ಉದಯಗಿರಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ವಿತರಣೆ
ಮೈಸೂರು

ಉದಯಗಿರಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ವಿತರಣೆ

December 1, 2020

ಮೈಸೂರು, ನ.30(ಆರ್‍ಕೆ)- ಉದಯಗಿರಿಯ ನೋಬೆಲ್ ಫಂಕ್ಷನ್ ಹಾಲ್‍ನಲ್ಲಿ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 7, 8 ಮತ್ತು 9ರ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ವಿತರಿಸಲಾಯಿತು. ಉಪ ಮೇಯರ್ ಶ್ರೀಧರ್ ಅವರು ಫಲಾನುಭವಿಗಳಿಗೆ ಸಾಲ ಸೌಲಭ್ಯ ಪಡೆಯಲು ಪೂರಕ ದಾಖಲಾತಿ ಗಳನ್ನು ವಿತರಿಸಿದರು. 1,800 ಮಂದಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದು, ಆನ್‍ಲೈನ್ ಮೂಲಕವೂ ಅರ್ಹತಾ ಪತ್ರಗಳನ್ನು ದೃಡೀಕರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಪೊರೇಟರ್‍ಗಳಾದ ಶಫಿ ಅಹಮದ್, ಸತ್ಯರಾಜ್, ಮಾಜಿ ಕಾರ್ಪೊರೇಟರ್ ಶೌಖತ್ ಪಾಷಾ, ಪಾಲಿಕೆ ಹೆಚ್ಚುವರಿ ಆಯುಕ್ತ ಎಂ.ಎನ್.ಶಶಿಧರ, ವಲಯಾಧಿಕಾರಿ ಗಳಾದ ಮುರಳೀಧರ, ಕುಬೇರಪ್ಪ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

 

Translate »