ಡಿಸೆಂಬರ್ ಅಂತ್ಯ ಇಲ್ಲವೇ ವರ್ಷಾರಂಭಕ್ಕೆ ಲಸಿಕೆ ಲಭ್ಯ
ಮೈಸೂರು

ಡಿಸೆಂಬರ್ ಅಂತ್ಯ ಇಲ್ಲವೇ ವರ್ಷಾರಂಭಕ್ಕೆ ಲಸಿಕೆ ಲಭ್ಯ

November 25, 2020

ಬೆಂಗಳೂರು, ನ.24(ಕೆಎಂಶಿ)- ಕೊನೆಗೂ ಆಶಾಕಿರಣ ವೊಂದು ಗೊಚರಿಸುತ್ತಿದೆ. 10 ತಿಂಗಳಿಂದ ದೇಶವನ್ನು ಕಾಡು ತ್ತಿರುವ ಮಾರಣಾಂತಿಕ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಸಿದ್ಧವಾಗುತ್ತಿರುವ ಶುಭ ಸೂಚನೆ ಸಿಕ್ಕಿದೆ.
ಈವರೆಗೆ ಭಾರತದಲ್ಲಿ 1,34,383 ಜೀವಗಳೂ ಸೇರಿ ದಂತೆ ವಿಶ್ವದಲ್ಲಿ ಒಟ್ಟು 14,06,660 ಅಮೂಲ್ಯ ಜೀವ ಗಳನ್ನು ಬಲಿ ಪಡೆದ ಕೊರೊನಾ ಮಹಾ ಮಾರಿಯನ್ನು ಕೊನೆ ಗಾಣಿಸುವ, ಜನರ ಜೀವಗಳನ್ನು ರಕ್ಷಿಸಬಲ್ಲ ಲಸಿಕೆ ಡಿಸೆಂಬರ್ ಕೊನೆಗೆ ಇಲ್ಲವೇ ಮುಂದಿನ ವರ್ಷದ ಆರಂಭದಲ್ಲಿ ಲಭ್ಯವಾಗಲಿದೆ. ದೇಶದ ಎಲ್ಲರಿಗೂ ಕೊರೊನಾ ಲಸಿಕೆ ಸಿಗಲಿದೆ. ಇಂಥದೊಂದು ಮಹತ್ವದ ಸುಳಿವನ್ನು ಕೇಂದ್ರ ಸರ್ಕಾರ ಮಂಗಳವಾರ ಹೊರಗೆಡವಿದೆ.

ಕೊರೊನಾದಿಂದ ಬಹಳವಾಗಿ ಸಂಕಷ್ಟಕ್ಕೀಡಾಗಿರುವ ಕರ್ನಾಟಕ ಸೇರಿದಂತೆ 8 ರಾಜ್ಯಗಳ ಮುಖ್ಯಮಂತ್ರಿ ಗಳ ಜತೆ ಪ್ರಧಾನಿ ನರೇಂದ್ರ ಮೋದಿ ಇಂದು ಆನ್‍ಲೈನ್ ಸಂವಾದ ನಡೆಸಿದರು. ಆ ಸಂದರ್ಭ ಲಸಿಕೆ ಯಾವುದೇ ಹಂತದಲ್ಲಿ ಬರಲಿದೆ ಎಂದು ಹೇಳಿದ್ದಾರೆ. `ಲಸಿಕೆ ಸಂಗ್ರಹಕ್ಕೆ ಹಾಗೂ ವಿತರಣೆಗೆ ಪೂರ್ವ ಸಿದ್ಧತೆ ಮಾಡಿ ಕೊಳ್ಳಿ ಮತ್ತು ಅದನ್ನು ಯಾರಿಗೆ ನೀಡಬೇಕೆಂಬ ಬಗೆಗೂ ಆದ್ಯತಾ ಪಟ್ಟಿ ಸಿದ್ಧಪಡಿಸಿ, ಕೇಂದ್ರ ಆರೋಗ್ಯ ಮಂತ್ರಾ ಲಯಕ್ಕೆ ಕಳುಹಿಸಿಕೊಡಿ’ ಎಂದು ನಿರ್ದೇಶನ ನೀಡಿದ್ದಾರೆ. ಒಂದು ವೇಳೆ ಮುನ್ನೆಚ್ಚರಿಕಾ ಕ್ರಮ

ಕೈಗೊಳ್ಳದಿದ್ದರೆ, ಮಾರುಕಟ್ಟೆಯಲ್ಲಿ ಲಸಿಕೆಗಾಗಿ ಜನರು ನೂಕುನುಗ್ಗಲು ಉಂಟಾಗಿ ಶಾಂತಿ ಸುವ್ಯವಸ್ಥೆ ಹದಗೆಡುವ ಅಪಾಯವಿದೆ. ಇದನ್ನು ತಪ್ಪಿಸುವ ಉದ್ದೇಶದಿಂದಲೇ, `ಮೊದಲು ಎಷ್ಟು ಉತ್ಪಾದನೆಯಾಗುತ್ತದೆ. ರಾಷ್ಟ್ರದ ಎಲ್ಲಾ ಪ್ರಜೆಗಳಿಗೆ ಎಷ್ಟು ಸಮಯದಲ್ಲಿ ಲಸಿಕೆ ದೊರೆಯಬಹುದು’ ಎಂಬ ಮಾಹಿತಿಯನ್ನು ಜನರಿಗೆ ನೀಡಿದರೆ ಗೊಂದಲ, ನೂಕುನುಗ್ಗಲು ತಪ್ಪಿಸಬಹುದಾಗಿದೆ ಎಂದು ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ. ಉನ್ನತ ಮೂಲಗಳ ಪ್ರಕಾರ ಈಗಾಗಲೇ ಲಸಿಕೆ ಸಿದ್ಧಗೊಂಡಿದೆ. ಪ್ರಾಯೋಗಿಕ ಹಂತಗಳೆಲ್ಲಾ ಮುಗಿದಿದ್ದು, ಉತ್ಪಾದನೆಗೆ ಕಳುಹಿಸುವುದಷ್ಟೇ ಬಾಕಿ. ಲಸಿಕೆಗಳು ಬಂದಾಗ ಅವನ್ನು ಸಂಗ್ರಹಿಸಿಡಲು ಅಗತ್ಯ ಸಂಖ್ಯೆಯಷ್ಟು ಶೀತಲ ಕೇಂದ್ರಗಳನ್ನು ಸಿದ್ಧಪಡಿಸಿಟ್ಟುಕೊಳ್ಳ ಬೇಕು. ಉತ್ಪಾದನೆಗೊಂಡಿದ್ದರಲ್ಲಿ ಶೇ.50ರಷ್ಟು ಲಸಿಕೆಗಳನ್ನು ಬೇರೆ ರಾಷ್ಟ್ರಗಳಿಗೆ ಸರ್ಕಾರ ನೀಡಲಿದೆ. ಉಳಿದ ಭಾಗವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡಲಾಗು ವುದು. ಇದರಿಂದ ನೂಕುನುಗ್ಗಲು ಮತ್ತು ಗೊಂದಲ ನಿವಾರಣೆಯಾಗುತ್ತದೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ನೀಡಿ, ಲಸಿಕೆಯನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಿದೆ.

ಲಸಿಕೆ ಸಮರ್ಪಕ ವಿತರಣೆಗೆ ಸಜ್ಜಾಗಿ: ರಾಜ್ಯಗಳಿಗೆ ಪ್ರಧಾನಿ ಸೂಚನೆ
ಬೆಂಗಳೂರು, ನ.24(ಕೆಎಂಶಿ)-ಕೊರೊನಾ ವಿರುದ್ಧದ ಹೋರಾಟಕ್ಕೆ ಅತ್ಯಗತ್ಯವಾದ ಲಸಿಕೆ ಸಿದ್ಧವಾಗಿ ಬಂದಾಗ ಅದನ್ನು ಬಲು ವ್ಯವಸ್ಥಿತವಾಗಿ ಸಂಗ್ರಹಿಸಿಡಲು ಮತ್ತು ಸಮರ್ಪಕ ರೀತಿ ವಿತರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸೋಂಕು ಹೆಚ್ಚಾಗಿರುವ 8 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿಯವರು ರಾಜ್ಯಕ್ಕೆ ಸಂಬಂಧಿಸಿದಂತೆ ಲಸಿಕೆ ನೀಡಲು ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು. 30 ಕೋಟಿ ಜನರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಕೊರೊನಾ ವಾರಿಯರ್ಸ್ ಮತ್ತು 50 ವರ್ಷ ದಾಟಿದವರು, ಗಂಭೀರ ಕಾಯಿಲೆ ಇರುವಂತಹ 26 ಕೋಟಿ ಜನರಿಗೆ ಲಸಿಕೆ ನೀಡ ಲಾಗುವುದು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ತಕ್ಷಣವೇ ಸಂಚಲನಾ ಸಮಿತಿ ರಚಿಸಿ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಪಡೆ ರಚಿಸಬೇಕು. ಬ್ಲಾಕ್ ಮಟ್ಟದಲ್ಲಿ ವ್ಯವಸ್ಥೆ ಮಾಡಬೇಕು. ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂ ಸೇವಕರಿಗೆ ತರಬೇತಿ ನೀಡಬೇಕು ಎಂದಿದ್ದಾರೆ. ಪ್ರಧಾನಿ ನೀಡಿದ ಸಲಹೆಗಳನ್ನು ಸಭೆ ನಂತರ ಸುದ್ದಿ ಗೋಷ್ಠಿಯಲ್ಲಿ ವಿವರಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರಧಾನಿ ತಿಳಿಸಿದ್ದಾರೆ. ಒಬ್ಬ ವ್ಯಕ್ತಿಗೆ ಎರಡರಿಂದ ಮೂರು ಡೋಸ್ ಲಸಿಕೆ ನೀಡಬೇಕಾಗಬಹುದು. ಲಸಿಕೆ ನೀಡಿದ್ದರ ಸಮಗ್ರ ಮಾಹಿತಿಯನ್ನು ಡಿಜಿಟಲ್ ವೇದಿಕೆಯಲ್ಲಿ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಡ್ ಲಸಿಕೆ ತಯಾರಿಸಲು ಐಸಿಎಂಆರ್ ಅನುಮತಿಯೊಂದಿಗೆ ಭಾರತ್ ಬಯೋಟೆಕ್ ಆಕ್ಸ್‍ಫರ್ಡ್ ಜೆನಿಟೆಕ್ ಸೇರಿದಂತೆ ವಿವಿಧ ಕಂಪನಿಗಳು ಮುಂದೆ ಬಂದಿವೆ. ಭಾರತದಲ್ಲಿ 3 ಹಂತದಲ್ಲಿ ಅಂದರೆ, ಅಡ್ವಾನ್ಸಡ್, ಪ್ರೈಮರಿ ಹಾಗೂ ಎಕ್ಸ್ಸ್‍ಪೆರಿಮೆಂಟಲ್(ಪ್ರ್ರಾಯೋಗಿಕ) ಹಂತಗಳಲ್ಲಿ ಲಸಿಕೆಯ ಸಂಶೋಧನೆ ನಡೆದಿದೆ. ಹಂತ ಹಂತವಾಗಿ ಲಸಿಕೆಯ ಪ್ರಯೋಗ ನಡೆದಿದೆ. ಅಂತಿಮವಾಗಿ ಯಾವ ಲಸಿಕೆ ಯಶಸ್ವಿಯಾಗುವುದೋ ಅದನ್ನೇ ಬಳಸುವ ಸಾಧ್ಯತೆ ಇದೆ ಎಂದರು. ಮಹಾರಾಷ್ಟ್ರ, ಪಶ್ಟಿಮ ಬಂಗಾಳ, ಗುಜರಾತ್, ರಾಜಸ್ಥಾನ, ಛತ್ತೀಸ್‍ಗಡ, ಹರಿಯಾಣ, ಕೇರಳ, ದೆಹಲಿ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತಿತರರು ಆನ್‍ಲೈನ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪಾಸಿಟಿವ್ ಪ್ರಮಾಣ ಶೇ.5ಕ್ಕಿಂತ ಕೆಳಕ್ಕಿಳಿಸಿ: ಕೊರೊನಾ ವೈರಸ್ ಚೇತರಿಕೆ ಮತ್ತು ಮರಣ ಪ್ರಮಾಣ ದರದಲ್ಲಿ ಇತರ ರಾಷ್ಟ್ರಗಳಿಗಿಂತ ಭಾರತದ ಪರಿಸ್ಥಿತಿ ಉತ್ತಮವಾಗಿದೆ. ಆದರೆ, ಪಾಸಿಟಿವ್ ಪ್ರಮಾಣವನ್ನು ಶೇ.5ಕ್ಕಿಂತಲೂ ಕಡಿಮೆ ಮಟ್ಟಕ್ಕೆ ಇಳಿಸಬೇಕಿದೆ. ಮರಣ ಪ್ರಮಾಣವನ್ನು ಶೇ.1ಕ್ಕಿಂತಲೂ ಕಡಿಮೆ ಮಾಡಬೇಕಾಗಿದೆ. ಅದಕ್ಕಾಗಿ ಆರ್‍ಟಿ-ಪಿಸಿಆರ್ ಟೆಸ್ಟ್ ಪ್ರಮಾಣ ಹೆಚ್ಚಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪರಿಸ್ಥಿತಿ ಹದಗೆಡುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಮಾತನಾಡಿದ್ದು, ಪ್ರಸ್ತುತ ಪರಿಸ್ಥಿತಿ ಹಾಗೂ ಲಸಿಕೆ ವಿತರಣೆಗೆ ಪೂರ್ವ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಾಗಿದೆ. ಇದೀಗ ಸ್ಪಷ್ಟ ಚಿತ್ರಣ ದೊರೆತಿದೆ. ಜಂಟಿ ಪ್ರಯತ್ನದ ಫಲವಾಗಿ ಚೇತರಿಕೆ ಹಾಗೂ ಮರಣ ಪ್ರಮಾಣದಲ್ಲಿ ಅನ್ಯ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಗಳೊಂದಿಗಿನ ಸಭೆಯಲ್ಲಿ ಪ್ರಧಾನಿ ಸಂತೃಪ್ತಿ ವ್ಯಕ್ತಪಡಿಸಿದರು.

ದೇಶವು ಸಾಕಷ್ಟು ಮಾಹಿತಿ ಹೊಂದಿದೆ, ಕೋವಿಡ್ ನಿರ್ವಹಣೆಯಲ್ಲಿ ವ್ಯಾಪಕ ಅನುಭವವನ್ನೂ ಹೊಂದಿದೆ. ಕಾರ್ಯತಂತ್ರವನ್ನು ರೂಪಿಸುವಾಗ ಪಾಸಿಟಿವಿಟಿ ದರವನ್ನು ಶೇ.5 ಮತ್ತು ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ನಿರ್ಮಿಸಲು ರಾಜ್ಯಗಳು ಕೆಲಸ ಪ್ರಾರಂಭಿಸಬೇಕು ಎಂದು ನಿರ್ದೇಶನ ನೀಡಿದರು. ಸುರಕ್ಷತೆಯು ನಮಗೆ ಪ್ರಮುಖ ವಾಗಿದೆ. ಲಭ್ಯವಾಗುವ ಲಸಿಕೆಗಳನ್ನು ಎಲ್ಲಾ ವೈದ್ಯಕೀಯ ಗುಣಮಟ್ಟದೊಂದಿಗೆ ಸುರಕ್ಷಿತವಾಗಿ ನಾಗರಿಕರಿಗೆ ನೀಡಲಾಗುವುದು, ಸಮನ್ವಯತೆಯೊಂದಿಗೆ ಲಸಿಕೆ ಹಂಚಿಕೆ ಕಾರ್ಯತಂತ್ರ ಕುರಿತಂತೆ ರಾಜ್ಯಗಳೊಂದಿಗೆ ಚರ್ಚಿಸಲಾಗುವುದು, ಆರ್ ಟಿ- ಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸಿ ಐಸೋಲೇಷನ್ ನಲ್ಲಿರುವ ರೋಗಿಗಳ ಮೇಲೆ ನಿಗಾ ವಹಿಸಬೇಕಾಗಿದೆ ಎಂದು ಹೇಳಿದ ಪ್ರಧಾನಿ, ಕೋವಿಡ್-19 ಕಾರ್ಯತಂತ್ರದ ಬಗ್ಗೆ ಪತ್ರದ ಮುಖೇನ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ಎಂದರು.

ಚುನಾವಣೆ ಕಾರ್ಯಶೈಲಿಯಲ್ಲೇ ಲಸಿಕೆ ವಿತರಣೆಗೂ ಸಿದ್ಧರಾಗಬೇಕು: ಲಸಿಕೆ ವಿತರಣೆ ಎಂಬುದು ಅತಿದೊಡ್ಡ ಪ್ರಕ್ರಿಯೆಯಾಗಿದ್ದು, ಚುನಾವಣೆ ಮಾದರಿಯಲ್ಲಿ ಅದಕ್ಕೆ ಸಜ್ಜಾಗಿರಬೇಕು ಎಂದು ಸಲಹೆ ನೀಡಿದರು. ಯಾವುದೇ ಸಂದರ್ಭ ಲಸಿಕೆ ಸಿದ್ಧವಾಗಿ ಬರಲಿದೆ. ಅದರ ವಿತರಣೆಗೆ ಸಮರೋಪಾದಿಯಲ್ಲಿ ಸಜ್ಜಾಗಿರಬೇಕು. ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ವಿತರಣೆಗೆ ರೂಪಿಸಿರುವ ನಿಯಮಗಳ ಪ್ರಕಾರ ತಯಾರಿ ಮಾಡಿ ಕೊಳ್ಳಬೇಕು ಎಂದು ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದಾರೆ.

ಹಬ್ಬಗಳ ಸಾಲು ಮುಗಿಯುತ್ತಿದ್ದಂತೆ ದೇಶದ ಅನೇಕ ಭಾಗಗಳಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದೆ. ಕೋವಿಡ್ 2-3ನೇ ಅಲೆಗೆ ದೆಹಲಿ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ ಸೇರಿದಂತೆ 8 ರಾಜ್ಯಗಳು ತತ್ತರಿಸಿವೆ. ಈ ರಾಜ್ಯಗಳಲ್ಲಿ ನಿಯಂತ್ರಣಕ್ಕೆ ಬಂದಿದ್ದ ಸೋಂಕು ಒಮ್ಮೆಲೆ ಹೆಚ್ಚಾದ ಹಿನ್ನೆಲೆ ಕೇಂದ್ರ ಸರ್ಕಾರ ಕೂಡ ಕಳವಳಗೊಂಡಿದೆ. ಈ ಕುರಿತು ಕರ್ನಾಟಕ, ಮಹಾರಾಷ್ಟ್ರ, ಕೇರಳ, ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ರಾಜಸ್ಥಾನದ ಮುಖ್ಯಮಂತ್ರಿಗಳು, ಚತ್ತೀಸ್‍ಘಡ ಲೆಫ್ಟಿನೆಂಟ್ ಗವರ್ನರ್ ಜೊತೆ ಸಭೆ ನಡೆಸಿದ ಪ್ರಧಾನಿ ಈ ರಾಜ್ಯಗಳಲ್ಲಿನ ಸದ್ಯದ ಪರಿಸ್ಥಿತಿ ಅವಲೋಕಿಸಿದರು.

 

 

 

Translate »