಮಾರ್ಚಿ 31 ರವರೆಗೆ ಹೋಟೆಲ್‍ಗಳು, ಬಾರ್ ರೆಸ್ಟೋರೆಂಟ್‍ಗಳು, ಅಂಗಡಿ ಮುಂಗಟ್ಟು ಗಳು ಬಂದ್ ಮಾಡಿ ತಾಲೂಕು ಆಡಳಿತ ದೊಂದಿಗೆ ಸಹಕರಿಸಬೇಕು ಎಂದರು.

ತಾಲೂಕಿನಾಧ್ಯಂತ ಶುಭ ಸಮಾರಂಭ ಗಳು, ವಿವಾಹಗಳು, ಜಾತ್ರೆಗಳು, ಹಬ್ಬಗಳು ಉತ್ಸವಗಳು ಬಂದ್, ಮಾರ್ಚಿ 31ರವ ರೆಗೂ ಔಷಧ ಅಂಗಡಿಗಳು ಹಾಗೂ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಎಲ್ಲಾ ವ್ಯವಹಾರಗಳು ಬಂದ್, ಯುಗಾಧಿ ಹಬ್ಬ ವನ್ನು ತಾವಿರುವಲ್ಲಿಯೇ ಸರಳವಾಗಿ ಆಚ ರಿಸಿ, ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಿ ಎಂದರು. ಕೆ.ಆರ್.ಪೇಟೆ ಯಿಂದ ಮುಂಬೈಗೆ ಹೋಗುವ ಮುಂಬೈ ನಿಂದ ಕೆ.ಆರ್.ಪೇಟೆ ಪಟ್ಟಣಕ್ಕೆ ಬರುವ ಬಸ್ಸುಗಳ ಸಂಚಾರ ಬಂದ್ ಮಾಡ ಲಾಗಿದೆ. ತಾಲ್ಲೂಕಿಗೆ ಹೊಸದಾಗಿ ಬರುವ ವರ ಮೇಲೆ, ಅಪರಿಚಿತರ ಮೇಲೆ ನಿಗಾ ಇಡಲಾಗಿದೆ. ಹೊರದೇಶದಿಂದ ಬಂದಿರು ವವರ ಬಗ್ಗೆ ಸಾರ್ವಜನಿಕರು ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಿ ಕೊರೊನಾ ಸೊಂಕು ಹರಡುವುದನ್ನು ತಡೆಗಟ್ಟಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕೊರೊನೋ ತಡೆಗಟ್ಟಲು ಸಾರ್ವಜನಿಕರ ಸಹಕಾರ ಬಹುಮುಖ್ಯವಾಗಿದೆ. ಸಾರ್ವಜ ನಿಕರ ಸಹಕಾರ ಇಲ್ಲದಿದ್ದರೆ ಸರ್ಕಾರ ಏನೂ ಮಾಡಿದರೂ ಪ್ರಯೋಜ ನವಿಲ್ಲ ದಂತಾಗುತ್ತದೆ. ನಮ್ಮ ಜೀವ ಉಳಿದರೆ ಮುಂದೆ ಏನಾದರೂ ಸಾಧಿಸ ಬಹುದು. ಜೀವವೇ ಉಳಿಯದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಇದನ್ನು ಅರಿತು ಕೊರೊನಾ ಸೋಂಕು ತಡೆಗೆ ಸಹಕಾರ ನೀಡಬೇಕು ಎಂದು ತಹಸೀ ಲ್ದಾರ್ ಅವರು ಮನವಿ ಮಾಡಿದರು.

ಬಲವಂತ ವಸೂಲಿ ಮಾಡಬಾರದು: ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸ್ವಸಹಾಯ ಸಂಘಗಳು ಮಾರ್ಚ್ 31ರವರೆಗೆ ತಮ್ಮ ಸಂಘ-ಸಂಸ್ಥೆಗಳಿಂದ ಪಡೆದ ಸಾಲವನ್ನು ಪಡೆದವರಿಂದ ಬಲವಂತವಾಗಿ ಕಂತು ವಸೂಲಿ ಮಾಡಬಾರದು. ಬಲವಂತ ವಾಗಿ ವಸೂಲಿ ಮಾಡಿದರೆ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ತಹಶೀಲ್ದಾರ್ ಶಿವ ಮೂರ್ತಿ ಅವರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಚ್.ಟಿ.ಹರೀಶ್, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಮತ್ತು ಕಸಬಾ ರಾಜಸ್ವ ನಿರೀಕ್ಷಕಿ ಚಂದ್ರಕಲಾ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Translate »