ನೌಕರರ ಪ್ರತಿಭಟನೆಗೆ ಮಣಿದು ಮಾ.31ರವರೆಗೆ ಗಾರ್ಮೆಂಟ್ಸ್‍ಗೆ ರಜೆ
ಮಂಡ್ಯ

ನೌಕರರ ಪ್ರತಿಭಟನೆಗೆ ಮಣಿದು ಮಾ.31ರವರೆಗೆ ಗಾರ್ಮೆಂಟ್ಸ್‍ಗೆ ರಜೆ

March 24, 2020

ಶ್ರೀರಂಗಪಟ್ಟಣ,ಮಾ.23(ವಿನಯ್ ಕಾರೇಕುರ)-ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಗೆ ಮಣಿದ ಆಡಳಿತ ಮಂಡಳಿ ಮಾ.31ರವರೆಗೆ ರಜೆ ಘೋಷಿಸಿದ ಘಟನೆ ಶ್ರೀರಂಗಪಟ್ಟಣದಿಂದ ವರದಿಯಾಗಿದೆ.ಇಲ್ಲಿನ ಸಾಯಿ ಗಾರ್ಮೆಂಟ್ಸ್‍ನ 700 ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದು, ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ ಭೀತಿ ಉಂಟುಮಾಡಿದ್ದು ಒಂದೇ ಸ್ಥಳದಲ್ಲಿ ನೂರಾರು ಜನ ಕೆಲಸ ನಿರ್ವಹಿಸು ವುದರಿಂದ ಇಂತಹ ಸ್ಥಳಗಳಲ್ಲಿ ಅಧಿಕವಾಗಿ ವೈರಸ್ ಹರಡುವ ಸಾಧ್ಯತೆ ಇದ್ದು ಇಷ್ಟಾಗಿಯೂ ಕೂಡ ಗಾರ್ಮೆಂಟ್ಸ್ ಆಡಳಿತ ಮಂಡಳಿಯು ರಜೆ ನೀಡಲು ಮೀನಮೇಷ ಎಣಿಸುತ್ತಿದೆ ಎಂದು ನೌಕರರು ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು.

ನಂತರ ಸ್ಥಳಕ್ಕೆ ಶ್ರೀರಂಗಪಟ್ಟಣ ಪೆÇಲೀಸರು ಬಂದು ನೌಕರರು ಹಾಗೂ ಆಡಳಿತ ಮಂಡಳಿಯ ಮಧ್ಯೆ ಮಾತುಕತೆ ನಡೆಸಿ ಮಾರ್ಚ್ 31 ರವರೆಗೆ ರಜೆ ಘೋಷಣೆ ಮಾಡಿಸಿದರು. ಈ ವೇಳೆ ಕೊರೊನಾ ವೈರಸ್‍ನಿಂದಾಗಿ ನೀಡುತ್ತಿರುವ ರಜೆಗೆ ವೇತನ ನೀಡಬೇಕೆಂದು ಮಹಿಳಾ ನೌಕರರು ಆಗ್ರಹಿಸಿದರು. ನಂತರ ಮಾತುಕತೆ ನಡೆಸಿ ಚರ್ಚೆ ಬಳಿಕ ರಜಾದಿನ ಗಳದ್ದು ಸೇರಿ ವೇತನ ನೀಡಲು ಗಾರ್ಮೆಂಟ್ಸ್ ಮುಖ್ಯಸ್ಥರು ಒಪ್ಪಿಗೆ ಸೂಚಿಸಿದ ಬಳಿಕ ಗಾರ್ಮೆಂಟ್ಸ್ ನೌಕರರು ಪ್ರತಿಭಟನೆ ಹಿಂಪಡೆದು ತಮ್ಮ ತಮ್ಮಮನೆ ಮನೆಗಳಿಗೆ ಹಿಂದಿರುಗಿದರು.

Translate »